ಗೋಡಂಬಿ ಬೆಳೆಯಿಂದ ಹೆಚ್ಚು ವರಮಾನ: ಡಾ.ಪಿ.ನಾರಾಯಣ ಸ್ವಾಮಿ
ಮಂಗಳೂರು : ಗೋಡಂಬಿ ಬೆಳೆ ಚೆನ್ನಾಗಿ ಬೆಳೆಯತ್ತದೆ, ಸುಲಭದಲ್ಲಿ ಹೆಚ್ಚು ವರಮಾನ ಕೊಡುತ್ತದೆ, ಉತ್ತಮ ಇಳುವರಿ ಕೊಡುತ್ತದೆ. ಇತ್ತಿಚಿನ ದಿನಗಳಲ್ಲಿ ಗೋಡಂಬಿ ಬೆಳೆ ಬೆಳೆಯುವಂತಾಗಿದೆ. ಆದರೆ ಇನ್ನಷ್ಟು ಪ್ರಬಲವಾಗಬೇಕಿದೆ. ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ನಾರಾಯಣ ಸ್ವಾಮಿ ಹೇಳಿದರು.
ನಗರದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ಗೇರು ಬೆಳೆ ಕ್ಷೇತ್ರೋತ್ಸವ-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಾ ಗೋಡಂಬಿ ಬೆಳೆ ಇಂದು ರಾಷ್ಟದ, ರಾಜ್ಯದ ಪ್ರಮುಖ ಬೆಳೆ. ದಕ್ಷಿಣ ಅಮೆರಿಕದ ಬ್ರೆಝಿಲ್ನ ಬೆಳೆ ಇವತ್ತು ನಮ್ಮೊಂದಿಗೆ ಇದೆ. ಗೋಡಂಬಿಯ ವಿಶೇಷ ಎಂದರೆ ಬೆಲೆ ಯಾವತ್ತು ಕಮ್ಮಿ ಆಗಿಲ್ಲ. ಅದರ ಬೆಲೆ ಹೆಚ್ಚಾಗುತ್ತಾ ಹೋಗುತ್ತಿದೆ. ಅತೀ ಹೆಚ್ಚು ರಫ್ತು ಆಗುವ ಬೆಳೆ, 28 ದೇಶಕ್ಕೆ ರಫ್ತು ಆಗುತ್ತಿದ್ದು , ದೇಶಕ್ಕೆ ರೂ. 5169 ಕೋಟಿ ವರಮಾನ ತಂದು ಕೊಡುವ ಬೆಳೆಯಾಗಿದೆ. ವಿದೇಶಗಳಿಗೆ ರಫ್ತ್ತು ಮಾಡಲು ವಿಫುಲ ಅವಕಾಶ ಇದೆ.
ವಿದೇಶಗಳಿಂದ 5 ಸಾವಿರ ಕೋಟಿ ಪ್ರಮಾಣದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವೆ. ನಮ್ಮಲ್ಲಿ ಅನೇಕ ಸಂಸ್ಕರಣಾ ಘಟಕಗಳಿದೆ, ಆದರೆ ಕಚ್ಚಾವಸ್ತುಗಳು ಸಿಗುತ್ತಿಲ್ಲ. ಇಷ್ಟೊಂದು ಅವಕಾಶ ಇದ್ದರು ಗೋಡಂಬಿ ಬೆಳೆಸುವ ಯೋಚನೆ ಬಂದಿಲ್ಲ. 2020 ಕ್ಕೆ 15 ಲಕ್ಷ ಟನ್ ಗೊಡಂಬಿಯ ಅವಶ್ಯಕತೆ ಇದೆ. ಪ್ರಸ್ತುತ 8 ಲಕ್ಷ ಟನ್ ಬೆಳೆಯುತ್ತಿದ್ದೇವೆ. ಇಷ್ಟು ಪ್ರಮಾಣದ ಗೋಡಂಬಿಯನ್ನು ಬೆಳೆಯುವುದು ನಮ್ಮ ಕರ್ತವ್ಯವಾಗಿದೆ. ಬಾಕಿ ಬೆಳೆಗೆ ಹೋಲಿಸಿದರೆ ಮಾರುಕಟ್ಟೆಯ ಸಮಸ್ಯೆ ಇಲ್ಲ. ಉತ್ತಮ ಮಾರುಕಟ್ಟೆ ಇದೆ ಎಂದು ಅವರು ಹೇಳಿದರು.
ಹೆಚ್ಚು ನೀರು ಬಳಸದ ಬೆಳೆ ಇದಾಗಿದೆ. ಹನಿ ನೀರಾವರಿ ಪದ್ದತಿಯಲ್ಲಿ ನೀರುಣಿಸಿದರೆ ಬೇಸಿಗೆ ಕಾಲದಲ್ಲಿಯೂ ಉತ್ತಮ ಇಳುವರಿ ನೀಡುತ್ತದೆ. ಗಿಡಗಳ ಮಧ್ಯದಲ್ಲಿ ಇರುವ ಖಾಲಿ ಜಾಗದಲ್ಲಿ ಅಂತರ ಬೆಳೆಗಳಾದ ಸುವರ್ಣ ಗೆಡ್ಡೆ, ಅರಶಿನ, ಪೊದೆ ಕರಿಮೆಣಸುನ್ನು ಬೆಳೆಯಬಹುದು. ಉತ್ತಮ ವಾದ ಸಸಿಗಳು ಎಲ್ಲಾಕಡೆ ಲಭ್ಯವಿದೆ. ಕೃಷಿ ಮತ್ತು ಸಂಶೋಧನಾ ಕೇಂದ್ರದಲ್ಲಿಯೂ ಲಭ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಸಾಧಕರಾದ ಚಂದ್ರಶೇಖರ ಗಟ್ಟಿ ಕೊಂಡಾಣ (ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕರು, ಬೀರಿ, ಕೋಟೆಕಾರ್), ಎಡ್ವರ್ಡ್ ರೆಬೆಲ್ಲೊ (ರಾಜ್ಯ ಪ್ರಶಸ್ತಿ ವಿಜೇತ ಕೃಷಿಕರು, ತಾಕೋಡೆ, ಮೂಡಬಿದ್ರಿ), ಪಿ.ಬಿ. ಪ್ರಭಾಕರ ರೈ (ಕರ್ನಾಟಕ ರಾಜ್ಯದ ಜೀವಮಾನ ಸಮಗ್ರ ಕೃಷಿ ಪ್ರಶಸ್ತಿ ಕೃಷಿಕರು, ಪೆರಾಜೆ ಸುಳ್ಯ ತಾಲೂಕು), ಹೆನ್ರಿ ಕ್ರಾಸ್ತ (ಕೃಷಿಕರು, ಪೆಡುಮಲೆ, ನೀರುಮಾರ್ಗ, ಮಂಗಳೂರು), ಕಿಶನ್ ಕುಮಾರ್ ಶೆಟ್ಟಿ (ಪ್ರಗತಿಪರ ಗೇರು ಕೃಷಿಕರು, ಕೆಂಚನೂರು, ಕುಂದಾಪುರ) ಇವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ, ಅಧ್ಯಕ್ಷ ಬಿ.ಎಚ್.ಖಾದರ್ ಉಪಸ್ಥಿತರಿದ್ದರು. ಕೃಷಿ ವಸ್ತುಪ್ರದರ್ಶನವನ್ನು ದ.ಕ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಸಂಶೋಧನಾ ನಿರ್ದೇಶಕ ಎಂ.ಕೆ. ನಾಯ್ಕ್ ವಹಿಸಿದರು