ಗಂಟಾಲ್ ಕಟ್ಟೆ ಯುವಕನ ಕೊಲೆ ಯತ್ನ ಪ್ರಕರಣ ; ಮೂವರ ಬಂಧನ

Spread the love

ಗಂಟಾಲ್ ಕಟ್ಟೆ ಯುವಕನ ಕೊಲೆ ಯತ್ನ ಪ್ರಕರಣ ; ಮೂವರ ಬಂಧನ

ಮಂಗಳೂರು: ಗಂಟಾಲ್ ಕಟ್ಟೆ ಯುವಕನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತಾಲೂಕಿನ ತೋಕೂರು ನಿವಾಸಿ ಧನರಾಜ್ ಪೂಜಾರಿ ಯಾನೆ ಧನು (25), ಹಳೆಯಂಗಡಿಯ ಶಶಿಹಿತ್ಲು ನಿವಾಸಿ ದಿನೇಶ ಪೂಜಾರಿ (38), ಸುರತ್ಕಲ್ ಹೊನ್ನಕಟ್ಟೆ ಕುಳಾಯಿ ನಿವಾಸಿ ಶಾಶ್ವತ್ ಶೆಟ್ಟೆ ಯಾನೆ ಶಾಶ್ವತ್ (23) ಎಂದು ಗುರುತಿಸಲಾಗಿದೆ.

ದಿನಾಂಕ 24-09-2018 ರಂದು ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆಯ ಬದ್ರಿಯಾ ಹೋಟೆಲ್‌‌ನ ಮಾಲಿಕನಾದ ಇಂತಿಯಾಜ್‌ ಎಂಬಾತನು ಹೋಟೆಲಿನಲ್ಲಿ ಇರುವ ಸಮಯ ಬೆಳಿಗ್ಗೆ ಜಾವ ಅಪರಿಚಿತರ ತಂಡ ಹೋಟೆಲ್‌‌ನ ಒಳಗೆ ಬಂದು ಮಾರಕಾಯುಧಗಳಿಂದ ಇಂತಿಯಾಜ್ ರವರಿಗೆ ಹಲ್ಲೆ ನಡೆಸಿದ್ದು, ಈ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಕ್ಕೆ ಮೂರು ತಂಡಗಳನ್ನು ರಚಿಸಿದ್ದು ಇದರಲ್ಲಿ ಮೂಡುಬಿದ್ರೆ ಪೊಲೀಸರು, ಮಂಗಳೂರು ಸಿಸಿಬಿ ಮತ್ತು ಮಂಗಳೂರು ನಗರ ಉತ್ತರ ಉಪವಿಭಾಗ ಪಣಂಬೂರು ರೌಡಿ ನಿಗ್ರಹ ದಳದವರು ಆರೋಪಿಗಳ ಪತ್ತೆಗೆ ಶ್ರಮಿಸಿರುತ್ತಾರೆ. ಈ ಪ್ರಕರಣದಲ್ಲಿ ಈ ಕೆಳಕಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಲಾಗಿದೆ.

ಈ ಪ್ರಕರಣದ ಉಳಿದ ಆರೋಪಿಗಳ ದಸ್ತಗಿರಿಗೆ ಬಾಕಿ  ಇರುತ್ತದೆ. ಈ ಮೇಲ್ಕಂಡ ಆರೋಪಿಯಾದ ಧನರಾಜ್  @ ಧನು ಎಂಬಾತನ ವಿರುದ್ದ ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲಿಸ್ ಠಾಣೆಯಲ್ಲೆ ಕೊಲೆಯತ್ನ ಪ್ರಕರಣ ಮತ್ತು ಸುರತ್ಕಲ್ ಪೊಲೀಸ್  ಠಾಣೆಯಲ್ಲಿ ವಾಟ್ಸ್ಅಪ್ ನಲ್ಲಿ ಅವಹೇಳಕಾರಿ ಪೋಸ್ಟ್ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಹಾಗೂ ಆರೋಪಿ ದಿನೇಶ ಪೂಜಾರಿ @ ದಿನ್ನು ವಿರುದ್ದ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್‌ ರವರ ಆದೇಶದಂತೆ ಉಪಪೊಲೀಸ್‌ ಆಯುಕ್ತರಾದ ಉಮಾ ಪ್ರಶಾಂತ ರವರ ನಿರ್ದೇಶನದಂತೆ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ.ಎಸ್‌‌., ರವರ ಮಾರ್ಗದರ್ಶನದಂತೆ ಪಣಂಬೂರು ರೌಡಿ ನಿಗ್ರಹದಳದ ಪೊಲೀಸ್‌ ನಿರೀಕ್ಷಕರಾದ ರಫೀಕ್‌ ಮತ್ತು ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರಿಕ್ಷಕರಾದ ಅನಂತ ಪದ್ಮನಾಭ,  ಹಾಗೂ ಸಿಬ್ಬಂದಿಯವರು, ಸಿಸಿಬಿ ಘಟಕದ ಪೊಲಿಸ್ ನಿರೀಕ್ಷಕರಾದ ಶಾಂತರಾಮ,  ಅವರ ಸಿಬ್ಬಂದಿಗಳು ಹಾಗೂ ಮೂಡಬಿದರೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ಕೆ ನಾಯಕ್‌ ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ ಸಿಬ್ಬಂಧಿಗಳಾದ ಎ.ಎಸ್.ಐ. ಮೊಹಮ್ಮದ್, ಕುಶಲ ಮಣಿಯಾಣಿ , ಸತೀಶ್ ಎಂ. ವಿಜಯ ಕಾಂಚನ್, ಇಸಾಕ್ ಅಹಮ್ಮದ್. ರಾಧಾಕೃಷ್ಣ , ಶರಣ್ ಕಾಳಿ, ಶ್ಯೆಲೇಂದ್ರ ಇವರುಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.


Spread the love