ಜನರನ್ನು ಕೆರಳಿಸುವ, ಭಯಪಡಿಸುವ ಅಭಿಯಾನ ಬಿಟ್ಟು ಸೌಹಾರ್ದ ಸಮಾಜವನ್ನು ಕಟ್ಟಲು ಬಿಜೆಪಿ ತಯಾರಾಗಲಿ ; ಸುಹೈಲ್ ಕಂದಕ್
ಮಂಗಳೂರು: ಜಿಲ್ಲೆಯಲ್ಲಿ ಬುದ್ದಿವಂತರಿರುವ ಕಾರಣದಿಂದಲೇ ಕಳೆದ ವಿಧಾನ ಸಬಾ ಚುಣಾವಣೆಯಲ್ಲಿ ಬಿಜೆಪಿ ಹಿನಾಯವಾಗಿ ಸೋತು ಹೋಗಿರುವುದು ಹಾಗಾಗಿ ಬುದ್ದಿವಂತರ ಜಿಲ್ಲೆಯಲ್ಲಿ ಬಿಜೆಪಿಯ ರಾಜಕೀಯ ಕುತಂತ್ರಗಳು ಕಪಿಚೇಷ್ಟೆ ಮಾತ್ರವಾಗಿದೆ ಎಂದು ರಾಜ್ಯ ಯುವ ಕಾಂಗ್ರೇಸ್ಸಿನ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹೇಳಿದ್ದಾರೆ.
ಹತ್ಯೆಗಳನ್ನು ರಾಜಕೀಯ ಕ್ಯಾಂಪೇನ್ ಮಾಡುವ ಮತ್ತು ಹಂತಕರ ಪತ್ತೆಯಾಗುವ ಮೊದಲೇ ಅದನ್ನು ಶಾಂತಿ ಕದಡುವ ಅಜೆಂಡಾ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು ಎಂದಿರುವ ಸುಹೈಲ್ ಕಂದಕ್ ಕೋಮುವಾದವು ಎಲ್ಲಾ ಧರ್ಮಿಯ ಜನರಲ್ಲೂ ಆವರಿಸಿರುವುದು ಅಪಾಯಕಾರಿ ಬೆಳವಣಿಗೆ ಎಂದರು.
ಬಿಜೆಪಿ ಬಿತ್ತಿದ ಮತಾಂಧ ಮತ್ತು ಮಾನವ ದ್ವೇಷಿ ವಿಚಾರಗಳು ಇಂದು ನಾಡಿನ ಸೌಹಾರ್ದತೆಗೆ ಮತ್ತು ಸಹಿಷ್ಣುತೆಗೆ ದಕ್ಕೆ ತಂದಿದ್ದು ಅದರ ಫಲವಾಗಿಯೇ ಜಿಲ್ಲೆಯಲ್ಲಿ ಅಗಾಗ ಕೋಮು ಗಲಬೆಗಳು ಮತ್ತು ಉದ್ವಿಗ್ನತೆ ಸೃಷ್ಟಿಯಾಗುತ್ತಿದೆ. ಯಾವುದೇ ಧರ್ಮವು ಮನುಷ್ಯರನ್ನು ದ್ವೇಷಿಸಲು ಮತ್ತು ಹಿಂಸಿಸಲು ಕಲಿಸುವುದಿಲ್ಲ ಆದರೆ ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ಕೆರಳಿಸಿ ಸಮಾಜಘಾತುಕ ಚಟುವಟಿಕೆಗೆ ಪ್ರೇರೇಪಿಸುತ್ತಿದೆ. ಬಿಜೆಪಿ ನಾಯಕರ ಹೇಳಿಕೆಗಳು ಮತ್ತು ಘೋಷಣೆಗಳನ್ನು ಕೇಳಿದಾಗಲೇ ಅವರ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.ದ್ವೇಷ ಮತ್ತು ಹಿಂಸೆಯನ್ನು ಬಿತ್ತಿ ದೇಶ ಕಟ್ಟಲು ಸಾಧ್ಯವಿಲ್ಲ.ಬೆಳೆಯುತ್ತಿರುವ ಮಕ್ಕಳ ಭವಿಷ್ಯಕ್ಕೆ ಸಾಮರಸ್ಯದ ಸಮಾಜದ ನಿರ್ಮಾಣ ನಮ್ಮ ಅಗತ್ಯವಾಗಿದೆ ಎಂದು ಸುಹೈಲ್ ಕಂದಕ್ ಹೇಳಿದ್ದಾರೆ.
ಡಿ ವೀ ಸದಾನಂದ ಗೌಡರು ಇಲ್ಲವೇ ಶೊಭಾ ಕರಂದ್ಲಾಜೆ ದೈರ್ಯವಿದ್ದರೆ ರಮಾನಾಥ ರೈ ಮುಂದೆ ಚುಣಾವಣೆಗೆ ನಿಂತು ಗೆಲ್ಲಲಿ.ಕರಾವಳಿಯ ಸೌಹಾರ್ದ ಪ್ರಿಯ ಜಾತ್ಯಾತೀತ ಜನರು ಕಾಂಗ್ರೇಸ್ಸನ್ನು ಬೆಂಬಲಿಸಿದ್ದಾರೆ. ಅಧಿಕಾರಕ್ಕಾಗಿ ಅಮಾಯಕ ಜನರನ್ನು ಕೆರಳಿಸುವ ಮತ್ತು ಆತಂಕಕ್ಕೀಡು ಮಾಡುವ ಪ್ರಯತ್ನಗಳನ್ನು ಬಿಜೆಪಿ ಕೈ ಬಿಟ್ಟು ಸೌಹಾರ್ಧ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಿದರೆ ಉತ್ತಮ. ಇಲ್ಲವಾದರೆ ಮುಂದಿನ ಚುಣಾವಣೆಯಲ್ಲಿ ಬಿಜೆಪಿ ತನ್ನ ಸಾಂಪ್ರದಾಯಿಕ ಮತವನ್ನು ಉಳಿಸಲು ಹರಸಾಹಸ ಪಡಬೇಕಾದೀತು ಎಂದ ಸುಹೈಲ್ ಕಂದಕ್ ಬಿಜೆಪಿ ಪಕ್ಷದ ನಾಯಕರ ಅಹಂಕಾರ ಮತ್ತು ಭಯ ಹುಟ್ಟಿಸುವ ಹೇಳಿಕೆಗೆ ಇಲ್ಲಿನ ಬುದ್ದಿವಂತ ನಾಗರಿಕರು ಸೊಪ್ಪು ಹಾಕುವುದಿಲ್ಲ.ಜಿಲ್ಲೆಯ ಸಾಮರಸ್ಯ ಕಾಪಾಡಲು ಕಾಂಗ್ರೇಸ್ಸ್ ಪಕ್ಷದ ಸರಕಾರ ಜಿಲ್ಲೆಯ ಪೋಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.