ಗಾಂಧೀಜಿಯ ಅಹಿಂಸ ತತ್ವ ಯಾರಿಗೂ ನಾಶ ಮಾಡಲು ಸಾಧ್ಯವಿಲ್ಲ: ವಂ|ಚಾರ್ಲ್ಸ್ ಮಿನೇಜಸ್

Spread the love

ಗಾಂಧೀಜಿಯ ಅಹಿಂಸ ತತ್ವ ಯಾರಿಗೂ ನಾಶ ಮಾಡಲು ಸಾಧ್ಯವಿಲ್ಲ: ವಂ|ಚಾರ್ಲ್ಸ್ ಮಿನೇಜಸ್

ಉಡುಪಿ: ಶಾಂತಿ ಸೌಹಾರ್ದತೆಗಾಗಿ ಶ್ರಮಿಸಿದ ಗಾಂಧೀಜಿ ನಡೆನುಡಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಗಾಂಧೀಜಿಯ ಅಹಿಂಸ ತತ್ವ ಯಾರಿಗೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಉಡುಪಿ ಶೋಕ ಮಾತಾ ಇಗರ್ಜಿಯ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್ ಹೇಳಿದರು.

ಅವರು ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಸೌಹಾರ್ದ ಕರ್ನಾಟಕ ಮತ್ತು ಸಹಬಾಳ್ವೆ ಉಡುಪಿ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಕಾರ ದೊಂದಿಗೆ ಮಹಾತ್ಮಾ ಗಾಂಧಿಯವರ ಹುತಾತ್ಮ ದಿನವಾದ ಇಂದು ಸೌಹಾರ್ದತೆಯ ಸಂಕೇತವಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗಾಂಧೀಜಿ ತನ್ನ ಇಡೀ ಜೀವನವನ್ನು ಮಾನವತೆಯ ಒಳಿತು, ಶಾಂತಿ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಪಣವಾಗಿ ಇಟ್ಟುಕೊಂಡರು. ಗಾಂಧೀಜಿ ನಮ್ಮೆಲ್ಲರನ್ನು ಜೊತೆಯಾಗಿಸಿ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಶಾಂತಿ ಸೌಹಾರ್ದತೆಗಾಗಿ ಶ್ರಮಿಸಿದ ಗಾಂಧೀಜಿ ನಡೆನುಡಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಗಾಂಧೀಜಿಯ ಅಹಿಂಸ ತತ್ವ ಯಾರಿಗೂ ನಾಶ ಮಾಡಲು ಸಾಧ್ಯವಿಲ್ಲ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರುವ ಮೂಲಕ ಗಾಂಧೀಜಿ ಶಾಂತಿ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಮಾಜದಲ್ಲಿ ನಾವೆಲ್ಲರೂ ಕೂಡ ಸೌಹಾದರ್ತೆ ಯನ್ನು ಉಳಿಸುವ ನಿಟ್ಟಿನಲ್ಲಿ ಒಗ್ಗಟ್ಟು ಮೆರೆಯಬೇಕು ಎಂದರು.

ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿ ಶೋಕಾ ಮಾತಾ ಇಗರ್ಜಿಯ ಧರ್ಮಗುರು ಫಾ.ಚಾರ್ಲ್ಸ್ ಮೆನೆಜಸ್, ಅಬೂಬಕ್ಕರ್ ನೇಜಾರು ಜೊತೆಗೂಡಿ ಸರ್ವ ಧರ್ಮೀಯರು ಬಲೂನ್ ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಕೆಎಂ ರಸ್ತೆಯಿಂದ ಸರ್ವಿಸ್ ಬಸ್ ನಿಲ್ದಾಣದ ರಸ್ತೆಯವರೆಗೆ ಎಲ್ಲರೂ ಕೈ ಕೈ ಹಿಡಿದು ನಿಂತು ಮಾವನ ಸರಪಳಿ ಯನ್ನು ರಚಿಸಿದರು.

ಈ ಸಂದರ್ಭದಲ್ಲಿ ಹಿರಿಯ ಚಿಂತಕ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದಸಂಸ ಮುಖಂಡರಾದ ಸುಂದರ್ ಮಾಸ್ತರ್, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ವಂ| ಹೆರಾಲ್ಡ್ ಪಿರೇರಾ, ಸುನೀಲ್ ಬಂಗೇರ, ಜಾನೆಟ್ ಬಾರ್ಬೋಜಾ ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಿಶ್ವಾಸ್ ಅಮೀನ್, ಮೇರಿ ಡಿಸೋಜಾ, ಡಾ|ಜೆರಾಲ್ಡ್ ಪಿಂಟೊ, ಅಲ್ಫೋನ್ಸ್ ಡಿಕೋಸ್ತಾ, ಅಬ್ದುಲ್ ಅಝೀಝ್ ಉದ್ಯಾವರ, ವೆರೋನಿಕಾ ಕರ್ನೆಲಿಯೋ, ಹುಸೇನ್ ಕೋಡಿಬೆಂಗ್ರೆ, ಕವಿರಾಜ್, ಶಶಿಧರ್ ಗೊಲ್ಲಾ ಮೊದಲಾದವರು ಉಪಸ್ಥಿತರಿದ್ದರು.


Spread the love