ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ
ಉಡುಪಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆ ಸೆನ್ ಅಪರಾಧ ಪೊಲೀಸ್ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಮಲ್ಲಾರು ನಿವಾಸಿ ಮೊಹಮ್ಮದ್ ಖಾಸಿಂ @ ಉಬೇದುಲ್ಲ (53) ಎಂದು ಗುರುತಿಸಲಾಗಿದೆ
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ಬ ನಿಂಬರಗಿ, ಐ.ಪಿ.ಎಸ್. ಇವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಇವರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕರಾದ ಸೀತಾರಾಮ ಪಿ. ರವರಿಗೆ ಸಪ್ಟೆಂಬರ್ 24 ರಂದು ದೊರೆತ ಮಾಹಿತಿ ಮೇರೆಗೆ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಹಲಿಮಾ ಸಾಬ್ಜು ಹಾಲ್ ಎದುರು ಇರುವ ಐಶ್ವರ್ಯ ಮಾರ್ಬಲ್ಸ್ ಮತ್ತು ಗ್ರಾನೈಟ್ಸ್ ಗೇಟಿನ ಎದುರು ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮೊಹಮ್ಮದ್ ಖಾಸಿಂ @ ಉಬೇದುಲ್ಲಾ, ಎಂಬಾತನನ್ನು ಮಧ್ಯಾಹ್ನ 12:30 ಗಂಟೆಗೆ ದಸ್ತಗಿರಿಗೊಳಿಸಿ, ಆತನು ಮಾರಾಟ ಮಾಡಲು ಹೊಂದಿದ್ದ 1 ಕಿಲೋ 212 ಗ್ರಾಂ ಗಾಂಜಾ (ಮೌಲ್ಯ ರೂಪಾಯಿ. 45,000) , 1 ಮೊಬೈಲ್ ಹ್ಯಾಂಡ್ ಸೆಟ್, ಕೆ.ಎ.-20/ವೈ 1275 ನೇ ಮೋಟಾರ್ ಸೈಕಲ್ ಮತ್ತು ಗಾಂಜಾ ಮಾರಾಟದ ರೂಪಾಯಿ. 4,000/- ವಶಪಡಿಸಿಕೊಂಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸೀತಾರಾಮ ಪಿ. , ಎ.ಎಸ್.ಐ. ಕೇಶವ ಗೌಡ, ಸಿಬ್ಬಂದಿಯವರಾದ ಪ್ರಸನ್ನ ಸಾಲಿಯಾನ್, ರಾಘವೇಂದ್ರ, ಜೀವನ್ ಮತ್ತು ಡಿ.ಸಿ.ಐ.ಬಿ. ವಿಭಾಗದ ಸುರೇಶ್, ಶಿವಾನಂದ ರವರು ಪಾಲ್ಗೊಂಡಿರುತ್ತಾರೆ.