Home Mangalorean News Kannada News ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯಿಂದ ಗ್ಯಾಸ್ ಕಂಪೆನಿಗಳಿಗೆ ಭೇಟಿ

ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯಿಂದ ಗ್ಯಾಸ್ ಕಂಪೆನಿಗಳಿಗೆ ಭೇಟಿ

Spread the love

ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯಿಂದ ಗ್ಯಾಸ್ ಕಂಪೆನಿಗಳಿಗೆ ಭೇಟಿ

ಮಂಗಳೂರು:- ಬಳಕೆದಾರರ ವೇದಿಕೆಗೆ ಬರುವ ದೂರುಗಳನ್ನು ಆಧರಿಸಿ ಅದರ ಇತ್ಯರ್ಥಕ್ಕಾಗಿ ಇಂಡೇನ್, ಹಿಂದೂಸ್ತಾನ್ ಪೆಟ್ರೋಲಿಯಮ್, ಭಾರತ್ ಪೆಟ್ರೋಲಿಯಮ್ ಮೂರೂ ಕಂಪೆನಿಗಳ ಆಡಳಿತ ನಿರ್ದೇಶಕರನ್ನು ಬಳಕೆದಾರರ ನಿಯೋಗ ಭೇಟಿ ಮಾಡಿ ಚರ್ಚಿಸಿತು.

gas-consumer-meeting

ಸಮಯಕ್ಕೆ ಸರಿಯಾಗಿ ಅಡುಗೆ ಅನಿಲ ವಿತರಿಸದೆ ಸತಾಯಿಸುವ ಕಂಪೆನಿಗಳ ಬಗ್ಗೆ ಹಾಗೂ ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ಪಡೆಯುವ ಬಗ್ಗೆ ಗ್ರಾಹಕರು ಲಿಖಿತ ದೂರು ನೀಡಿದ್ದಲ್ಲಿ ಏಜೆನ್ಸಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಭರವಸೆ ನೀಡಿದರು. ಅದೇ ರೀತಿ ಗ್ಯಾಸ್ ಏಜೆನ್ಸಿಗಳ ವಿರುದ್ಧ ಏನಾದರೂ ದೂರುಗಳಿದ್ದಲ್ಲಿ, ವಿತರಕರಿಗೆ ಹೆದರದೆ ಕಂಪೆನಿಯ ಟಾಲ್‍ಫ್ರೀ ನಂಬರ್‍ಗೆ ದೂರು ದಾಖಲಿಸುವಂತೆಯೂ ನಿರ್ದೇಶಕರು ಮಾರ್ಗದರ್ಶನ ನೀಡಿದರು.

ಮಂಗಳಾ ಗ್ಯಾಸ್ ಏಜೆನ್ಸಿಯ ಲೈಸನ್ಸ್ ರದ್ದು ಪಡಿಸುವಂತೆ ಆಗ್ರಹ:- ಅದೂ ಅಲ್ಲದೆ ಹಲವು ಬಾರಿ ಎಚ್ಚರಿಸಿದ ನಂತರವೂ ಗ್ರಾಹಕರಿಗೆ ಅಡುಗೆ ಅನಿಲ ನೀಡಲು ಸತಾಯಿಸುವ ಗ್ರಾಹಕರೊಂದಿಗೆ ಉಡಾಫೆಯೊಂದಿಗೆ ವರ್ತಿಸುವ ಮಂಗಳಾ ಗ್ಯಾಸ್ ಏಜೆನ್ಸಿಯ ಲೈಸನ್ಸ್ ಅನ್ನು ರದ್ದುಪಡಿಸುವಂತೆ ಗ್ಯಾಸ್ ಮತ್ತು ಪಡಿತರ ಬಳೆಕದಾರರ ವೇದಿಕೆ ನಿದೇರ್ಶಕರಿಗೆ ಆಗ್ರಹಿಸಿತು.

ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷ ವಿಶ್ವನಾಥ್ ಕೆ.ಬಿ., ಗೌರವಾಧ್ಯಕ್ಷ ಧರ್ಮೇಂದ್ರ ಕೆ., ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಜಕ್ರಿಬೆಟ್ಟು, ಉಪಾಧ್ಯಕ್ಷರುಗಳಾದ ರೇಖಾ ಬಾಳಿಗಾ, ವಿಷ್ಣುಪ್ರಸಾದ್, ಮುಹ್ಸಿನ್ ಉಪಸ್ಥಿತರಿದ್ದರು.


Spread the love

Exit mobile version