ಚೌಕಿದಾರ್ ಪ್ರಾಮಾಣಿಕರಾಗಿದ್ದಲ್ಲಿ ರಫೇಲ್ ಕಡತ ಕಾಣೆಯಾಗುತ್ತಿರಲಿಲ್ಲ – ಯು.ಟಿ.ಖಾದರ್
ತಾನೋಬ್ಬ ಚೌಕೀದಾರ್ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡ ಮೋದಿಯವರು ತನ್ನ ಆ ಕೆಲಸವನ್ನು ನಿಯತ್ತಾಗಿ ಮಾಡುತ್ತಿದ್ದಲ್ಲಿ ರಫೇಲ್ ಕಡತ ಕಾಣೆಯಾಗುತ್ತಿರಲಿಲ್ಲ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದರು.
ಅವರು ಪುತ್ತೂರಿನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಮಿಥುನ್ ರೈ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ ಮೋದಿಯವರಿಗೆ ಅಧಿಕಾರಕ್ಕೆ ಬರುವ ಮೊದಲು ಹೇಳಿದ್ದ ಮಾತುಗಳು ಭರವಸೆಗಳು ಇಂದು ಯಾವುದೂ ನೆನಪಿಲ್ಲ ಈ ಚುನಾವಣಾ ಸಂದರ್ಭದಲ್ಲಿ ಹೇಳಿದ್ದು ಅವರಿಗೆ ಮುಂದೆಯೂ ನೆನಪಿರಲು ಸಾಧ್ಯವಿಲ್ಲ ಆದ್ದರಿಂದ ಮತದಾರರು ಯೋಚಿಸಿ ಮತ ಚಲಾಯಿಸಬೇಕಾಗಿದೆ ಎಂದರು.
ದೇಶದ ಭದ್ರತೆ ಆಪಾಯ ಒಂದು ಕಡೆಯಾದರೆ ರೈತರ ಕಷ್ಟ ಕೇಳುವವರಿಲ್ಲ. ಕಾರ್ಮಿಕರ ಕಷ್ಟಗಳಿಗೆ ಸ್ಪಂದನೆಯಿಲ್ಲ, ಸರಕಾರಿ ಉದ್ಯೋಗಿಗಳಿಗೆ ಬೆಲೆ ಸಿಗುತ್ತಿಲ್ಲ, ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಇದಕ್ಕೆಲ್ಲಾ ಪರಿಹಾರ ಸಿಗಬೇಕಾದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರು ನಮ್ಮ ಸಂಸದರಾಗಬೇಕು ಆ ಮೂಲಕ ರಾಹುಲ್ ಗಾಂಧಿಯವರು ಪ್ರಧಾನಿಯಾಗಬೇಕು ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ ಬಿ ಸದಾಶಿವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.