Home Mangalorean News Kannada News ಗಂಭೀರ ಗಾಯಗೊಂಡ ಹೊರಿಯನ್ನು ರಕ್ಷಿಸಿದ ನಿತ್ಯಾನಂದ ಒಳಕಾಡು ತಂಡ

ಗಂಭೀರ ಗಾಯಗೊಂಡ ಹೊರಿಯನ್ನು ರಕ್ಷಿಸಿದ ನಿತ್ಯಾನಂದ ಒಳಕಾಡು ತಂಡ

Spread the love

ಗಂಭೀರ ಗಾಯಗೊಂಡ ಹೊರಿಯನ್ನು ರಕ್ಷಿಸಿದ ನಿತ್ಯಾನಂದ ಒಳಕಾಡು ತಂಡ

ಉಡುಪಿ: ತೀವ್ರ ಸ್ವರೂಪದಲ್ಲಿ ಗಾಯಗೊಂಡು ಅಸ್ವಸ್ಥ ಸ್ಥಿತಿಯಲ್ಲಿ  ಬಿದ್ದಿದ್ದ ಹೊರಿವೊಂದನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

ಮಣಿಪಾಲದ ಎಮ್ ಐ ಸಿ ಬಳಿ ಕಳೆದ 5 ದಿನಗಳಿಂದ ಹೊರಿಯೊಂದು ಮಾರಕಾಯುಧಗಳಿಂದ ಕಡಿದ ರೀತಿಯಲ್ಲಿ  ಗಂಬೀರ ಸ್ವರೂಪದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿತ್ತು. ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಈ ಪರಿಸರದ ನಿವಾಸಿಗಳು ಹೋರಿಗೆ ಔಷದೋಪಚಾರ ಮಾಡಿದ್ದಾರೆ. ಹೋರಿಯು ಚಿಂತಾಜನಕ ಸ್ಥಿತಿಗೆ ತಲುಪಿದಾಗ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿ ಹೋರಿಯನ್ನು ರಕ್ಷಿಸುವಂತೆ ಕರೆ ಮೂಲಕ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿದ್ಧಾರೆ.

ವಿದ್ಯಾರ್ಥಿಗಳ ಕರೆಗೆ ಸ್ಪಂದಿಸಿದ ನಿತ್ಯಾನಂದ ಒಳಕಾಡು ಅವರು ಹೋರಿಯ ರಕ್ಷಣೆಗೆ ಮುಂದಾಗಿದ್ದಾರೆ ಹೋರಿಗೆ ಪ್ರಾಥಮಿಕ ಚಿಕಿತ್ಸೆ ಡಾ. ಪ್ರಶಾಂತ ನೀಡುವ ಮೂಲಕ ಹೆಚ್ಚಿನ ಚಿಕಿತ್ಸೆಗೆ ನೀಲಾವರ ಗೋ ಶಾಲೆಗೆ ರವಾನಿಸಲಾಗಿದೆ. ಉಡುಪಿ ಅಗ್ನಿ ಶಾಮಕ ದಳ ಹಾಗೂ ಸಾರ್ವಜನಿಕ ನೆರವಿನಿಂದ ಹೊರಿಯನ್ನು ವಿನೋದ್ ನಾಯಕ್ ಇವರ ವಾಹನದಲ್ಲಿ ಉಚಿತವಾಗಿ ಸಾಗಿಸಲಾಯಿತು.

ಸಾಸ್ತಾನ ಮಿತ್ರರು ಸದಸ್ಯರಾದ ವಿನಯಚಂದ್ರ, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರ ಸಹಕಾರದಿಂದ ನೀಲಾವರ ಗೋ ಶಾಲೆಗೆ ಸಾಗಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಣಿಪಾಲ ಪರಿಸರದಲ್ಲಿ ಹೋರಿಗಳು ಗಂಬೀರ ಸ್ವರೂಪದಲ್ಲಿ ಗಾಯಗೊಂಡ ಪರಿಸ್ಥಿತಿಯಲ್ಲಿ ಕಾಣ ಸಿಗುತ್ತಿದೆ. ಈ ಪರಿಸರದಲ್ಲಿ ಆಕ್ರಮ ಖಾಸಯೀ ಖಾನೆಯ ಗುಂಪೊಂದು ಇದೆ ಎಂಬ ಅನುಮಾನ ಮೂಡುತ್ತಿದೆ   ಎಂದು ಸಾರ್ವಜನಿಕರು ಶಂಕೆ ವ್ಯಕ್ತ ಪಡಿಸಿದ್ದಾರೆ.


Spread the love

Exit mobile version