ಗುಣಮಟ್ಟದ ಸೇವೆಗೆ ಕೆಎಸ್‍ಆರ್‍ಟಿಸಿ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Spread the love

ಗುಣಮಟ್ಟದ ಸೇವೆಗೆ ಕೆಎಸ್‍ಆರ್‍ಟಿಸಿ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಉಡುಪಿ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಸೇವೆಯು ಕೆ ಎಸ್ ಆರ್ ಟಿ ಸಿ ಸಂಸ್ಥೆಯ ಧ್ಯೇಯವಾಗಿದ್ದು, ಒಂದೂವರೆ ವರ್ಷದೊಳಗಾಗಿ ಜಿಲ್ಲಾ ಕೇಂದ್ರವಾದ ಉಡುಪಿಯಲ್ಲಿ ಸುಸ್ಸಜ್ಜಿತ ಜೆನರ್ಮ್ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳನ್ನು ಒದಗಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿದರು.

ನಿಟ್ಟೂರಿನ ಜೆ ನರ್ಮ್ ಬಸ್ ಘಟಕ ನಿಟ್ಟೂರಿನಲ್ಲಿ ಉಡುಪಿ ನಗರದ ನೂತನ ಜೆನರ್ಮ್ ಬಸ್ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

2.60 ಎಕರೆ ವಿಸ್ತೀರ್ಣದಲ್ಲಿ ರೂ. 6.08 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಸಾರ್ವಜನಿಕ ಸೇವೆಗೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ,ಹಿರಿಯರಿಗೆ, ವಿಕಲಚೇತನರಿಗೆ, ನಿತ್ಯ ಪ್ರಯಾಣಿಕರಿಗೆ ರಿಯಾಯಿತಿಯನ್ನು ನೀಡಲಿದೆ.

image001nurm-bus-depot-udupi-20161104 image002nurm-bus-depot-udupi-20161104 image006nurm-bus-depot-udupi-20161104 image003nurm-bus-depot-udupi-20161104 image004nurm-bus-depot-udupi-20161104 image005nurm-bus-depot-udupi-20161104 image007nurm-bus-depot-udupi-20161104 image008nurm-bus-depot-udupi-20161104 image009nurm-bus-depot-udupi-20161104 image010nurm-bus-depot-udupi-20161104 image011nurm-bus-depot-udupi-20161104 image012nurm-bus-depot-udupi-20161104 image013nurm-bus-depot-udupi-20161104 image014nurm-bus-depot-udupi-20161104 image015nurm-bus-depot-udupi-20161104

ಜಿಲ್ಲೆಯಲ್ಲಿ ಅಗತ್ಯವಿರುವೆಡೆ ಆದ್ಯತೆ ನೀಡಿ ಶಾಲಾ ಮಕ್ಕಳ ಸಂಚಾರಕ್ಕೆ ಅನುಕೂಲವಾಗುವ ಹಾಗೆ ಬಸ್ ಸೌಲಭ್ಯಗಳಿಲ್ಲದ ಪ್ರದೇಶಗಳಿಗೆ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಬಸ್ಸುಗಳು ಸಂಚರಿಸಲಿವೆ ಎಂದು ಸಚಿವರು ನುಡಿದರು.
ಹೈಟೆಕ್ ಬಸ್ ನಿಲ್ದಾಣದ ಜೊತೆಗೆ ಈಗಾಗಲೇ ಅಗತ್ಯವಿರುವ 8027 ಜನರನ್ನು ನೇಮಕಾತಿ ಮಾಡಲಾಗಿದ್ದು, ಇನ್ನೂ 5866 ಸಿಬ್ಬಂದಿ ನೇಮಕಾತಿ ಶೀಘ್ರದಲ್ಲೇ ನಡೆಯಲಿದೆ ಎಂದರು.

ಕೆಎಸ್‍ಆರ್‍ಟಿಸಿ ಯು ಸರ್ಕಾರದ ಉತ್ತಮ ಆಸ್ತಿಗಳಲ್ಲೊಂದಾಗಿದ್ದು, ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿದೆ. ಸರ್ಕಾರದ ಈ ಆಸ್ತಿಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಲು ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ನುಡಿದರು.

ಬನ್ನಂಜೆಯ ಮೂರು ಎಕರೆ ಜಾಗದಲ್ಲಿ ಪಿಪಿಪಿ ಮಾಡೆಲ್ ನಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದೂ ಸಚಿವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳೊಂದಿಗೆ ಸಮನ್ವಯ ಸಾಧಿಸಿ ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿರುವುದಾಗಿ ಹೇಳಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಗಫೂರ್, ಮಾಜಿ ಶಾಸಕರಾದ ಬಸವರಾಜ್, ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ತೋನ್ಸೆ, ಸುಧಾಕರ ಶೆಟ್ಟಿ, ಕೆಎಸ್‍ಆರ್‍ಟಿಸಿ ಮಂಡಳಿ ನಿರ್ದೇಶಕರಾದ ಟಿ ಕೆ ಸುಧೀರ್, ರಮೇಶ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.

ಕರಾರಸಾನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದರ್ ಕುಮಾರ್ ಕಟಾರಿಯಾ ಪ್ರಸ್ತಾವಿಕ ನುಡಿಗಳನ್ನಾಡಿದರು. ವಿವೇಕಾನಂದ ಹೆಗಡೆ ಸ್ವಾಗತಿಸಿದರು.


Spread the love