Home Mangalorean News Kannada News ಗಾಂಧಿಜಿ ಯುವಕರಿಗೂ ಮಾಡೆಲ್- ವಿನೀತ್ ರಾವ್

ಗಾಂಧಿಜಿ ಯುವಕರಿಗೂ ಮಾಡೆಲ್- ವಿನೀತ್ ರಾವ್

Spread the love

ಗಾಂಧಿಜಿ ಯುವಕರಿಗೂ ಮಾಡೆಲ್- ವಿನೀತ್ ರಾವ್

ಉಡುಪಿ: ಗಾಂಧೀಜಿ ನಮ್ಮ ಯುವಕರಿಗೂ ಗುಡ್ ರೋಲ್ ಮಾಡೆಲ್; ಅವರ ಸಂದೇಶಗಳು ಯುವ ಶಕ್ತಿಯನ್ನು ತಲುಪುವುದು ಇಂದಿನ ತುರ್ತು ಅಗತ್ಯ ಎಂದು ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ವಿಭಾಗದ ಗಾಂಧೀವಾದಿ ವಿನೀತ್ ರಾವ್ ಹೇಳಿದರು.

ಅವರು ಗಾಂಧೀಜಿಯವರ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ ಸಾಕ್ಷ್ಯ ಚಿತ್ರ ವೀಕ್ಷಣೆಯ ಮುನ್ನ ಮಣಿಪಾಲದ ಬಿಸಿಎಂ ಇಲಾಖೆಯ ಹಾಸ್ಟೆಲ್ ಆವರಣದಲ್ಲಿ ಮಾತನಾಡಿದರು.

ಮೋಹನ್‍ದಾಸ್ ಕರಮ್‍ಚಂದ್ ಗಾಂಧಿ ಮಹಾತ್ಮನಾದ ಕಥೆ ಅವರ ಅಹಿಂಸಾತ್ಮಕ ಹೋರಾಟ; ಪ್ರೀತಿಗಿರುವ ಶಕ್ತಿಯನ್ನು ಇಂದು ಅರಿತು ಅಳವಡಿಸಬೇಕಾದ ಅಗತ್ಯವನ್ನು ಹೇಳಿದ ಅವರು, ಗಾಂಧಿ ಅವರ ಜೀವನವೇ ಸಂದೇಶವಾಗಿತ್ತು. ನಾವಿಲ್ಲಿ ನಮ್ಮ ದೇಶದಲ್ಲಿ ವಯಸ್ಕ ಗಾಂಧಿಯನ್ನು ಹೆಚ್ಚಾಗಿ ಇಳಿವಯಸ್ಸಿನ ಪುತ್ಥಳಿ, ಚಿತ್ರಗಳನ್ನು ನೋಡಿದ್ದೇವೆ.ಆದರೆ ಅವರ ಹೋರಾಟ ದಕ್ಷಿಣ ಆಫ್ರಿಕಾದಿಂದ ಆರಂಭಿಸಿದ ಸತ್ಯಾಗ್ರಹ ಚಳವಳಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಅವರ ಸಾಮರಸ್ಯದ ಸಂದೇಶ ಸದಾಕಾಲ ಪ್ರಸ್ತುತ.

ಸತ್ಯ, ಅಹಿಂಸೆಯ ತಳಹದಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂಘರ್ಷಗಳಿಗೆ ಗಾಂಧಿ ಮಾರ್ಗವನ್ನು ಅನುಸರಿಸಿ ಇತ್ಯರ್ಥಗೊಳಿಸಬೇಕು. ಮಾನವತೆಯ ಸುಂದರ ತೋಟದಲ್ಲಿ ನಾವೆಲ್ಲರೂ ಸುಂದರ ಪುಷ್ಪಗಳು ಎಂದರು.

ಕಾರ್ಕಳ ತಾಲೂಕು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ದಯಾನಂದ ಮಾತನಾಡಿದರು. ಹಾಸ್ಟೆಲ್ ವಾರ್ಡ್‍ನ್ ಸುಜಾತ, ವಾರ್ತಾಧಿಕಾರಿ ರೋಹಿಣಿ ಇದ್ದರು.


Spread the love

Exit mobile version