ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರ ಬಂಧನ
ಮಂಗಳೂರು: ಮಾದಕ ದ್ರವ್ಯ ಸೇವನೆ, ಸಾಗಾಟ ಮತ್ತು ಮಾರಾಟಕ್ಕೆ ಸಂಬಧಿಸಿ ಇಕೊನಾಮಿಕ್ & ನಾರ್ಕೋಟಿಕ್ ಕ್ರೈ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.
ಬಂದಿತರನ್ನು ಹಾಸನ ಸಕಲೇಶಪುರದ ನಿವಾಸಿಗಳಾ ರಫೀಕ್ (30), ಸಯ್ಯದ್ ಶಫೀದ್ (30) ಮತ್ತು ಮಲ್ಲಿಕಾರ್ಜುನ (30) ಎಂದು ಗುರುತಿಸಲಾಗಿದೆ.
ಬಂಧಿತರು ಶನಿವಾರ ಮಂಗಳೂರು ಲಾಲ್ ಬಾಗ್ ಕೆ ಎಸ್ ಆರ್ ಟಿಸಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಇಕೋನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೋಲಿಸ್ ಠಾಣೆಯ ಅಧಿಕಾರಿಗಳು ವಶಕ್ಕೆ ಪಡೆದು ಅವರ ಬಳಿಯಿದ್ದ ಸುಮಾರು 3.5 ಕೆಜಿ ತೂಕದ ಗಾಂಜಾ, 3 ಮೊಬೈಲ್ ಹಾಗೂ ನಗದು ರೂ 550 ವಶಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ 58550 ಆಗಿರುತ್ತದೆ.