ಛಾಯಾಗ್ರಾಹಕರ ಬದುಕೇ ಹೋರಾಟ: ಶಾಸಕ ಕಿರಣ್ ಕುಮಾರ್ ಕೊಡ್ಗಿ
ಕುಂದಾಪುರ: ಛಾಯಾಗ್ರಾಹಕರಿಗೆ ಕಷ್ಟಕಾಲದದಲ್ಲಿ ನೆರವಾಗುವ ಉದ್ದೇಶದಿಂದ ಸ್ಥಾಪನೆಯಾದ ಈ ಸಹಕಾರಿ ಸಂಸ್ಥೆ ನಿಮ್ಮೆಲ್ಲರ ಪರಿಶ್ರಮದಿಂದ ಇಂದು ಈ ಮಟ್ಟಿಗೆ ಬೆಳೆದಿದೆ. ಹಿಂದಿನ ಕಾಲಕ್ಕೂ, ಈಗಿನ ಛಾಯಾಗ್ರಾಹಣ ವೃತ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ತಾಂತ್ರಿಕತೆಯಲ್ಲೂ ಹಲವಾರು ಬದಲಾವಣೆಗಳಾಗಿದ್ದು, ಛಾಯಾಗ್ರಾಹಕರ ಬದುಕೇ ಒಂದು ರೀತಿಯ ಹೋರಾಟ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಸೋಮವಾರ ಇಲ್ಲಿನ ಪುರಸಭೆ ರಸ್ತೆಯ ಗೀತಾಂಜಲಿ ಟಾಕೀಸ್ ಎದುರಿನ ವಿಎಂಕೆ ಟವರ್ಗೆ ಸ್ಥಳಾಂತರಿಸಲಾದ ಕುಂದಾಪುರ ಛಾಯಾಗ್ರಾಹಕರ ವಿವಿದ್ದೋದ್ದೇಶ ಸಹಕಾರಿ ಸಂಘದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ವೃತ್ತಿಜೀವನದ ಅನುದಿನವೂ ಛಾಯಾಗ್ರಾಹಕರ ಒಳಿತನ್ನೇ ಬಯಸಿ ಈ ಭಾಗದಲ್ಲಿ ಛಾಯಾಗ್ರಾಹಕರ ಸಂಘವನ್ನು ಸಂಘಟಿಸಿಕೊಂಡು ಸಂಘದ ಸದಸ್ಯರಿಗೆ ಆರ್ಥಿಕವಾಗಿ ನೆರವಾಗುವ ಸದುದ್ದೇಶದಿಂದ ದಿ. ಅಶೋಕ ಶೆಟ್ಟಿಯವರು ಹುಟ್ಟುಹಾಕಿದ ಈ ಸಹಕಾರಿ ಸಂಸ್ಥೆ ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆ ಕಾಣಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಛಾಯಾಗ್ರಾಹಕರ ವಿವಿಧೋದ್ದೇಶ ಸಹಾಕರಿ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ, ಛಾಯಾಗ್ರಾಹಕರ ಕನಿಷ್ಠ ಅಗತ್ಯತೆಗಳನ್ನು ಈಡೇರಿಸುವ ಉದ್ದೇಶದಿಂದ 5 ವರ್ಷದ ಹಿಂದೆ ಈ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ಇದರ ಹಿಂದೆ ದಿ| ಅಶೋಕ ಶೆಟ್ಟರಂತಹ ಅನೇಕ ಮಂದಿ ಮಹನೀಯರ ಪಾತ್ರವಿದೆ. ಇನ್ನು ನಮ್ಮ ಛಾಯಾಗ್ರಾಹಕರಿಗೆ ಈವರೆಗೆ ಸರಕಾರದಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕಾಗಿದೆ ಎಂದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಎಸ್ಕೆಪಿಎ ದ.ಕ.- ಉಡುಪಿ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಕುಂದಾಪುರ- ಬೈಂದೂರು ವಲಯದ ಅಧ್ಯಕ್ಷ ದಿವಾಕರ ಶೆಟ್ಟಿ, ಮಾಜಿ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಪ್ರ. ಕಾರ್ಯದರ್ಶಿ ದಿನೇಶ್ ರಾಯಪ್ಪನಮಠ, ಸೌತ್ ಕೆನರಾ ಫೆÇೀಟೋಗ್ರಾಫರ್ಸ್ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್, ನಿರ್ದೇಶಕ ಗಣೇಶ್ ಕೆ., ಕಟ್ಟಡದ ಮಾಲಕ ಕೆ. ರಮೇಶ್ ಕಾಮತ್, ಸಹಕಾರಿ ಸಂಘದ ಉಪಾಧ್ಯಕ್ಷ ಗಣೇಶ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ, ನಿರ್ದೇಶಕರಾದ ರಾಘವೇಂದ್ರ ಐತಾಳ್, ಗ್ರೇಶನ್ ಡಯಾಸ್, ಸುಕುಪಾಲ್ ಖಾರ್ವಿ, ಸರಿತಾ, ಪುಂಡಲೀಕ ಶಾನುಭಾಗ್, ಗೋಪಾಲ ಕಾಂಚನ್, ರಾಜ ಮಠದಬೆಟ್ಟು, ಎಸ್. ದಿನೇಶ ಗೋಡೆ, ಶ್ರೀಧರ ಹೆಗ್ಡೆ, ಅನ್ನಪೂರ್ಣ, ದೊಟ್ಟಯ್ಯ ಪೂಜಾರಿ, ದಿ| ಅಶೋಕ ಶೆಟ್ಟಿ ಪತ್ನಿ ಶೀಲಾ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕಿ ಪ್ರೀತಿ ಶೆಟ್ಟಿ ವಂದಿಸಿದರು.