ಗೋ ಅಪರಾಧಿಗಳಿಗೆ ಶಿಕ್ಷೆಯೇ ಆಗಿಲ್ಲ : ಪ್ರಬಲ ಗೋ ಕಾನೂನಿಗೆ ಆಗ್ರಹ – ಶರಣ್ ಪಂಪವೆಲ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವಾರು ವರ್ಷಗಳಿಂದ ಗೋವುಗಳ ಕಳ್ಳತನವಾಗುತ್ತಿದೆ, ದಿನಂಪ್ರತಿ ಅಕ್ರಮ ಕಸಾಯಿಖಾನೆಗಳಲ್ಲಿ ನೂರಾರು ಗೋವುಗಳ ವಧೆಗಳಾಗುತ್ತದೆ. ಹಲವಾರು ವರ್ಷಗಳ ಹೋರಾಟದಿಂದಾಗಿ ಸಾವಿರಾರು ಗೋವುಗಳ ರಕ್ಷಣೆಯಾಗಿದೆಯಾದರು ಆ ಗೋವುಗಳ ಕಳ್ಳ ಸಾಗಾಟ ಮಾಡಿದವರಿಗಾಗಲಿ, ಅಕ್ರಮ ಕಸಾಯಿಖಾನೆಯವರಿಗಾಗಲಿ, ಗೋಕಳ್ಳರಿಗಾಗಲಿ ಇದು ವರೆಗೆ ಶಿಕ್ಷೆಯಾದದ್ದು ವರದಿಯಾಗಿಲ್ಲ ಎಂದು ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆರೋಪಿಸಿದ್ದಾರೆ
ಇದಕ್ಕೆಲ್ಲ ಕಾರಣ ಈಗ ಇರುವ ದುರ್ಭಲವಾದ “ಕರ್ನಾಟಕ ಗೋಹತ್ಯೆ ನಿಷೇಧ ಹಾಗು ಜಾನುವಾರು ಸಂರಕ್ಷಣಾ ಕಾಯ್ದೆ 1964 ” ಇದರ ಪ್ರಕಾರ ಗೋವಧೆಗೆ ಇರುವುದು ಕೇವಲ 6 ತಿಂಗಳ ಶಿಕ್ಷೆ ಹಾಗು 1000 ರೂಪಾಯಿ ದಂಡ. ಆರೋಪಿಗಳನ್ನು ಹಿಡಿದು ಕೊಟ್ಟರು ಅವರಿಗೆ ಶಿಕ್ಷೆಯಾಗುತ್ತಿಲ್ಲ, ಗೋರಕ್ಷಕರ ಮೇಲೆ ಮಾತ್ರ ವಿವಿಧ ರೀತಿಯ ಕೇಸು ಧಾಖಲಿಸಲಾಗಿದೆ. ಅಕ್ರಮ ಗೋಸಾಗಾಟದ ವಾಹನ ಎಷ್ಟೇ ಮೊಕದ್ದಮೆ ಇದ್ದರು ಮತ್ತೆ ಮತ್ತೆ ಅದೇ ವಾಹನಗಳಲ್ಲಿ ಅಕ್ರಮ ಗೋಕಳ್ಳ ಸಾಗಾಟವಾಗುತ್ತಲೇ ಇವೆ, ಅದೇ ವ್ಯಕ್ತಿಗಳು ಮತ್ತೆ ಮತ್ತೆ ಅಪರಾಧ ಮಾಡುತ್ತಲೇ ಇದ್ದಾರೆ,
ಅಲ್ಲಲ್ಲಿ ಗೋವುಗಳ ಕಳ್ಳತನವಾಗುತ್ತಲೇ ಇವೆ, ಇತ್ತೀಚಿಗೆ ಪಣಂಬೂರಿನಲ್ಲಿ ಕಳ್ಳರು ಕರುವನ್ನು ಕದ್ದೊಯುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಕಂಡುಬಂದು ದೂರು ದಾಖಲಾಗಿವೆ, ಇತರ ಕಡೆಯೂ ಕೇಳಿ ಬರುತ್ತಿದೆ, ಇದಕ್ಕೆಲ್ಲ ಕಾರಣ ಗೋ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ ಆದುದರಿಂದ ರಾಜ್ಯಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಗೋಹಂತಕರಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷದ ವರೆಗೆ ದಂಡ ವಿಧಿಸುವ ಅಕ್ರಮ ಗೋಸಾಗಾಟಗಾರರಿಗೆ, ಗೋ ಹಿಂಸಕರಿಗೂ 7 ವರ್ಷ ಜೈಲು ಶಿಕ್ಷೆ ಕೊಡುವಂತಹ ಹಾಗು ವಾಹನಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕುವ ಹಾಗು ಅಪರಾಧಿ ಚಾಲಕನಿಗೆ ಶಾಶ್ವತ ಲೈಸೆನ್ಸ್ ರದ್ಧತಿಯೊಂದಿಗೆ ಅಕ್ರಮ ಗೋಸಾಗಾಟಗಾರರಿಗೆ ಕೊಡುವ ಶಿಕ್ಷೆ ವಿಧಿಸುವಂತಹ ಪ್ರಬಲ ಕಾಯ್ದೆಯನ್ನು ಇದೇ ಸೆಪ್ಟೆಂಬರ್ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.