ಖಾದರ್ ಮನವಿಗೆ ಸ್ಪಂದಿಸಿದ ಸರಕಾರ – ದ.ಕ ಜಿಲ್ಲೆಗೆ 25 ಸಾವಿರ ಕ್ವಿಂಟಲ್ ಕುಚ್ಚಲಕ್ಕಿ ಬಿಡುಗಡೆ

Spread the love

ಖಾದರ್ ಮನವಿಗೆ ಸ್ಪಂದಿಸಿದ ಸರಕಾರ – ದ.ಕ ಜಿಲ್ಲೆಗೆ 25 ಸಾವಿರ ಕ್ವಿಂಟಲ್ ಕುಚ್ಚಲಕ್ಕಿ ಬಿಡುಗಡೆ

ಮಂಗಳೂರು: ರಾಜ್ಯದಾದ್ಯಂತ ಲಾಕ್ ಡೌನ್ ಆದ ಸಂದರ್ಭದಲ್ಲಿ ಸರ್ಕಾರ ಎಪ್ರಿಲ್ ಮೊದಲ ವಾರದಂದು ರಾಜ್ಯದ ಪಡಿತರ ಚೀಟಿದಾರರಿಗೆ ಎರಡು ರೇಷನ್ ವಿತರಿಸುವ ಯೋಜನೆ ಹಮ್ಮಿಕೊಂಡಿತ್ತು.

ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೂಡಾ ಪಡಿತರ ವಿತರಣೆ ಪ್ರಾರಂಭಿಸಿತ್ತು.ಈ ಸಂದರ್ಭದಲ್ಲಿ ತಲಪಾಡಿ ಪಡಿತರ ಕೇಂದ್ರದಿಂದ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ರವರಿಗೆ ಅಲ್ಲಿನ ನಾಗರಿಕರು ಕರೆ ಮಾಡಿ ನಮಗೆ ಅನ್ನ ತಯಾರಿಸುವ ಅಕ್ಕಿ ನೀಡದೆ ಬಿಳಿ ಅಕ್ಕಿ ನೀಡಿ ಏನು ಪ್ರಯೋಜನ ಅಂಥ ಶಾಸಕರಿಗೆ ಅಹವಾಲು ಸಲ್ಲಿಸಿದ್ದರು.ತಕ್ಷಣ ಯು.ಟಿ.ಖಾದರ್ ಪಡಿತರ ಕೇಂದ್ರಕ್ಕೆ ಭೇಟಿ ನೀಡಿ ಪಡಿತರ ಬಿಳಿ ಅಕ್ಕಿ ವಿತರಸಿದಂತೆ ತಾಕೀತು ನೀಡಿದ್ದರು.

ನಂತರ FCI ಶಿವಮೊಗ್ಗ (Food Corporation of India) ಹಾಗೂ ಆಹಾರ ಸಚಿವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದ ಯು.ಟಿ.ಖಾದರ್ ತಾನು ಆಹಾರ ಸಚಿವನಾಗಿದ್ದಾಗ ಜಿಲ್ಲೆಗೆ ಕುಚ್ಚಲಕ್ಕಿ ಬಿಡುಗಡೆ ಮಾಡಿದ್ದನ್ನು ನೆನಪಿಸಿದ್ದರು.ಸಚಿವಾಲಯದಿಂದ

ಕುಚ್ಚಲಕ್ಕಿ ಲಕ್ಷದ್ವೀಪಕ್ಕೆ ರವಾನೆಯಾಗುತ್ತಿದೆ ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ವಿತರಿಸಲು ಕಷ್ಟವಾಗುತ್ತಿದೆಯೆಂಬ ಮಾಹಿತಿ ಬಂದಿತ್ತು.ತಕ್ಷಣ ಯು.ಟಿ.ಖಾದರ್ ಲಕ್ಷದ್ವೀಪಕ್ಕೆ ರವಾನೆಯಾಗುವ ಗೋಡೌನ್ ಗೆ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ವೀಪಕ್ಕೆ ಕಳುಹಿಸಿ ಉಳಿದ ನಂತರ ನಮ್ಮ ಜಿಲ್ಲೆಗೆ ಕಳುಹಿಸಬೇಕೆಂದು ಆಹಾರ ಸಚಿವಲಾಯಕ್ಕೆ ಒತ್ತಾಯಿಸಿದ್ದರು.

ಇದೀಗ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ರವರ ಮನವಿಯಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 25 ಸಾವಿರ ಕ್ವಿಂಟಾಲ್ ಕುಚ್ಚಲಕ್ಕಿ ಸರಕಾರ ಬಿಡುಗಡೆ ಮಾಡಿದೆ.ಬರುವ ಮೇ ತಿಂಗಳಲ್ಲಿ ವಿತರಣೆಯಾಗಲಿದೆ.


Spread the love