Home Mangalorean News Kannada News ಜನನ ಮತ್ತು ಮರಣ ತಡೆ ನೋಂದಣೆ ತಡೆಯಬೇಕು – ಎ.ಬಿ.ಇಬ್ರಾಹಿಂ

ಜನನ ಮತ್ತು ಮರಣ ತಡೆ ನೋಂದಣೆ ತಡೆಯಬೇಕು – ಎ.ಬಿ.ಇಬ್ರಾಹಿಂ

Spread the love

ಜನನ ಮತ್ತು ಮರಣ ತಡೆ ನೋಂದಣೆ ತಡೆಯಬೇಕು – ಎ.ಬಿ.ಇಬ್ರಾಹಿಂ

ಮ0ಗಳೂರು: ದೇಶದ ಆರ್ಥಿಕಾಭಿವೃದ್ಧಿಗೆ ದೇಶದಲ್ಲಿ ನಡೆಯುವ ಜನನ ಮತ್ತು ಮರಣಗಳ ನಿಖರವಾದ ನೋಂದಣಿ ಅತ್ಯಗತ್ಯ ಆದರೆ ಕೆಲವೊಮ್ಮೆ ವಿನಾಕಾರಣ ನೊಂದಣಿ ಕಾರ್ಯ ತಡವಾಗಿ ಆಗುತ್ತಿದ್ದು ಇದರಿಂದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು, ಸಾಮಜಿಕ ಭದ್ರತಾ ಯೋಜನೆಗಳ ಸೌಲಭ್ಯ ಸಂಚಿಕೆಯಲ್ಲಿ ಸೋರಿಕೆಗಳಾಗುತ್ತಿರುವುದು ಕಂಡು ಬಂದಿದೆ, ಆದ್ದರಿಂದ ದ.ಕ ಜಿಲ್ಲೆಯಲ್ಲಿ ಗಟಿಸುವ ಜನನ ಮರಣಗಳ ನೊಂದಣಿಯನ್ನು ಕ್ಲಪ್ತ ಸಮಯದಲ್ಲಿ ಮಾಡುವಂತೆ ಸಾರ್ವಜನಿಕರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಛೇರಿಯಲ್ಲಿ ಈ ಸಂಬಂಧ ಜರುಗಿದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2015 ರಲ್ಲಿ ಜಿಲ್ಲೆಯಲ್ಲಿ 1132 ಮರಣಗಳು ಮತ್ತು 2720 ಮರಣಗಳು ತಡವಾಗಿ ನೋಂದಣಿಯಾಗಿದ್ದು ಇದು ಶೇ. 7.34 ರಷ್ಟಾಗಿದೆ ಎಂದು ಜಿಲ್ಲಾ ಅಂಖಿ ಸಂಖ್ಯೆ ಸಂಗ್ರಹಣಾಧಿಕಾರಿ ಡಾ: ಉದಯ ಶೆಟ್ಟಿ ತಿಳಿಸಿದರು.
ದ.ಕ ಜಿಲ್ಲೆಯಲ್ಲಿ 2015ರಲ್ಲಿ 37309 ಜನನಗಳು ಮತ್ತು 15422 ಮರಣ ನೊಂದಾಣಿಯಾಗಿದೆ. ಜಿಲ್ಲೆಯಲ್ಲಿ ಕಳೆದ 2011 ರಿಂದ 2015 ರ ಅವಧಿಯಲ್ಲಿ 1,92,782 ಜನನಗಳು ಮತ್ತು 84,779 ಮರಣ ನೊಂದಣಿಯಾಗಿವೆ, ಎಂದು ಡಾ: ಉದಯ್ ಸಭೆಗೆ ತಿಳಿಸಿದರು.
ಜನನ ಮರಣ ಪತ್ರದಲ್ಲಿ ಹೆಸರನ್ನು ಬದಲಾಯಿಸುವುದು ಉಪನಾಮಗಳನ್ನು ತೆಗೆಯುವುದು ಸೇರಿಸುವುದು ಸೇರಿದಂತೆ ಸಾರ್ವಜನಿಕರಲ್ಲಿ ಅನುಮಾನಗಳನ್ನು ಪರಿಹರಿಸಲು ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜನನ ಮರಣಗಳ ನೊಂದಣಿ ಕುರಿತಂತೆ ಯಾವುದೇ ಸಂದೇಹಗಳಿಗೆ ಸಾರ್ವಜನಿಕರು ಜಿಲ್ಲಾ ಅಂಕೆ ಸಂಖೆ ಸಂಗ್ರಹಣಾಧಿಕಾರಿ ಡಾ: ಉದಯಶೆಟ್ಟಿ ಇವರನ್ನು ಖುದ್ದು ಭೇಟಿಯಾಗಿ ಅಥವಾ ದೂರವಾಣಿ ಸಂಖ್ಯೆ: 9480044615 /0824-2459494 ಸಂಪರ್ಕಿಸಿ ಪಡೆಯಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಉಪವಿಭಾಗಾಧಿಕಾರಿಗಳಾದ ಅಶೋಕ್ ಮತ್ತು ರಾಜೇಂದ್ರ, ಸೇರಿದಂತೆ ಇತರರು ಭಾಗವಹಿಸಿದ್ದರು.


Spread the love

Exit mobile version