Home Mangalorean News Kannada News ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ

ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ

Spread the love
RedditLinkedinYoutubeEmailFacebook MessengerTelegramWhatsapp

ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ

ಮಂಗಳೂರು: ಗೂಂಡಾ ಕಾಯ್ದೆಯಡಿ ಮಾದಕ ದ್ರವ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರನನ್ನು ನಗರದ ಪೋಲಿಸರು ಬಂಧಿಸಿದ್ದಾರೆ.

abdul-rahim-goonda-drug-offender

ಬಂಧಿತನನ್ನು ಬಂದರು ನಿವಾಸಿ ಅಬ್ದುಲ್ ರಹೀಮ್ (41) ಎಂದು ಗುರುತಿಸಲಾಗಿದೆ.

image06abdul-rahim-goonda-drug-offender-20161004-006

ಈ ಕುರಿತು ಮಾಹಿತಿ ನೀಡಿದ ನಗರ ಪೋಲಿಸ್ ಕಮೀಷನರ್ ಬಂಧಿತ ಆರೋಪಿ ಅಬ್ದುಲ್ ರಹೀಮ್ ಕಳೆದ ಸುಮಾರು 5 ವರ್ಷಗಳಿಂದ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಅಮಾಯಕ ಕಾಲೇಜು ಹುಡುಗರಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ದ್ರವ್ಯ ಗಾಂಜಾ ಮಾರಾಟ ದಂಧೆಯನ್ನು ನಡೆಸಿಕೊಂಡು ಬಂದಿದ್ದು, ಕಮೀಷನರೇಟ್ ವ್ಯಾಪ್ತಿಯಲ್ಲಿ 8 ಪ್ರಕರಣಗಳು ದಾಖಲಾಗಿವೆ.

ದಾಖಲಾದ ಪ್ರಕರಣಗಳಲ್ಲಿ ಜಾಮೀನು ಪಡೆದು ಯಾವುದೇ ಕಾನೂನು ಕ್ರಮಕ್ಕೂ ಹೆದರದರೆ ಗಾಂಜಾ ಮಾರಾಟ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದು ಇತನನ್ನು ಡ್ರಗ್ ಅಫೇಂಡರ್ ಎಂದು ಪರಿಗಣಿಸಿ ಬಂಧನ ಆದೇಶ ಹೊರಡಿಸಿ ಬಂಧಿಸಿದ್ದು, ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿಡಲಾಗಿದೆ ಎಂದರು.


Spread the love

Exit mobile version