Home Mangalorean News Kannada News ಖುರೇಶಿ ಪ್ರಕರಣ: ಪೋಲಿಸ್ ಅಧಿಕಾರಿಗಳ ಅಮಾನತಿಗೆ ಇಮಾಮ್ ಕೌನ್ಸಿಲ್ ಆಗ್ರಹ

ಖುರೇಶಿ ಪ್ರಕರಣ: ಪೋಲಿಸ್ ಅಧಿಕಾರಿಗಳ ಅಮಾನತಿಗೆ ಇಮಾಮ್ ಕೌನ್ಸಿಲ್ ಆಗ್ರಹ

Spread the love

ಖುರೇಶಿ ಪ್ರಕರಣ: ಪೋಲಿಸ್ ಅಧಿಕಾರಿಗಳ ಅಮಾನತಿಗೆ ಇಮಾಮ್ ಕೌನ್ಸಿಲ್ ಆಗ್ರಹ

ಮಂಗಳೂರು: ಅಹ್ಮದ್ ಖುರೇಷಿ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಸಿಸಿಬಿ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಷ್ ಪೆಕ್ಟರ್ ಸೇರಿದಂತೆ ತಪ್ಪಿತಸ್ಥ ಪೊಲೀಸ್ ಸಿಬಂದಿಯನ್ನು ಅಮಾನತುಗೊಳಿಸಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುಂತೆ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ನಿಯೋಗವು ನಗರ ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.

