ಗಂಗೊಳ್ಳಿ: ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ
ಕುಂದಾಪುರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ನಿರೀಕ್ಷಕರು ದಾಳಿ ನಡೆಸಿ ಅಕ್ಕಿ ಸಹಿತ ರೂ 3.5 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಗಂಗೊಳ್ಳೀ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಗುರುವಾರ ಮರವಂತೆ ಕಡೆಯಿಂದ ಕುಂದಾಪುರ ಕಡೆಗೆ ಇಕೋ ವಾಹನದಲ್ಲಿ ಕಾನೂನು ಬಾಹೀರವಾಗಿ ಅಕ್ಕಿಯನ್ನು ಸಾಗಾಟ ಮಾಡುವ ಬಗ್ಗೆ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಹೆಚ್.ಎಸ್ ಅವರಿಗೆ ಬಂದ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಯವರೊಂದಿಗೆ ಅಣ್ಣಪ್ಪಯ್ಯ ಸಭಾ ಭವನದ ಎದುರು ರಾ.ಹೆ-66 ರಲ್ಲಿ ಬರುತ್ತಿದ್ದ ಇಕೋ ವಾಹನವನ್ನು ನಿಲ್ಲಿಸಿ, ಪರಿಶೀಲಿಸಿದಾಗ ಅದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,043 ಕಿಲೋ ಪಡಿತರ ಬೆಳ್ತಿಗೆ ಅಕ್ಕಿ ಪತ್ತೆಯಾಗಿದ್ದು, ಅಕ್ಕಿ ಹಾಗೂ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿಕೊಂಡ ಅಕ್ಕಿಯ ಮೌಲ್ಯ 15,645/- ರೂಪಾಯಿ ಮತ್ತು ವಾಹನದ ಮೌಲ್ಯ 3,50,000/- ರೂಪಾಯಿ ಆಗಿದ್ದು, ವಾಹನದ ಚಾಲಕ ಮೊಹಮ್ಮದ್ ಸಬೀಲ್ ಎಂಬಾತನು ಓಡಿ ಹೋಗಿ ತಲೆಮರೆಸಿಕೊಂಡಿರುತ್ತಾನೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.