ಗಾಂಜಾ ಸೇವನೆ ಮಾಡುತ್ತಿದ್ದ ಆರು ಜನ ಯುವಕರ ಬಂಧನ
ಮಂಗಳೂರು: ನಗರದ ಉರ್ವಾ ಪೋಲಿಸ್ ಠಾಣಾ ವ್ಯಾಪ್ತಿಯ ಜೆ.ಬಿ. ಲೋಬೊ ತಿರುವು ರಸ್ತೆಯ ಸಮೀಪ ಗಾಂಜಾ ಸೇವನೆ ಮಾಡುತ್ತಿದ್ದ ಆರು ಜನ ಯುವಕರನ್ನು ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೋಲಿಸರು ಹಾಗೂ ಉರ್ವ ಪೋಲಿಸ್ ಠಾಣಾ ಪೋಲಿಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಭಾನುವಾರ ಕೇರಳ ನಿವಾಸಿ ಗಳಾದ ಶಮೀಲ್ (24), ಶಬೀತ್ (23), ಅಮೀಮ್ (23), ಶಭಿರ್ (26), ಅನ್ಸಾರ್ (26), ಸೂರಜ್ (20) ರವರ ಮೇಲೆ ಉರ್ವ ಠಾಣೆಯಲ್ಲಿ ಕಲಂ 27(ಬಿ) ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಾಗಿದೆ.
ಪೋಲಿಸ್ ಆಯುಕ್ತರಾದ ಟಿ.ಆರ್. ಸುರೇಶ್, ಐಪಿಎಸ್, ಪೋಲಿಸ್ ಉಪಆಯುಕ್ತರಾದ (ಕಾ&ಸು), ಹನುಮಂತರಾಯ, ಪೊಲೀಸ್ ಉಪ ಆಯುಕ್ತರಾದ (ಅಪರಾಧ & ಸಂಚಾರ) ಉಮಾಪ್ರಶಾಂತ್, ಹಾಗೂ ಕೇಂದ್ರ ಉಪವಿಭಾಗದ ಎಸಿಪಿ ಉದಯ ನಾಯಕ್ ರವರ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹ ದಳದ ಪೋಲಿಸ್ ನೀರಿಕ್ಷಕರು ರವೀಶ್ ಎಸ್ ನಾಯಕ್, ಕೃಷ್ಣ ಬಿ, ಪಿಎಸ್ ಐ, ಬಾಲಕೃಷ್ಣ ಎಎಸ್ ಐ, ದಾಮೋದರ್ ಎಎಸ್ ಐ, ಹೆಚ್ ಸಿ ಗಳಾದ ಸಂತೋಷ್ ಕುಮಾರ್ ಸಸಿಹಿತ್ಲು, ನವೀನ್, ಸಿದ್ದಾರ್ಥ್, ದಯಾನಂದ, ಕಿಶೋರ್ ಕೊಟ್ಯಾನ್, ಗಣೇಸ್, ಸಂತೋಷ್ ಕುಮಾರ್, ಕರುಣೇಶ್ ಕುಮಾರ್, ಲೋಕೇಶ್ ಪಿಸಿಗಳಾದ ಪ್ರಮೋದ್, ವಿನೋದ್, ಯೋಗಿಶ್, ಕಾಂತರಾಜು, ಹೇಮಂತ್ ಕುಮಾರ್, ಶಂಕರಪ್ಪ ಲಮಾಣಿರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.