Home Mangalorean News Kannada News ಗೌರಿ ಲಂಕೇಶ್ ಮಾನವ ಹಕ್ಕಿಗೆ ಹೋರಾಡಿದ ದಿಟ್ಟ ಮಹಿಳೆ: ಆಸ್ಕರ್ ಫೆರ್ನಾಂಡಿಸ್

ಗೌರಿ ಲಂಕೇಶ್ ಮಾನವ ಹಕ್ಕಿಗೆ ಹೋರಾಡಿದ ದಿಟ್ಟ ಮಹಿಳೆ: ಆಸ್ಕರ್ ಫೆರ್ನಾಂಡಿಸ್

Spread the love

ಗೌರಿ ಲಂಕೇಶ್ ಮಾನವ ಹಕ್ಕಿಗೆ ಹೋರಾಡಿದ ದಿಟ್ಟ ಮಹಿಳೆ: ಆಸ್ಕರ್ ಫೆರ್ನಾಂಡಿಸ್

ಉಡುಪಿ: ಗೌರಿ ಲಂಕೇಶ್ ಅವರು ರಾಜ್ಯದಲ್ಲಿ ಮಾನವ ಹಕ್ಕುಗಳಿಗೆ ಹೋರಾಡಿದ ದಿಟ್ಟ ಮಹಿಳೆ. ಅವರ ಅನಿರೀಕ್ಷಿತ ಸಾವು ಆಘಾತ ತಂದಿದೆ. ಜಾತ್ಯತೀತ ಮೌಲ್ಯಗಳಿಗೆ ಅವರು ರಾಷ್ಟ್ರ ಮಟ್ಟದಲ್ಲಿ ಹೋರಾಟ ಮಾಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

ಮಂಗಳವಾರ ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಕಾಂಗ್ರೆಸ್ ಮಹಿಳಾ ಮೋರ್ಚಾದಿಂದ ನಡೆದ ನುಡುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಕರ್ಮಿ ನಾಗೇಶ್ ಉದ್ಯಾವರ ಮಾತನಾಡಿ, ಮನವತಾವಾದಿಯಾಗಿದ್ದ ಗೌರಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಅವರ ಹತ್ಯೆಗೆ ವೈಚಾರಿಕ ವಿರೋಧವೇ ಕಾರಣ. ಹತ್ಯೆಯನ್ನು ಭಯೋತ್ಪಾದನಾ ಕೃತ್ಯ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಪ್ರತಿಯೊಬ್ಬರ ಹಕ್ಕು. ಇದನ್ನು ಕಸಿಯುವ ಪ್ರಯತ್ನವಾಗುತ್ತಿದೆ. ಗೌರಿ ಚಿಂತನೆಗಳು ಆದರ್ಶಪ್ರಾಯವಾಗಿದ್ದು, ಬಹುಸಂಖ್ಯಾತರನ್ನು ಎದುರು ಹಾಕಿಕೊಂಡ ದಿಟ್ಟ ಮಹಿಳೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಡಾ. ಸುನೀತಾ ಶೆಟ್ಟಿ, ರೋಶನಿ ವೊಲೋವಿರಾ, ಚಂದ್ರಿಕಾ ಶೆಟ್ಟಿ, ಸರಳಾ ಕಾಂಚನ್, ಸರಸು ಬಂಗೇರ, ಮಮತಾ ಶೆಟ್ಟಿ, ಸೆಲಿನಾ ಕರ್ಕಡ, ನಗರಸಭಾ ಉಪಾಧ್ಯಕ್ಷೆ ಸಂಧ್ಯಾ ತಿಲಕ್‍ರಾಜ್, ಸದಸ್ಯ ರಮೇಶ್ ಕಾಂಚನ್, ಗೀತಾವಾಗ್ಲೆ, ಕಾಪು ಪುರಸಭಾ ಸದಸ್ಯೆ ಸುಲೋಚನಾ ಬಂಗೇರ, ಶಾಂತಾಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version