Home Mangalorean News Kannada News ಖಾರ್ ದಾಂಡದ ಸೈಂಟ್ ವಿನ್ಸೆಂಟ್ ದೆ ಪಾವ್ಲ್ ಚರ್ಚ್‍ನಲ್ಲಿ ಶುಭಗುರುವಾರ

ಖಾರ್ ದಾಂಡದ ಸೈಂಟ್ ವಿನ್ಸೆಂಟ್ ದೆ ಪಾವ್ಲ್ ಚರ್ಚ್‍ನಲ್ಲಿ ಶುಭಗುರುವಾರ

Spread the love

ಖಾರ್ ದಾಂಡದ ಸೈಂಟ್ ವಿನ್ಸೆಂಟ್ ದೆ ಪಾವ್ಲ್ ಚರ್ಚ್‍ನಲ್ಲಿ ಶುಭಗುರುವಾರ

ಮುಂಬಯಿ : ಯೇಸು ಕ್ರಿಸ್ತರು ಶಿಲುಬೆಯಲ್ಲಿ ಪ್ರಾಣತ್ಯಾಗಗೈಯುವ ಮುನ್ನ `ಪಾಪ ತೊಳೆಯುವ’ ಸಂಕೇತವಾಗಿ ತನ್ನ ಹನ್ನೆರಡು ಪರಮ ಶಿಷ್ಯರ ಪಾದಗಳನ್ನು ತೊಳೆದು ಶುದ್ಧಿಕರಿಸಿ ಸನ್ನಿವೇಶವನ್ನು ಗುಡ್‍ಫ್ರೈಡೇ ಮುನ್ನ ದಿನವಾದ ಇಂದು ಶುಭ ಗುರುವಾರ (ಮೊಂಡಿ ಥರ್ಸ್‍ಡೇ) ಕ್ರೈಸ್ತ ಜನತೆ ತಮ್ಮ ಇಗರ್ಜಿಗಳಲ್ಲಿ ಧಾರ್ಮಿಕವಾಗಿ ಆಚರಿಸಿದರು.

ಮಂಗಳೂರು ಮೂಲದ ಮುಂಬಯಿ ಧರ್ಮ ಪ್ರಾಂತ್ಯದ ಬಿಶಪ್ ಡಾ| ರೆ| ಪರ್ಸಿವಲ್ ಜೆ. ಇ ಫೆರ್ನಾಂಡಿಸ್ ಅವರು ಖಾರ್ ಪಶ್ಚಿಮದ ಖಾರ್ ದಾಂಡದಲ್ಲಿನ ಸೈಂಟ್ ವಿನ್ಸೆಂಟ್ ದೆ ಪಾವ್ಲ್ ಇಗರ್ಜಿಯ ಅನಭಿಜ್ಞ ಜನರ (ಶಿಷ್ಯರ) ಪಾದಗಳನ್ನು ತೊಳೆದು ಪ್ರಾರ್ಥನೆ ನೇರವೇರಿಸಿದರು.

ಪರಸ್ಪರ ಪ್ರೀತಿಯ ಪರಮಾವಧಿಯನ್ನು ತೋರುವ ಹಾಗೂ ವಿಶ್ವಸ್ಥರಾಗಿ ಬಾಳುವುದನ್ನು ತಿಳಿಪಡಿಸುವ ಸಂದೇಶದಂತೆ ಯೇಸುಸ್ವಾಮಿಯು ತಮ್ಮ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡು ಒಂದು ಬೋಗುಣಿಯಲ್ಲಿ ನೀರು ಸುರಿದು ತಮ್ಮ ಶಿಷ್ಯರ ಕಾಲುಗಳನ್ನು ತೊಳೆದರು. ನಾನು ನಿಮ್ಮ ಕಾಲುಗಳನ್ನು ತೊಳೆದಂತೆ ನೀವುಕೂಡಾ ಇನ್ನೊಬ್ಬರ ಪಾದಗಳನ್ನು ತೊಳೆದು ಆದರ್ಶರಾಗಬೇಕು ಎಂಬುವುದನ್ನು ನೆರೆದ ಭಕ್ತರಿಗೆ ಬಿಶಪ್ ಪರ್ಸಿವಲ್ ಬೋಧಿಸಿದರು.

ಈ ಸಂದರ್ಭದಲ್ಲಿ ಚರ್ಚ್‍ನ ಪ್ರಧಾನ ಗುರು ರೆ| ಫಾ| ಮಿಲ್ಟನ್ ಗೊನ್ಸಾಲಿಸ್, ಸಹಾಯ ಗುರು ಫಾ| ವಿನಯ್ ರೊಡ್ರಿಗಾಸ್ ಮತ್ತು ಫಾ| ಝೇವಿಯರ್ ಪಿಂಟೊ ಮತ್ತಿತರರು ಪೂಜಾವಿಧಿಗಳಲ್ಲಿ ಪಾಲ್ಗೊಂಡರು


Spread the love

Exit mobile version