ಗೋ ಸಾಗಾಟಗಾರ, ಮೊಹಮದ್ ಹನೀಫ್ ಮೇಲೆ ಗೂಂಡಾ ಕಾಯ್ದೆಗೆ  ವಿಶ್ವಹಿಂದೂ ಪರಿಷದ್ ಆಗ್ರಹ

Spread the love

ಗೋ ಸಾಗಾಟಗಾರ, ಮೊಹಮದ್ ಹನೀಫ್ ಮೇಲೆ ಗೂಂಡಾ ಕಾಯ್ದೆಗೆ  ವಿಶ್ವಹಿಂದೂ ಪರಿಷದ್ ಆಗ್ರಹ

ಮಂಗಳೂರು: ಕೆಲದಿನಗಳ ಹಿಂದೆ ಕೊಟ್ಟಾರದಲ್ಲಿ ಗೋಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಜೋಕಟ್ಟೆಯ ಮುಹಮ್ಮದ್ ಹನೀಫ್ ಅಂತಾರಾಜ್ಯ ಗೋವು ಕಳ್ಳ ಸಾಗಾಟಗಾರನಾಗಿದ್ದು ಈತನ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಗ್ರಹಿಸಿದೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು, ಇತ್ತೀಚಿಗೆ ಕೊಟ್ಟಾರದಲ್ಲಿ ಗೋ ಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಜೋಕಟ್ಟೆಯ ಮೊಹಮದ್ ಹನೀಫ್ ಎಂಬವನು ಅಂತರರಾಜ್ಯ ಗೋ ಕಳ್ಳ ಸಾಗಾಟಗಾರನಾಗಿದ್ದು, ಅಕ್ರಮವಾಗಿ ಗೋವುಗಳನ್ನು ಹತ್ಯೆಮಾಡಿ ಮಾರಾಟ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ.

ಕಳೆದ ವರ್ಷ ಜೋಕಟ್ಟೆಯ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿ ವಶಪಡಿಸಿದ ಗೋವುಗಳನ್ನು ಈತ ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಿಂದ ಹಿಂಪಡೆದ ಸಂಧರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ, ಕೋಮುಗಲಭೆಗೆ ಪ್ರಚೋದನೆ ನೀಡಿದ್ದ. ಈಗಾಗಲೇ ರಾಜ್ಯದ ಬೇರೆ ಬೇರೆ ಕಡೆ ಪ್ರಕರಣಗಳಿದ್ದು ಬ್ರಹ್ಮವರ, ಸಕಲೇಶಪುರ, ಹಾಸನ, ಚಿಕ್ಕಮಗಳೂರು, ಉಪ್ಪಿನಂಗಡಿ ಮತ್ತು ಪಣಂಬೂರು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದೀಗ ಅಕ್ರಮ ಗೋಸಾಗಾಟದಲ್ಲಿ ಉರ್ವ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಪಣಂಬೂರು ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಇವನ ಮೇಲೆ ಇಷ್ಟು ಕೇಸುಗಳು ಇದ್ದರೂ ಗೋವುಗಳ ಸಾಗಾಟ ನಿರಂತ ಮಾಡುತ್ತಿರುವುದು ಕಂಡುಬಂದಿರುವುದರಿಂದ ಇವನ ಮೇಲೆ ಗೂಂಡಾ ಕಾಯ್ದೆಯನ್ನು ಹಾಕಿ ಕಠಿಣ ಶಿಕ್ಷೆಗೆ ಒಳಪಡಿಸಲು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

