Home Mangalorean News Kannada News ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ ಉದ್ಘಾಟನೆ; ಪ್ರಕರಣ ದಾಖಲು

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ ಉದ್ಘಾಟನೆ; ಪ್ರಕರಣ ದಾಖಲು

Spread the love

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ ಉದ್ಘಾಟನೆ; ಪ್ರಕರಣ ದಾಖಲು

ಮಲ್ಪೆ: ಚುನಾವಣಾ ನೀತಿ ಸಂಹಿತೆಯ ವಿರುದ್ದವಾಗಿ ಕೋಡವೂರು ಬೊಟ್ಟಲು ಎಂಬಲ್ಲಿ ಅಂಗನವಾಡಿ ಉದ್ಘಾಟಿಸಿದ ಕುರಿತು ಚುನಾವಣಾ ಅಧಿಕಾರಿಗಳು 5 ಮಂದಿಯ ವಿರುದ್ದ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆ ಸುದೀರ್ ಕುಮಾರ್, ಸಹಕಾರ ಅಭಿವೃದ್ದಿ ಅಧಿಕಾರಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಉಡುಪಿ ಇವರು ಎಪ್ರಿಲ್ 1 ರಂದು ವಿಧಾನ ಸಭೆ ಚುನಾವಣೆಯ ಪ್ರಯುಕ್ತ ನೀತಿ ಸಂಹಿತೆ ಇರುವುದರಿಂದ ಮಲ್ಪೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ 12:30 ಗಂಟೆಗೆ ಕೊಡವೂರು ಗ್ರಾಮದ ಬೊಟ್ಟಲು ಎಂಬಲ್ಲಿ ಚುನಾವಣಾ ನೀತಿ ಸಂಹಿತೆಯ ವಿರುದ್ದವಾಗಿ ಅಂಗನವಾಡಿ ಕೇಂದ್ರವನ್ನು ಉದ್ದಾಟನೆ ಮಾಡಿರುವುದಾಗಿ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ 12:45 ಗಂಟೆಗೆ ಹೋದಾಗ ಸ್ಥಳದಲ್ಲಿ ಚುನಾವಣೆಯ ನೀತಿ ಸಂಹಿತೆಗೆ ವಿರುದ್ದವಾಗಿ ಅಂಗನವಾಡಿ ಕೇಂದ್ರ ಉದ್ದಾಟಿಸಿರುವುದು ಕಂಡು ಬಂದಿದ್ದು ಈ ಬಗ್ಗೆ ಚುನಾವಣೆ ನೀತಿ ಸಂಹಿತೆಯನ್ನು ಮೀರಿ ಅಂಗನವಾಡಿ ಕೇಂದ್ರ ಉದ್ದಾಟನೆ ಮಾಡಿದ ಕಲ್ಮಾಡಿ ಮಾಜಿ ಪಂಚಾಯತ್ ಸದಸ್ಯರಾದ ಲೀಲಾ ಜತ್ತನ್, ಅಂಗನವಾಡಿ ಕಾರ್ಯಕರ್ತರಾದ ಆಶಾ, ಉದಯ ಕಲಾ ಯುವಕ ಮಂಡಲ ಇದರ ಅಧ್ಯಕ್ಷರು ಮನೋಜ್ ಹಾಗೂ ಸಾಧು ಸಾಲ್ಯಾನ್, ಚಂದ್ರಶೇಖರ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ತಪ್ಪಿತಸ್ಥರ ವಿರುದ್ದ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2018 ಕಲಂ: 123(2), 129(1) 134 ಪ್ರಜಾ ಪ್ರಾತಿನಿಧ್ಯ ಕಾಯಿದೆ 1951 ಮತ್ತು 171 ಸಿ ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love

Exit mobile version