Home Mangalorean News Kannada News ಖ್ಯಾತ ಬೋಧಕ, ಯೇಸು ಸ್ಪರ್ಶ ತಂಡದ ಬ್ರದರ್ ಟಿ ಕೆ ಜಾರ್ಜ್ ನಿಧನ

ಖ್ಯಾತ ಬೋಧಕ, ಯೇಸು ಸ್ಪರ್ಶ ತಂಡದ ಬ್ರದರ್ ಟಿ ಕೆ ಜಾರ್ಜ್ ನಿಧನ

Spread the love

ಖ್ಯಾತ ಬೋಧಕ, ಯೇಸು ಸ್ಪರ್ಶ ತಂಡದ ಬ್ರದರ್ ಟಿ ಕೆ ಜಾರ್ಜ್ ನಿಧನ

ಬೆಂಗಳೂರು: ಹೆಸರಾಂತ ಪ್ರಚಾರಕ ಯೇಸು ಸ್ಪರ್ಶ ತಂಡದ ಬ್ರದರ್ ಟಿ ಕೆ ಜಾರ್ಜ್ ಅವರು ಸೋಮವಾರ ಬೆಂಗಳೂರಿನ ಸೆಂಯ್ಟ್ ಜಾನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಉಸಿರಾಟ ಸಮಸ್ಯೆಯಿಂದ ಕಳೆದ 77 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಜಾರ್ಜ್ ಅವರು ಸೆಪ್ಟೆಂಬರ್ 8, 1955 ರಂದು ಹುಬ್ಬಳ್ಳಿಯಲ್ಲಿ ದಿವಂಗತ ಟಿ ಕೆ ವರ್ಗೀಸ್ ಮತ್ತು ದಿವಂಗತ ಬೇಬಿ ಮೇರಿ ಅವರ ಮಗನಾಗಿ ಜನಿಸಿದರು. ಅವರು 3 ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡರು ಅವರನ್ನು ಮಲ ತಾಯಿ ತ್ರೇಸಿಯಮ್ಮ ಅವರನ್ನು ಬೆಳೆಸಿದರು. ತಮ್ಮ ಶಾಲಾ ಶಿಕ್ಷಣದ ನಂತರ ಅವರು ಕನ್ನಡದ ಹಲವಾರು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಮಿನುಗುವ ತಾರೆಯಾದರು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹಲವಾರು ನಕಾರಾತ್ಮಕ ತಿರುವುಗಳನ್ನು ಎದುರಿಸಬೇಕಾಗಿ ಬಂದ ಕಾರಣ, ಅವರು ಸ್ವಲ್ಪ ಸಮಯದವರೆಗೆ ಖಿನ್ನತೆಗೆ ಒಳಗಾಗಿದ್ದರು.

ಜೀವನದಲ್ಲಿ ಆಸಕ್ತಿ ಕಳೆದುಕೊಂಡ ಬ್ರ ಜಾರ್ಜ್ ಮೇ 8, 1990 ರಂದು ಕೇರಳದ ಪೊಟ್ಟಾದಲ್ಲಿರುವ ಡಿವೈನ್ ರಿಟ್ರೀಟ್ ಸೆಂಟರ್ಗೆ ಧ್ಯಾನಕೂಟಕ್ಕಾಗಿ ತೆರಳಿದ ವೇಳೆ ಅವರ ಜೀವನದಲ್ಲಿ ಮಹತ್ವದ ತಿರುವು ದೊರಕಿತು. ಅದರ ಬಳಿಕ ದೇವರ ವಾಕ್ಯವನ್ನು ಬೊಧೀಸುವ ಮೂಲಕ ಸಾವಿರಾರು ಧ್ಯಾನಕೂಟಗಳನ್ನು ನಡೆಸಿಕೊಡುತ್ತಿದ್ದರು.

ಜಾರ್ಜ್ ಅವರು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ವಿವಿಧ ಆಧ್ಯಾತ್ಮಿಕ ಸಿಡಿಗಳು ಮತ್ತು MP3 ಗಳನ್ನು ಬಿಡುಗಡೆ ಮಾಡಿದ್ದರು. ಅವರು ಆಧ್ಯಾತ್ಮಿಕ ಡಿವಿಡಿಗಳನ್ನು ತಯಾರಿಸಿದ್ದಾರೆ ಮತ್ತು ಅನೇಕ ಭಾಷೆಗಳಲ್ಲಿ ಆಧ್ಯಾತ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ.


Spread the love

Exit mobile version