ಚಂದ್ರದರ್ಶನ ಹಿನ್ನೆಲೆ; ಶುಕ್ರವಾರದಿಂದ ಪವಿತ್ರ ರಮಝಾನ್ ಉಪವಾಸ ಆರಂಭ
ಮಂಗಳೂರು/ಉಡುಪಿ: ಪವಿತ್ರ ರಮಝಾನ್ ಮಾಸದ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಶುಕ್ರವಾರದಿಂದ ಉಪವಾಸ ಆರಂಭಗೊಳ್ಳಲಿದೆ.
ಪವಿತ್ರ ರಮಝಾನ್ನ ಪ್ರಥಮ ಚಂದ್ರ ದರ್ಶನವು ಕೇರಳದ ಕಾಪಾಡ್ ನಲ್ಲಿ ಗುರುವಾರ ಆಗಿರುವುದರಿಂದ ಶುಕ್ರವಾರದಿಂದ ರಮಝಾನ್ ಉಪವಾಸ ಆರಂಭ ಎಂದು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಸಂಯುಕ್ತ ಖಾಝಿ ಅಲ್ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ರಮಝಾನ್ ದಲ್ಲಿ ಜಗತ್ತಿನಾದ್ಯಂತ ಮುಸ್ಲಿಮ್ ಸಮುದಾಯ ಉಪವಾಸ ವೃತ, ಪ್ರಾರ್ಥನೆ, ವಿಶೇಷ ಪ್ರಾರ್ಥನೆ, ದಾನ ಮತ್ತಿರ ಧಾರ್ಮಿಕ ಕಾರ್ಯಗಳಲ್ಲಿ ಅತಿ ಹೆಚ್ಚಿನ ಶ್ರದ್ಧಾಭಕ್ತಿಯೊಂದಿಗೆ ಪಾಲ್ಗೊಂಡು ಆಚರಿಸುತ್ತಾರೆ.