ಗುರುಪುರ  ಪ್ಯಾಕೇಜಿಂಗ್ ಕಂಪನಿ ನೌಕರರಿಗೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ,ಕಂಪನಿ ಸೀಲ್ ಡೌನ್- ಶಾಸಕ ಡಾ.ಭರತ್ ಶೆಟ್ಟಿ

Spread the love

ಗುರುಪುರ  ಪ್ಯಾಕೇಜಿಂಗ್ ಕಂಪನಿ ನೌಕರರಿಗೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ,ಕಂಪನಿ ಸೀಲ್ ಡೌನ್- ಶಾಸಕ ಡಾ.ಭರತ್ ಶೆಟ್ಟಿ

ಮಂಗಳೂರು: ಗುರುಪುರ ಹೋಬಳಿಯಲ್ಲಿರುವ ಖಾಸಗೀ ಪ್ಯಾಕೇಜಿಂಗ್ ಕಂಪನಿಯಲ್ಲಿ ಈಗಾಗಲೇ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿದ್ದು ,ಉಳಿದವರಿಗೂ ಶನಿವಾರದಿಂದ ಟೆಸ್ಟ್ ಮುಂದುವರಿಯಲಿದೆ. ಬಳಿಕ ಕಂಪನಿಯನ್ನು ಸರಕಾರದ ನಿರ್ದೇಶನಂದತೆ ಶಟ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಮಂಗಳೂರಿನಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್,ತಹಶೀಲ್ದಾರ್ ಗುರುಪ್ರಸಾದ್ ,ಸಹಾಯಕ ತಹಶೀಲ್ದಾರ್ ಶಿವಪ್ರಸಾದ್,ಗ್ರಾಮಕರಣಿಕ ದಿನೇಶ್ ವಿ.ಎ ಅವರು ಇದ್ದ ಅಧಿಕಾರಿಗಳ ತುರ್ತು ಸಭೆಯಲ್ಲಿ ಈ ಸೂಚನೆ ನೀಡಿದರು.

ಈ ಸಂದರ್ಭ ಮಾಹಿತಿ ನೀಡಿದ ಅಧಿಕಾರಿಗಳು ಸ್ಥಳೀಯರು,ಇತರ ರಾಜ್ಯಗಳ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. 39ಮಂದಿಗೆ ಸೋಂಕು ಇದೀಗ ದೃಢ ಪಟ್ಟಿದೆ.

ಕೊರೊನಾ ಪಾಸಿಟಿವ್ ಕಂಡು ಬಂದವರಿಗೆ ಸಮೀಪದ ಕೊಂಪದವುಬಳಿ ಕೋವಿಡ್ ಕೇರ್ ಕೇಂದ್ರವನ್ನು ಕಂಪನಿಯ ಸಹಕಾರದಲ್ಲಿ ಸ್ಥಾಪಿಸಲಾಗಿದೆ.ಅಲ್ಲಿ ಚಿಕಿತ್ಸೆ,ಐಸೋಲೇಷನ್ ನಲ್ಲಿ ಇಡುವ ವ್ಯವಸ್ಥೆ ಕಲ್ಪಿಸಲಾಗಿದೆ ಉಳಿದವರಿಗೆ ಮನೆಯಲ್ಲಿ ಅವಕಾಶವಿದೆ ಎಂದರು.

ಇದೀಗ ಎಷ್ಟು ಮಂದಿಗೆ ಟೆಸ್ಟ್ ನಡೆಸಲಾಗಿದೆ ಎಂಬ ಪ್ರಶ್ನೆಗೆ ಈಗಾಗಲೇ 500,ಕ್ಕೂ ಮಿಕ್ಕಿ ಮಾಡಲಾಗಿದೆ. ಕಂಪನಿಯಲ್ಲಿ ಒಟ್ಟು 2400 ನೌಕರರು ಕೆಲಸದಲ್ಲಿದ್ದು, ಉಳಿದವರಿಗೂ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ನುಡಿದರು.

ಕೊರೊನಾ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳ ಬೇಕು.ಇದೀಗ ಸೋಂಕು ಬಂದವರ ಜತೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಅವರನ್ನು ಐಸೋಲೇಷನ್ ನಲ್ಲಿಡುವ ಕೆಲಸ ಮಾಡಬೇಕು ಎಂದು ಸೂಚಿಸಿದರು.


Spread the love