ಚಿನ್ನದ ಸರ ಮತ್ತು ಲ್ಯಾಪ್ ಟಾಪ್ ಕದ್ದ ಆರೋಪಿಯ ಬಂಧನ
ಮಂಗಳೂರು: ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರಿಂದ ಚಿನ್ನ ಹಾಗೂ ಇತರ ವಸ್ತುಗಳನ್ನು ಕದ್ದ ಆರೋಪಿಯನ್ನು ಬರ್ಕೆ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ನಿವಾಸಿ ಸನು ವರ್ಗಿಸ್ ಎಂದು ಗುರುತಿಸಲಾಗಿದೆ.
ಬಂಧಿತನು ಫೆಬ್ರವರಿ 1 ರಂದು ರಾತ್ರಿ ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರ ಚಿನ್ನದ ಕರಿಮಣಿ ಸರ ಮತ್ತು ಲ್ಯಾಪ್ ಟಾಬ್ ಬ್ಯಾಗ್ ಕದ್ದಿದ್ದು, ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಕಲಾಗಿತ್ತು. ಅದರಂತೆ ಪೋಲಿಸರು ಆರೋಪಿಯನ್ನು ಪತ್ತೆ ಹಚ್ಚಿ ಆತನಿಂದ ರೂ 2.5 ಲಕ್ಷ ಮೊತ್ತದ ಚಿನ್ನದ ಕರಿಮಣಿ ಸರ ಮತ್ತು 1.5 ಲಕ್ಷ ಮೊತ್ತದ ಲೆನೋವೊ ಕಂಪೆನಿಯ ಲ್ಯಾಪ್ ಟಾಪ್ ಮತ್ತು ದಾಖಲಾತಿಗಳನ್ನು ಹೊಂದಿದ್ದ ಬ್ಯಾಗನ್ನು ವಶಪಡಿಸಿಕೊಂಡಿದ್ದಾರೆ.