ಗಾಂಜಾ ಮಾರಾಟ ಮಾಡುತ್ತಿದ್ದ ಎರಡು ಆರೋಪಿಗಳ ಬಂಧನ
ಮಂಗಳೂರು: ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬರ್ಕೆ ಠಾಣಾ ಪೋಲಿಸರು ಬಂಧಿಸಿದ್ದಾರೆ.
ನವೆಂಬರ್ 24ರಂದು ತೋಟ ಬೆಂಗ್ರೆ ನಿವಾಸಿ ದೀಕ್ಷೀತ್ ನಾಯಕ್ (19), ಮಡಿಕೇರಿ ನಿವಾಸಿ ಕಾರ್ತಿಕ್ ಕೆಜೆ (21) ಎಂಬವರು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ, ಗಾಂಜಾವನ್ನು ಮಾರಾಟ ಮಾಡಲು ಬರ್ಕೆ ಠಾಣಾ ಸರಹದ್ದಿನ ಜಿಲ್ಲಾ ಕಾರಾಗೃಹದ ಬಳಿಯ ಡಯಟ್ ಕಾಲೇಜಿನ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದವರನ್ನು ಖಚಿತ ಮಾಹಿತ ಮೇರೆಗೆ ವಶಕ್ಕೆ ಪಡೆದುಕೊಂಡು ಅವರಿಂದ ರೂ 7250 ಮೌಲ್ಯದ 150 ಗ್ರಾಂ ಗಾಂಜಾ ಹಾಗೂ ರೂ 10000 ಮೌಲ್ಯದ ಮೂರು ಮೊಬೈಲ್ ಗಳನ್ನು ಕಾರ್ಯಾಚರಣೆ ವೇಳೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಬ್ಬರೂ ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 17250 ಆಗಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಉಪ ವಿಭಾಗದ ಸಹಾಯ ಪೋಲಿಸ್ ಆಯುಕ್ತರಾದ ಉದಯ ನಾಯಕ್ ಇದರ ಮಾರ್ಗದರ್ಶನದಲ್ಲಿ ಮತ್ತು ಬರ್ಕೆ ಠಾಣಾ ಪೋಲಿಸ್ ನಿರೀಕ್ಷಕರಾದ ರಾಮಕೃಷ್ಣ ಕೆಕೆ ಅವರ ನೇತೃತ್ವದಲ್ಲಿ ಠಾಣ ಪಿಎಸ್ ಐ ಯೋಗಿಶ್ವರನ್ ಮತ್ತು ಸಿಬಂದಿಗಳಾದ ಪ್ರಕಾಶ್ ಎಎಸ್ ಐ ಕಿಶೋರ್ ಕೋಟ್ಯಾನ್, ಗಣೇಶ್ ಕುಮಾರ್ ನಾಗರಾಜ ಚಂದರಗಿ ಪಾಲ್ಗೊಂಡಿದ್ದಾರೆ.