ಶುಕ್ರವಾರದ ಹನೀಫ್ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ” ನಾನು ಸೂಕ್ತ ದಾಖಲೆಯನ್ನು ಹೊಂದಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತಿದ್ದೆ ಎಂದು ಹೇಳಿಕೆ ನೀಡಿರುತ್ತಾನೆ, ಕಾನೂನು ಪ್ರಕಾರ ಯಾವುದೇ ಜಾನುವಾರುಗಳನ್ನು ವಾಹನದಲ್ಲಿ ಸಾಗಾಟ ಮಾಡಬೇಕಾದರೆ, 2016 Transport Ammendment Act 11 ನೇ ತಿದ್ದುಪಡಿ ಪ್ರಕಾರ RTO ದಲ್ಲಿ ಜಾನುವಾರು ಸಾಗಾಟದ ವಾಹನ ಎಂದು ದಾಖಲಾಗಿರಬೇಕು, ಮತ್ತು ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಬೇಕಾದರೆ ವಾಹನದಲ್ಲಿ ಸಾಕಷ್ಟು ಜಾಗವಿರಬೇಕು, ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು, ವಾಹನದ ವೇಗ 24KM ಗಂಟೆಗೆ ಮೀರಬಾರದು, ಜಾನುವಾರು ಸಾಗಾಟ ಮಾಡುವಾಗ ಪೊಲೀಸ್ ಠಾಣೆಯಲ್ಲಿ ಪರವಾನಿಗೆ ಪಡೆದಿರಬೇಕು ಮತ್ತು ಸರಕಾರಿ ಪಶು ವೈದ್ಯಾಧಿಕಾರಿಯವರ ಜಾನುವಾರುಗಳು ಸಾಗಾಟ ಯೋಗ್ಯ ಸರ್ಟಿಫಿಕೇಟ್ ನೀಡಬೇಕು. ಇದಾವುದೂ ಧಾಖಲೆಗಳು ಇಲ್ಲ ಎಂದರು.

ಗೋಕಳ್ಳ ಸಾಗಾಣಿಕೆಯ ಜಾಲಕ್ಕೆ ಕಡಿವಾಣ ಹಾಕಲು ರಾಜ್ಯಸರಕಾರಕ್ಕೆ ಆಗ್ರಹ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಜಾನುವಾರುಗಳ ಕಳ್ಳತನವಾಗುತ್ತಿದ್ದು ಇದರ ಹಿಂದೆ ಗೋಕಳ್ಳರ ಬೃಹತ್ ಜಾಲವಿದೆ,ಕದ್ದ ಗೋವುಗಳಿಗೆ ಎಲ್ಲಿಂದಲೋ ಖರೀದಿಸಿದ ಚೀಟಿಗಳನ್ನು ಗೋಕಳ್ಳರು ತಂದು ಕದ್ದ ಜಾನುವಾರುಗಳನ್ನು ಸಕ್ರಮ ಎಂದು ತೋರಿಸುತ್ತಿದ್ದಾರೆ ಇದನ್ನು ತಡೆಯಲು
1) ರಾಜ್ಯವ್ಯಾಪ್ತಿ ಜಾನುವಾರು ಸಾಗಾಟಕ್ಕೆ ಆಪ್ ಮಾಡಬೇಕು
2) ಪ್ರತಿ ಪೊಲೀಸ್ ಠಾಣೆಯಲ್ಲಿ ಗೋವುಗಳ ಕಳ್ಳ ಸಾಗಾಟ ಮತ್ತು ಹತ್ಯೆ ಪತ್ತೆಹಚ್ಚಲು ವಿಶೇಷ ತಂಡ ರಚಿಸಬೇಕು, ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇದರ ಬಗ್ಗೆ ಬೇಹುಗಾರಿಕೆ ನಡೆಸಿ, ತಾಣ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ ನಡೆಯದಂತೆ ಠಾಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು. ತಪಿದಲ್ಲಿ ಆ ಠಾಣಾ ಸಿಬ್ಬಂದಿ/ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳಬೇಕು.
3) ಪೊಲೀಸರು ಮಹಾಜರನ್ನು ನ್ಯಾಯಯುತವಾಗಿ ಕಾನೂನು ತಜ್ಞರ ಸಹಕಾರದೊಂದಿಗೆ ಬರೆಯಬೇಕು.
4) ಕೇಂದ್ರ ಸರಕಾರ ರಚಿಸಿದ ನಿಯಮಾವಳಿಯಂತೆ (2016 Transport Ammendment Act 11 ನೇ ತಿದ್ದುಪಡಿ ಪ್ರಕಾರ) ಜಾನುವಾರುಗಳಿಗೆಂದೇ ತಯಾರಾದ ವಿಶೇಷ ಜಾನುವಾರು ವಾಹನದಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡಬೇಕು, ತಪಿದ್ದಲ್ಲಿ RTO ಅಧಿಕಾರಿಗಳು ವಾಹನವನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕು.
ಈ ರೀತಿ ಗೋಕಳ್ಳತನ, ಅಕ್ರಮ ಗೋಸಾಗಾಟ ಜಾಲವನ್ನು ಭೇದಿಸಿ ಗೋವುಗಳನ್ನು ರಕ್ಷಿಸಬೇಕೆಂದು ರಾಜ್ಯಸರಕಾರಕ್ಕೆ ಆಗ್ರಹಿಸಿದರು.

