ಗಣೇಶೋತ್ಸವಗಳಿಗೆ ಅಡಚಣೆ ಆಗದಂತೆ ಕ್ರಮ ವಹಿಸಲು ಶಾಸಕ ಕಾಮತ್ ಸೂಚನೆ

Spread the love

ಗಣೇಶೋತ್ಸವಗಳಿಗೆ ಅಡಚಣೆ ಆಗದಂತೆ ಕ್ರಮ ವಹಿಸಲು ಶಾಸಕ ಕಾಮತ್ ಸೂಚನೆ

ಸೆಪ್ಟೆಂಬರ್ 2 ರಿಂದ 6 ತಾರೀಕಿನ ತನಕ ಮಂಗಳೂರು ಮಹಾನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವದ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಗಣೇಶೋತ್ಸವ ಆಚರಿಸುವ ಸಮಿತಿಯವರು ತಮಗೆ ಬೇಕಾದ ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂಗೆ ಅರ್ಜಿ ಸಲ್ಲಿಸಿದಾಗ ಯಾವುದೇ ವಿಳಂಬ ಮಾಡದೇ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಹಾಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಮೈಕ್, ಸೌಂಡ್ ಸಿಸ್ಟಮ್ ಸಹಿತ ಇತರ ವ್ಯವಸ್ಥೆಗಳಿಗೆ ಗಣೇಶೋತ್ಸವ ಸಮಿತಿಗಳು ಮನವಿ ಮಾಡಿದ ತಕ್ಷಣ ಅನುಮತಿ ನೀಡಬೇಕು.ಶೋಭಾಯಾತ್ರೆಗಳು ಸಾಗುವ ದಾರಿಯಲ್ಲಿ ಹೊಂಡ, ಗುಂಡಿಗಳು ಇದ್ದಲ್ಲಿ ಅದನ್ನು ತಕ್ಷಣ ಮುಚ್ಚಲು ಕೂಡ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅದೇ ರೀತಿಯಲ್ಲಿ ಪೊಲೀಸ್ ಕಮೀಷನರ್ ಕಚೇರಿಯಿಂದ ಗಣೇಶೋತ್ಸವದ ಶೋಭಾಯಾತ್ರೆ ನಡೆಸಲು ಅನುಮತಿಗೆ ಕೂಡ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಒಟ್ಟಿನಲ್ಲಿ ಜಿಲ್ಲಾಡಳಿತ ಗಣೇಶೋತ್ಸವ ಆಚರಣೆಯ ಎಲ್ಲಾ ದಿನಗಳಲ್ಲಿ ನಾಗರಿಕರಿಗೆ, ಸಮಿತಿಗಳಿಗೆ ತೊಂದರೆ ಆಗದಂತೆ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ ನೋಡಿಕೊಳ್ಳಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮೆಸ್ಕಾಂ, ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ಹೇಳಿದ್ದಾರೆ.


Spread the love