ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಉಳ್ಳಾಲ ಪೋಲಿಸರು
ಮಂಗಳೂರು: ಸಾರ್ವಜನಿಕರಿಗೆ ನಿಷೇದಿತ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಉಪ್ಪಳ ಕಾಸರಗೋಡು ನಿವಾಸಿ ಅಬೂಬಕ್ಕರ್ ಸಿದ್ದಿಕ್ (32) ಎಂದು ಗುರುತಿಸಲಾಗಿದೆ.
ಮೇ 31 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ಮೋಟಾರು ಸೈಕಲ್ ಕೆಎಲ್-14-ಹೆಚ್-4301 ನೇಯದರಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ವಶದಲ್ಲಿ ಹೊಂದಿ ಸಾಗಾಟ ಮಾಡುತ್ತಿದ್ದ ಅಬೂಬಕ್ಕರ್ ಸಿದ್ದಿಕ್ ನನ್ನು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್ ಮತ್ತು ಪೊಲೀಸ್ ಉಪ-ನಿರೀಕ್ಷಕರಾದ ವಿನಾಯಕ ತೋರಗಲ್, ಗುರಪ್ಪ ಕಾಂತಿ, ರವರುಗಳು ಧಾಳಿ ಮಾಡಿ ಆರೋಪಿಯನ್ನು ಪತ್ತೆ ಮಾಡಿ ಆರೋಪಿಯ ವಶದಲ್ಲಿದ್ದ 1 ಕೆಜಿ 50 ಗ್ರಾಂ ತೂಕದ ಗಾಂಜಾವನ್ನು ಮತ್ತು ಕೆಎಲ್-14-ಹೆಚ್-4301 ನೇ ಮೋಟಾರು ಸೈಕಲನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ರೂ.20,500/- ಆಗಿರುತ್ತದೆ. ಆರೋಪಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಸುಲಭ ರೂಪದಲ್ಲಿ ಸಿಗುವಂತೆ ಮಾರಾಟ ಮಾಡುವ ದಂಧೆಯನ್ನು ನಡೆಸುವವನಾಗಿದ್ದು, ಆರೋಪಿ ಕೇರಳ ರಾಜ್ಯದ ಮೂಲದ ವ್ಯಕ್ತಿಯಾಗಿರುತ್ತಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಮೊ.ನಂ. 148/2018 ಕಲಂ 8(ಸಿ), 20(ಬಿ) ಎನ್‌ಡಿಪಿಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಕಾರ್ಯಚಾರಣೆಯಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಪ್ರಭಾರ ಎ.ಸಿ.ಪಿ. ಶ್ರೀ ಗೋಪಾಲಕೃಷ್ಣ ಟಿ. ನಾಯ್ಕ್ ರವರ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲಿಸ್ ನಿರೀಕ್ಷಕರಾದ ಕೆ.ಆರ್.ಗೋಪಿಕೃಷ್ಣ, ಪೊಲೀಸ್ ಉಪ-ನಿರೀಕ್ಷಕರಾದ ವಿನಾಯಕ ತೋರಗಲ್, ಮತ್ತು ಎಎಸ್‌ಐ ರಾಧಾಕೃಷ್ಣ, ಮೋಹನ್.ಕೆ.ವಿ. ಸಿಹೆಚ್‌ಸಿ ಗಳಾದ ರಾಜಾರಾಮ, ಶರೀಫ್, ಸಿಪಿಸಿ 386 ರಂಜಿತ್, ಸಿಪಿಸಿ 559 ಬಸವರಾಜ ಚಿಂಚೋಳಿ, ಸಿಪಿಸಿ 557 ಸೋಮಶೇಖರ, ಸಿಪಿಸಿ 2424 ವಾಸುದೇವರವರು ಸಹಕರಿಸಿರುತ್ತಾರೆ.