ಜನರಲ್ಲಿ ಭೀತಿ ಸೃಷ್ಟಿಸುತ್ತಿರುವ ಪಿ.ಎಫ್.ಐ ಸಂಘಟನೆ ನಿಷೇಧಿಸಿ: ವಿ.ಎಚ್.ಪಿ.

Spread the love

ಜನರಲ್ಲಿ ಭೀತಿ ಸೃಷ್ಟಿಸುತ್ತಿರುವ ಪಿ.ಎಫ್.ಐ ಸಂಘಟನೆ ನಿಷೇಧಿಸಿ: ವಿ.ಎಚ್.ಪಿ.

ಮಂಗಳೂರು: ಹಿಂದೂ ನಾಯಕರ ಕೊಲೆಗೆ ಕಾರಣವಾಗುತ್ತಿರುವ ಪಿಎಫ್ ಐ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯ ಗುಂಪಿಗೆ ಸೇರಿಸಿ ಶಾಶ್ವತವಾಗಿ ನಿರ್ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶರತ್ ಮಡಿವಾಳ ಹತ್ಯೆಯ ಆರೋಪಿಗಳನ್ನು ಬಂಧಿಸುವಲ್ಲಿ ಕಾರಣದ ಪೋಲಿಸರಿಗೆ ವಿಎಚ್ ಪಿ ಅಭಿನಂಧಿಸುತ್ತದೆ. ಪಿಎಫ್ ಐ ಸ್ಥಳೀಯ ನಾಯಕರು ರಾಷ್ಟ್ರ ಮಟ್ಟದ ಸಂಘಟನೆಯೊಂದಿಗೆ ಈ ಪ್ರಕರಣದಲ್ಲಿ ಕೈಜೋಡಿಸಿದ ಕುರಿತು ಈ ಮೊದಲು ಸುದ್ದಿ ಹಬ್ಬಿತ್ತು. ಸ್ಥಳೀಯ ನಾಯಕರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಲ್ಲಿ ಇನ್ನೂ ಹೆಚ್ಚಿನ ಸಂಗತಿ ಹೊರಬರಲು ಸಾಧ್ಯವಿದೆ ಎಂದರು.

ಈಗಾಗಲೇ ಶರತ್ ಕೊಲೆಯಲ್ಲಿ ಪಿಎಫ್ ಐ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಈ ಸಂಘಟನೆಗಳನ್ನು ನಿಷೇಧಿಸಬೇಕು. ಪಿಎಫ್ ಐ ಸಂಘಟನೆ ಜನರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದು, ಪ್ರಕರಣದಲ್ಲಿ ರಾಜಕೀಯ ವಾಸನೆ ಬರುತ್ತಿದ್ದು ಪೋಲಿಸರೂ ಕೂಡ ಪ್ರಕರಣ ಭೇಧಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸಿದ್ದು, ಒಂದು ವರ್ಗವನ್ನು ಒಲೈಸುವ ಸಲುವಾಗಿ ಸರಕಾರ ಕೂಡ ವಿಳಂಬ ನೀತಿಯನ್ನು ಅನುಸರಿಸಿದೆ ಎಂದರು.


Spread the love