ಖಾಸಗಿ ಆಸ್ಪತ್ರೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು:ನಗರದ ಖಾಸಗಿ ಆಸ್ಪತ್ರೆಯ ಬಾತ್ ರೂಮಿನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಪುತ್ತೂರಿನ ಪರಪುಂಜ ನಿವಾಸಿ ಮಹಮ್ಮದ್ ಷರೀಫ್ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯ ಸಹೋದರ ಹೇಳುವ ಪ್ರಕಾರ ಕೆಲವು ದಿನಗಳ ಹಿಂದೆ ಷರೀಫ್ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮನೆಯವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ, ಶನಿವಾರ ಆಸ್ಪತ್ರೆಯಿಂದ ದೂರವಾಣಿ ಕರೆ ಬಂದಿದ್ದು, ಷರೀಫ್ ಅವರಿಗೆ ಅಫಘಾತವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ನೀಡಿದ್ದು, ಅದರಂತೆ ಆಸ್ಪತ್ರೆಗೆ ಬಂದು ನೋಡಿದರೆ ಆಸ್ಪತ್ರಯ ಆಡಳಿತ ಮಂಡಳಿ ಶರೀರವನ್ನು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದರು. ವೆನ್ಲಾಕ್ ಆಸ್ಪತ್ರೆಗೆ ಬಂದು ನೋಡಿದರೆ ನನ್ನ ಸಹೋದರನ ಶರೀರವನ್ನು ಅದಾಗಲೇ ಶವಾಗಾರದಲ್ಲಿ ಇರಿಸಲಾಗಿತ್ತು. ನಮ್ಮ ಸಹೋದರನ ಸಾವಿನ ಕುರಿತು ಸಂಶಯವಿದೆ ಎಂದರು.
ಷರೀಫ್ ಸಾವಿನ ಕುರಿತು ಸೂಕ್ತ ತನಿಖೆಗೆ ಕುಟುಂಬ ವರ್ಗದವರು ಆಗ್ರಹಿಸಿದ್ದಾರೆ.