ಅಮಾಯಕ ಯುವಕ ಅಹ್ಮದ್ ಖುರೇಷ್ ಎಂಬಾತನನ್ನು ಪೋಲೀಸರು ಅಕ್ರಮವಾಗಿ ಬಂಧಿಸಿ ಅವರ ಮೇಲೆ ಮಾರಣಾಂತಿಕ ದೌರ್ಜನ್ಯ ಎಸಗಿದ್ದ ಘಟನೆಯನ್ನು ಖಂಡಿಸಿ ಮತ್ತು ತಪ್ಪಿತಸ್ಥ ಪೋಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಸ್ಲಿಮ್ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಪೋಲೀಸರು ವಿನಾ ಕಾರಣ ಲಾಠಿ ಚಾರ್ಜ್ ನಡೆಸಿ ಅವರನ್ನು ಅಕ್ರಮವಾಗಿ ಬಂಧಿಸಿರುವುದು ಖಂಡನೀಯವಾಗಿದೆ. ಇದು ನಾಗರಿಕರ ಪ್ರತಿಭಟಿಸುವ ಹಕ್ಕು, ನ್ಯಾಯದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವೂ ಆಗಿದೆ. ಮಂಗಳೂರು ಸಿಸಿಬಿ ಪೋಲೀಸರು ವಿಚಾರಣೆಯ ನೆಪದಲ್ಲಿ ಖುರೇಷ್‍ನನ್ನು ಅಕ್ರಮವಾಗಿ ಬಂಧಿಸಿ ಬಳಿಕ ಆತನಿಗೆ ಮಾರ್ಚ್ 21ರಿಂದ ಮಾರ್ಚ್ 27ರ ವರೆಗೆ ಸತತ 7 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ನಿರಂತರವಾಗಿ ಚಿತ್ರಹಿಂಸೆ ನೀಡಿದ್ದಾರೆ. ಪೋಲೀಸರ ಅಮಾನವೀಯ ಚಿತ್ರಹಿಂಸೆಯಿಂದಾಗಿ ಖುರೇಷ್‍ನ ಕಿಡ್ನಿಯೂ ವೈಫಲ್ಯಕ್ಕೊಳಗಾಗಿದೆ ಎಂಬ ಮಾಹಿತಿಯೂ ಆ ನಂತರದ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಿಡ್ನಿ ವೈಫಲ್ಯವಾಗಿರುವ ಬಗ್ಗೆ ವೈದ್ಯಾಧಿಕಾರಿಯವರು ಘೋಷಿಸಿದ ಬಳಿಕ ದಿನಾಂಕ 2-4-2017ರಂದು ಆತನಿಗೆ ಡಯಾಲಿಸೀಸ್ ಚಿಕಿತ್ಸೆ ನೀಡಲಾಗಿದೆ. ಇದೀಗ ಆತ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಧನದ ಬಳಿಕ ಸಿಸಿಬಿ ಇನ್ಸ್‍ಪೆಕ್ಟರ್ ಮತ್ತು ಸಬ್‍ಇನ್ಸ್‍ಪೆಕ್ಟರ್‍ರವರ ಸಮ್ಮುಖದಲ್ಲಿಯೇ ಪೋಲೀಸ್ ಸಿಬ್ಬಂದಿಗಳು ತನಗೆ ದೈಹಿಕ ಹಿಂಸೆ ನೀಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿ ತೀವ್ರ ರೀತಿಯಲ್ಲಿ ಹಿಂಸಿಸಿದ್ದಾರೆ ಎಂದು ದೌರ್ಜನ್ಯಕ್ಕೊಳಗಾದ ಖುರೇಷ್ ಅವರೇ ಹೇಳಿಕೆ ನೀಡಿದ್ದಾರೆ. ಜೊತೆಗೆ ಅನ್ನ, ನೀರು ನೀಡದೆ ತೀವ್ರ ಅಸ್ವಸ್ಥನಾಗಿದ್ದ ತನಗೆ ವೈದ್ಯಕೀಯ ಉಪಚಾರವನ್ನು ನೀಡದೆ ಪೋಲೀಸ್ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದೂ ಹೇಳಿದ್ದಾರೆ. ಕುಟುಂಬಸ್ಥರ ತೀವ್ರ ಒತ್ತಡದ ಬಳಿಕವಷ್ಟೇ ಖುರೇಷ್‍ನನ್ನು ಕೊಲೆಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿ ಬಿಂಬಿಸಿ ಮಾರ್ಚ್ 27ರಂದು ಪೋಲೀಸರು ನ್ಯಾಯಾಧೀಶರ ಮನೆಗೆ ಕೊಂಡು ಹೋಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಚಿತ್ರಹಿಂಸೆಯ ಬಗ್ಗೆ ನ್ಯಾಯಾಧೀಶರಲ್ಲಿ ಮತ್ತು ವೈದ್ಯಾಧಿಕಾರಿಗಳಲ್ಲಿ ಹೇಳಬಾರದೆಂದು ಪೋಲೀಸರು ತನ್ನನ್ನು ಬೆದರಿಸಿದ್ದರು. ಒಂದು ವೇಳೆ ಇದನ್ನು ಬಹಿರಂಗಪಡಿಸಿದರೆ, ಎನ್‍ಕೌಂಟರ್ ಮಾಡುವ ಬೆದರಿಕೆ ಮತ್ತು ಕಾರ್ತಿಕ್ ರಾಜ್ ಎಂಬಾತನ ಕೊಲೆ ಪ್ರಕರಣದಲ್ಲಿ ಫಿಕ್ಸ್ ಮಾಡುವ ಬೆದರಿಕೆಯನ್ನೂ ಪೋಲೀಸ್ ಒಡ್ಡಿದ್ದಾರೆ. ಈ ರೀತಿಯಾಗಿ ಪೋಲೀಸರು ಅಮಾಯಕ ಮುಸ್ಲಿಮ್ ಯುವಕರ ಮೇಲೆ ದೈಹಿಕವಾಗಿ ದೌರ್ಜನ್ಯ ನಡೆಸಿ ಮುಸ್ಲಿಮ್ ವಿರೋಧಿ ಧೋರಣೆಯನ್ನು ನಡೆಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ನಾಗರಿಕರು, ಅಮಾಯಕ ಯುವಕನ ಮೇಲೆ ಪೋಲೀಸರು ನೀಡಿದ ದೌರ್ಜನ್ಯವನ್ನು ಖಂಡಿಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆದರೆ ಈ ವೇಳೆ ಪೋಲೀಸರು ಯಾವುದೇ ಮುನ್ಸೂಚನೆ ನೀಡದೆ ಪ್ರತಿಭಟನಾ ನಿರತ ಮುಸ್ಲಿಮ್ ಸಂಘಟನೆಗಳ ಕಾರ್ಯಕರ್ತರ ಮೇಲೆ ಏಕಾಏಕೀ ಲಾಠಿಚಾರ್ಜ್ ನಡೆಸಿ ಮನಸೋ ಇಚ್ಛೆ ಥಳಿಸಿದ್ದಾರೆ. ಪೋಲೀಸರ ಲಾಠಿಚಾರ್ಜ್‍ನಿಂದಾಗಿ ಪ್ರತಿಭಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವೂ ಆಗಿದೆ.. ಈ ಮಧ್ಯೆ ಪೋಲೀಸರು ಪ್ರತಿಭಟನಾನಿರತ ಮುಸ್ಲಿಮ್ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರನ್ನೂ ಅಕ್ರಮವಾಗಿ ಬಂಧಿಸಿರುತ್ತಾರೆ. ಇದು ನ್ಯಾಯದ ಪರವಾದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ.