ಚೀನಾ ನಿರ್ಮಿತ ವಸ್ತುಗಳ ಮಾರಾಟ ಕೈಬಿಡಲು ವ್ಯಾಪಾರಸ್ಥರಿಗೆ ವಿನಂತಿ – ವಿಶ್ವಹಿಂದೂ ಪರಿಷದ್
ಭಾರತ ಮತ್ತು ಚೀನಾ ಕಣಿವೆಯಲ್ಲಿ ದೇಶರಕ್ಷಣೆಯ ಸಂಧರ್ಭದಲ್ಲಿ ಭಾರತೀಯ ಸೈನಿಕರ ಹತ್ಯೆಗೈದ ಚೀನಾದ ಕೃತ್ಯವನ್ನು ವಿಶ್ವಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ. ಕಳೆದ ಹಲವು ದಶಕಗಳಿಂದ ಈ ರೀತಿಯ ದುರಾಕ್ರಮಣದಿಂದಾಗಿ ಸಾವಿರಾರು ಸೈನಿಕರ ಬಲಿದಾನವಾಗಿದೆ.ವಿಶ್ವಹಿಂದೂ ಪರಿಷದ್ ಬಜರಂಗದಳ ಕೆಲವು ವರ್ಷಗಳಿಂದ ಚೀನಾ ಉತ್ಪನ್ನಗಳ ಬಹಿಸ್ಕಾರ ಅಭಿಯಾನವನ್ನು ಮಾಡಿಕೊಂಡು ಬಂದಿರುತ್ತದೆ ಹಲವಾರು ಬಾರಿ ಪ್ರತಿಭಟನೆ, ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಮೊನ್ನೆ ಗ್ಯಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರು ಕಬ್ಬಿಣದ ಮೊಳೆಗಳಿಂದ ಕೂಡಿದ ದೊಣ್ಣೆಯಿಂದ ನಮ್ಮ ಸೈನಿಕರ ಬರ್ಬರ ಹತ್ಯೆ ಮಾಡಿದ್ದು, ಇದಕ್ಕೆ ಪ್ರತ್ಯುತ್ತರ ಕೊಡುವ ಸಮಯ ಬಂದಿದೆ. ಈ ದುಷ್ಕೃತ್ಯಗಳನ್ನು ಎಸಗಿ ದ್ರೋಹ ಎಸಗುವ ಚೀನಾ ದೇಶ ಆರ್ಥಿಕತೆಯು ನಮ್ಮ ದೇಶದ ಮಾರುಕಟ್ಟೆಯನ್ನು ಅವಲಂಬಿಸಿದೆ.ಚೀನಾಕ್ಕೆ ಸರಿಯಾಗಿ ಉತ್ತರ ಕೊಡಬೇಕಾದರೆ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು. ಅದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಚೀನಾ ಉತ್ಪನನಗಳ ಮಾರಾಟಗಾರರಿದ್ದು ತಮ್ಮ ತಮ್ಮ ವ್ಯಾಪಾರ ಮಳಿಗೆಗಳಲ್ಲಿ ಚೀನಾ ಉತ್ಪನ್ನಗಳನ್ನು ಮಾರಾಟ ಮಾಡಬಾರದಾಗಿ ಕೈ ಮುಗಿದು ವಿನಂತಿಸುತ್ತೇವೆ. ಹಾಗೆ ರಾಷ್ಟ್ರಭಕ್ತ ಎಲ್ಲ ನಾಗರೀಕ ಬಂಧುಗಳು ಚೀನಾ ನಿರ್ಮಿತ ಮೊಬೈಲ್ ಫೋನ್, ಮಕ್ಕಳ ಆಟಿಕೆಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಗೃಹ ಉಪಯೋಗಿ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವ ಮೂಲಕ ದೇಶ ಸೈನಿಕರೊಂದಿಗೆ ಕೈಜೋಡಿಸೋಣ, ಮುಂದಿನ ದಿವಸಗಳಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರದ ಜನಜಾಗೃತಿ ಅಭಿಯಾನವನ್ನು ಕೈಗೊಳ್ಳಲಿದ್ದೇವೆ ಎಂದರು.


Spread the love
1 Comment
Inline Feedbacks
View all comments
Siva
4 years ago

The political party that was always was criticizing the previous govt is in power today. Even now these sincere volunteers have to push the govt.? The party in power is not ashamed?
I am proud of these volunteers who have not deterred from their principles no matter who is in power.