Home Mangalorean News Kannada News ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ವಿರೋಧಿಸುತ್ತಿರುವ  ಜನಾರ್ದನ ಪೂಜಾರಿಯನ್ನು ರಾಜಕೀಯಕ್ಕೆ ಕರೆತಂದದ್ದು ನಾನು; ಮೊಯ್ಲಿ

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ವಿರೋಧಿಸುತ್ತಿರುವ  ಜನಾರ್ದನ ಪೂಜಾರಿಯನ್ನು ರಾಜಕೀಯಕ್ಕೆ ಕರೆತಂದದ್ದು ನಾನು; ಮೊಯ್ಲಿ

Spread the love

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಯನ್ನು ವಿರೋಧ ಮಾಡುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ವಿತ್ತ ಸಚಿವ ಜನಾರ್ದನ ಪೂಜಾರಿಯವರನ್ನು ರಾಜಕೀಯಕ್ಕೆ ಕರೆ ತಂದು ಸಂಸದರನ್ನಾಗಿ ಮಾಡಿದ್ದು ನಾನೇ ಎಂದು ಮಾಜಿ ಮುಖ್ಯಮಂತ್ರಿ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಅವರು ಮಂಗಳವಾರ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳಿಗೆ ಎತ್ತಿನಹೊಳೆ ಯೋಜನೆಯ ಕುರಿತು ಪ್ರತಿಕ್ರೀಯೆ ನೀಡಿ ಮಾತನಾಡಿದ ಅವರು ಹೋರಾಟದಿಂದ ಅವರಿಗೆ ಸಂತೋಷವಾದರೆ ಆಗಲಿ, ಆದರೆ ಮತ್ತೊಬ್ಬರ ಸಂತೋಷವನ್ನು ಅಪಹರಿಸುವ ಕೆಲಸ ಮಾಡಬಾರದು. ಅದು ಅಮಾನವೀಯ ಕೆಲಸ. ದೊಡ್ಡ ದೊಡ್ಡ ಯೋಜನೆಗಳಿಗೆ ಹಾಗೂ ಒಳ್ಳೆಯ ಕೆಲಸ ಮಾಡುವಾಗ ಅಡೆತಡೆಗಳು ಆತಂಕಗಳು ವಿರೋಧಗಳು ಸಹಜ. ಆದರೆ ರಾಜಕೀಯ ಮುಖಂಡರು ಇಚ್ಛಾಶಕ್ತಿಯ ಮೂಲಕ ಯೋಜನೆ ಕಾರ್ಯಗತಗೊಳಿಸಬೇಕಿದೆ. ಎತ್ತಿನಹೊಳೆ ಯೋಜನೆಯ ವಿರೋಧಕ್ಕೆ ಕಾರಣಗಳು ಹಲವು ಇವೆ. ರಾಜಕೀಯ ವೈಯುಕ್ತಿಕ, ಸೇಡಿನ ಹಾಗೂ ಅಸೂಯೆ ಇರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ಒಂದೆಡೆ ಕುಡಿಯುವ ನೀರಿಗಾಗಿ ಹೋರಾಟ, ಮತ್ತೊಂದೆಡೆ ಸಮುದ್ರಕ್ಕೆ ನೀರು ಹರಿಸಲು ಹೋರಾಟ ನಡೆಯುತ್ತಿದೆ.

ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಂದು ನಡೆದ ಪ್ರತಿಭಟನೆ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಬಯಲುಸೀಮೆಯ ಜಿಲ್ಲೆಗಳಲ್ಲಿ ಬರಗಾಲ ತಾಂಡವವಾಡುತ್ತಿದ್ದು 1500 ಅಡಿ ಕೊಳವೆ ಬಾವಿ ಕೊರೆದರೂ ಕುಡಿಯಲು ನೀರು ಸಿಗುತ್ತಿಲ್ಲ, ಹೀಗಾಗಿ ಜನ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಕುಡಿಯುವ ನೀರು ಕೊಡುವುದು ಮಾನವೀಯ ಪ್ರಶ್ನೆಯಾಗಿದ್ದು, ಯಾವುದೇ ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುವುದು ಅಮಾನವೀಯ ಎಂದರು.


Spread the love

Exit mobile version