ಗಣರಾಜ್ಯೋತ್ಸವ- ನೆಹರೂ ಮೈದಾನದ ಸುತ್ತಮುತ್ತ ಸಂಚಾರ ಮಾರ್ಪಾಡು
ಮ0ಗಳೂರು : ಜ. 26 ರಂದು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯ ಸಮಯ ಭದ್ರತಾ ದೃಷ್ಠಿಯಿಂದ ನೆಹರೂ ಮೈದಾನದ ಸುತ್ತಮುತ್ತ ಬೆಳಿಗ್ಗೆ 6.30ರಿಂದ ಕಾರ್ಯಕ್ರಮ ಮುಗಿಯುವವರೆಗೆ ಸಂಚಾರ ವ್ಯವಸ್ಥೆ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಎ.ಬಿ ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ತನಕ ಹಾಗೂ ವಿರುದ್ಧ ದಿಕ್ಕಿನಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇಲಾಖಾ ವಾಹನ ಹೊರತುಪಡಿಸಿ, ಇತರ ವಾಹನಗಳ ಪ್ರವೇಶ ಯಾ ಪಾರ್ಕಿಂಗ್ ಸಂಪೂರ್ಣ ನಿಷೇಧಿಸಲಾಗಿದೆ.
ಎ.ಬಿ ಶೆಟ್ಟಿ ವೃತ್ತದಿಂದ ಪುಟ್ಬಾಲ್ ಮೈದಾನದ ತನಕ ಯು.ಪಿ ಮಲ್ಯ ರಸ್ತೆಯಲ್ಲಿ ಮೈದಾನದ ಬದಿ ಎಲ್ಲಾ ತೆರನಾದ ವಾಹನದ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಸಾರ್ವಜನಿಕರು ತಮ್ಮ ವಾಹನಗಳನ್ನು ಕ್ರಮವಾಗಿ ಗೇಟ್‍ವೇ ಹೋಟೆಲ್ ರಸ್ತೆಯ ಎಡಭಾಗ, ಪಾಂಡೇಶ್ವರ ರಸ್ತೆಯ ಒಂದು ಭಾಗದಲ್ಲಿ ಪಾರ್ಕ್ ಮಾಡುವುದು.
ಕಾರ್ಯಕ್ರಮಕ್ಕೆ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಎಲ್ಲಾ ವಾಹನಗಳನ್ನು ರೊಜಾರಿಯೋ ರಸ್ತೆಯ ಎಡಭಾಗದಲ್ಲಿ ಪಾರ್ಕ್ ಮಾಡುವುದು.
ಎ.ಬಿ. ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ಕಡೆಗೆ ಹೋಗುವ ವಾಹನಗಳು ನೆಹರು ವೃತ್ತದಿಂದ ರೊಸಾರಿಯೋ ಆಗಿ ಸಂಚರಿಸುವುದು. ಅದೇ ರೀತಿ ಹ್ಯಾಮಿಲ್ಟನ್ ವೃತ್ತದಿಂದ ಎ.ಬಿ.ಶೆಟಿ ಕಡೆಗೆ ಸಂಚರಿಸುವ ವಾಹನಗಳು ಲೇಡಿಗೋಷನ್-ಕ್ಲಾಕ್ ಟವರ್ ಮೂಲಕ ಸಂಚರಿಸಬೇಕು.