ಪ್ರತಿಭಟನಕಾರರು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದರು ಮತ್ತು ಅವರ ಮೇಲೆ ಪೋಲೀಸರು ಮನಸೋ ಇಚ್ಛೆ ಲಾಠಿಚಾರ್ಜ್ ನಡೆಸಿದ್ದಾರೆ ಎಂಬುದಕ್ಕೆ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿರುವ ವಿಡಿಯೋ ದಶ್ಯಗಳೇ ಬಹಿರಂಗಪಡಿಸುತ್ತಿವೆ.

ಆದುದರಿಂದ ಆಡಳಿತ ವ್ಯವಸ್ಥೆಯು ಕೂಡಲೇ ಎಚ್ಚೆತ್ತುಕೊಂಡು ಗಂಭೀರ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಸಿಸಿಬಿ ಇನ್ಸ್‍ಪೆಕ್ಟರ್‍ಗಳಾದ ಸುನೀಲ್ ನಾಯ್ಕ್ ಹಾಗೂ ಸಬ್ ಇನ್ಸ್‍ಪೆಕ್ಟರ್ ಶಾಂ ಸುಂದರ್ ಸೇರಿದಂತೆ ತಪ್ಪಿತಸ್ಥ ಪೋಲೀಸ್ ಸಿಬ್ಬಂದಿಗಳನ್ನು ಈ ಕೂಡಲೇ ಅಮಾನತುಗೊಳಿಸಬೇಕು. ತಪ್ಪಿತಸ್ಥ ಪೋಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅದೇ ರೀತಿ ಅಕ್ರಮವಾಗಿ ಬಂಧಿಸಲಾಗಿರುವ ಪ್ರತಿಭಟನಕಾರರ ಮೇಲೆ ದಾಕಲಾಗಿರುವ ಮೊಖದ್ದಮೆಯನ್ನು ಹಿಂಪಡೆಯಬೇಕು ಮತ್ತು ಪೋಲೀಸ್ ದೌರ್ಜನ್ಯಕ್ಕೊಳಗಾಗಿರುವ ಅಹ್ಮದ್ ಖುರೇಷ್‍ಗೆ ಸೂಕ್ತ ಪರಿಹಾರವನ್ನು ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.


Spread the love
1 Comment
Inline Feedbacks
View all comments
Truth Seeker
7 years ago

“ಅಮಾಯಕ ಯುವಕ ಅಹ್ಮದ್ ಖುರೇಷ್…” Was he really? Was he not booked under a different charge? I’m not here to give a clean chit to Police. I don’t approve any police torture either. But, why the title ‘ಅಮಾಯಕ’ when he had charges against him? “ಪೋಲೀಸರು ಯಾವುದೇ ಮುನ್ಸೂಚನೆ ನೀಡದೆ ಪ್ರತಿಭಟನಾ ನಿರತ ಮುಸ್ಲಿಮ್ ಸಂಘಟನೆಗಳ ಕಾರ್ಯಕರ್ತರ ಮೇಲೆ ಏಕಾಏಕೀ ಲಾಠಿಚಾರ್ಜ್…” So, PFI = ಮುಸ್ಲಿಮ್ ಸಂಘಟನೆ? If so, why the disguise of ‘People front’? By the way, this is no surprise for intelligent readers. It’s good to see an open admission on true nature of this organization. How come media and journalists don’t report on these… Read more »

wpDiscuz
Exit mobile version