Home Mangalorean News Kannada News ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ – ಸ್ವಾಮಿ ಧರ್ಮ ಬಂಧುಜಿ

ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ – ಸ್ವಾಮಿ ಧರ್ಮ ಬಂಧುಜಿ

Spread the love

ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ – ಸ್ವಾಮಿ ಧರ್ಮ ಬಂಧುಜಿ

ಮೂಡುಬಿದರೆ:- ಜೀವನದಲ್ಲಿ ಕಲಿತ ಜ್ಞಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಯಶಸ್ಸನ್ನು ಗಳಿಸಬಹುದು ಎಂದು ಗುಜರಾತಿನ ರಾಷ್ಟ್ರಕಥಾ ಶಿಬಿರದ ಸಂಸ್ಥಾಪಕ ಸ್ವಾಮಿ ಧರ್ಮಬಂಧುಜಿ ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅವಿವೇಕದಿಂದ ಯಾವುದನ್ನು ನಂಬದೆ, ಬೌದ್ದಿಕ ಮಟ್ಟದಲ್ಲಿ ವಿಚಾರ ಮಾಡುವುದರ ಮೂಲಕ ವಿಷಯವನ್ನು ಅರಿಯಬೇಕು. ತಾವು ಗಳಿಸಿದ ಜ್ಞಾನವನ್ನು ತಮ್ಮಲ್ಲೇ ಇಟ್ಟುಕೊಳ್ಳದೇ, ಎಲ್ಲರಿಗೂ ಧಾರೆಯೆರೆಯಬೇಕು. ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ವಿನಾ ಜೀವನದಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳಿದರು.

ಆಳ್ವಾಸ್ ಕಾಲೇಜಿನ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮತಾನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಮೇಲೆ ಮಾತ್ರ ಅವಲಂಬಿತರಾಗದೆ ತಮ್ಮನ್ನು ತಾವು ತೊಡಗಿಸಿಕೊಳ್ಳವುದರಿಂದ ಕಲಿಯಲು ಸಾಧ್ಯ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರೋಸ್ಟ್ರಂ ಕ್ಲಬ್‍ನ ಸಂಯೋಜಕ ದೀಪಕ್ ರಾಜ್ ಉಪಸ್ಥಿತರಿದ್ದರು. ನಿತಿನ್ ಸ್ವಾಗತಿಸಿದರು. ರಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು


Spread the love

Exit mobile version