ಗಾಂಧೀಜಿ ಕಲ್ಪನೆಯ ಸ್ವಚ್ಛತೆಯ ಅರಿವು ಮೂಡಿದೆ:ರಘುಪತಿ ಭಟ್
ಉಡುಪಿ : ಮಹಾತ್ಮಗಾಂಧೀಜಿ ಅವರು ಸ್ಚಚ್ಛತೆ ಕುರಿತ ನೀಡಿದ ಸಂದೇಶದ ಅನುಷ್ಠಾನದ ಫಲಶೃತಿ ಎಲ್ಲೆಡೆ ಕಂಡು ಬರುತ್ತಿದೆ, ಸಾರ್ವಜನಿಕರಲ್ಲಿ ಸ್ಚಚ್ಛತೆಯ ಕುರಿತು ಅರಿವು ಮೂಡಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಅವರು ಶುಕ್ರವಾರ, ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಆಯೋಜಿಸಿದ್ದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ , ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಗಾಂಧೀಜಿ ಅವರು ಸ್ವಚ್ಚತೆ ಪಾಲನೆಗೆ ನೀಡಿದ ಕರೆಯಂತೆ, ರಾಷ್ಟಾçದ್ಯಂತ ನಿರಂತರವಾಗಿ ಪರಿಸರ ಸ್ಚಚ್ಚತಾ ಕಾರ್ಯಕ್ರಮಗಳು ನಡೆಯುತ್ತಿವೆ, 1934 ರಲ್ಲಿ ಉಡುಪಿಗೆ ಮಹಾತ್ಮಗಾಂಧೀ ಬೇಟಿ ನೀಡಿದ್ದರು ಎಂದು ಶಾಸಕರು ಹೇಳಿದರು.
ಉಡುಪಿ ಜಿಲ್ಲಾಸ್ಪತ್ರೆಯನ್ನು 150 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದು, ಅರ್ಥಿಕ ಇಲಾಖೆಯ ಅನುಮೋದನೆ ಸಹ ದೊರೆತಿದ್ದು, ಮುಂದಿನ ವಾರ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ ಎಂದು ರಘುಪತಿ ಭಟ್ ಹೇಳಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಗಾಂಧೀಜಿ ಅವರ ಸಮಾಜದ ಒಳಿತಿಗಾಗಿ ಸೇವೆ ಮಾಡಿದ್ದರಿಂದ ಜನರ ಮನೆ ಮನಗಳಲ್ಲಿ ಶಾಶ್ವತವಾಗಿ ಉಳಿಸಿದ್ದಾರೆ, ಅಹಿಂಸಾ ಮಾರ್ಗದ ಮೂಲಕ ಸ್ವಾಂತAತ್ರö್ಯ ದೊರಕಿಸಿಕೊಟ್ಟಿದ್ದು, ಸ್ವಾತಂತ್ರö್ಯದ ಸದ್ಬಳಕೆ ಆಗಬೇಕು, ಯುವ ಜನತೆ ಗಾಂಧೀಜಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಆದರೆ ಜನರು ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೇ , ಕೊನೆಯ ಹಂತದಲ್ಲಿ ನೇರವಾಗಿ ವೆಂಟಿಲೇಟರ್ ಚಕಿತ್ಸೆಗೆ ಆಗಮಿಸುತ್ತಿದ್ದಾರೆ, ಜಿಲ್ಲಾಡಳಿತ ಮೂಲಕ ಕೊರೋನಾ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, 30000 ಬೆಲೆಯ ಇಂಜೆಕ್ಷನ್ ಸಹ ಉಚಿತವಾಗಿ ನೀಡಲಾಗುತ್ತಿದೆ, ಯುವ ಜನತೆ ಕೊರೋನಾ ಕುರಿತು ನಿರ್ಲಕ್ಷ ವಹಿಸಿಬೇಡಿ, ಇದರಿಂದ ನಿಮ್ಮ ಮನೆಯಲ್ಲಿರುವ ಹಿರಿಯರನ್ನು ಸಾವಿನ ಅಂಚಿಗೆ ದೂಡಬೇಡಿ, ಅವರನ್ನು ರಕ್ಷಿಸಿ ಎಂದು ಹೇಳಿದರು.
ಜಿಲ್ಲೆಯಲ್ಲಿನ ಹಿರಿಯ ವ್ಯಕ್ತಿಗಳನ್ನು ಕೊರೋನಾ ನಿಂದ ರಕ್ಷಿಸುವ ಸಲುವಾಗಿ ಜಿಲ್ಲೆಯಾದ್ಯಂತ “ನಮ್ಮ ಮನೆ ನಮ್ಮ ಹಿರಿಯರು” ಎಂಬ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂಧ್ ಕಲ್ಲೋಳಿಕರ್ ಮತ್ತಿತರರು ಉಪಸ್ಥಿತರಿದ್ದರು.
ಗಣೇಶ್ ಗಂಗೋಳ್ಳಿಮತ್ತು ಬಳಗದವರಿಂದ ಗಾಂಧೀ ಭಜನೆ ಕಾರ್ಯಕ್ರಮ ನಡೆಯಿತು. ತ್ಯಾಜ್ಯ ನಿರ್ವಹಣೆ –ಮರುಬಳಕೆ ಕುರಿತು ಆಯೋಜಿಸಿದ್ದ ಕಿರುಚಿತ್ರ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.