ಜನರ ಸೇವೆಯಷ್ಟೇ ನನ್ನ ಜೀವನದ ಗುರಿ – ಕಿಶೋರ್ ಕುಮಾರ್ ಪುತ್ತೂರು
ಮಂಗಳೂರು: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ವಿಧಾನ ಪರಿಷತ್ ನ ಉಪಚುನಾವಣೆಯ ಜನಪ್ರತಿನಿಧಿಗಳ ಸಮಾವೇಶ ಇಂದು ಬಂಟ್ವಾಳ ದ ಸ್ಪರ್ಶ ಸಭಾಂಗಣದಲ್ಲಿ ನಡೆಯಿತು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಎಂದೂ ಅಧಿಕಾರಕ್ಕಾಗಿ ಆಸೆ ಪಡದ ಸಂಘದ ಶಿಸ್ತಿನ ಸಿಪಾಯಿಗೆ ಪಕ್ಷ ಟಿಕೆಟ್ ನೀಡಿದೆ ಅವರನ್ನು ನಾವೆಲ್ಲರೂ ಸೇರಿಸಿ ಗೆಲ್ಲಿಸಬೇಕು. ಪುತ್ತೂರು ಹಾಗೂ ಉಳ್ಳಾಲದಲ್ಲಿ ನಮ್ಮ ಶಾಸಕರಿಲ್ಲ ಎಂಬ ಕೊರಗನ್ನು ನೀಗಿಸುವ ಶಕ್ತಿ ಕಿಶೋರ್ ಗೆ ಇದೆ ಎಂದರು.
ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡುತ್ತಾ, ನನ್ನ ಸೋದರ ಸಮಾನರೂ, ಮಾರ್ಗದರ್ಶಕರು ಆದ ಕಿಶೋರ್ ಅವರನ್ನ ಗೆಲ್ಲಿಸುವುದರ ಮೂಲಕ ಬಿಜೆಪಿ ಜಾತಿ, ಹಣ ಬಲದ ವ್ಯಕಿಯಲ್ಲ ಸಾಮಾನ್ಯ ಕಾರ್ಯಕರ್ತನ ಕೈಗೂ ಅಧಿಕಾರ ಕೊಡುತ್ತದೆ ಎಂಬುದನ್ನು ನಿರೂಪಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ, ಸವಿತಾ ಸಮಾಜ ಎಂಬ ಸಣ್ಣ ಜಾತಿಗೆ ಸೇರಿದ ಸಂಘಟಕ, ಹೋರಾಟಗಾರನಿಗೆ ಪಕ್ಷ ಟಿಕೆಟ್ ಪಕ್ಷ ಕೊಟ್ಟಿದೆ. ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವುದರ ಮೂಲಕ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಧ್ವನಿಯಾಗುವಂತೆ ಮಾಡಬೇಕು ಎಂದರು.
ಮಾಜಿ ಸಚಿವರಾದ ನಾಗರಾಜ ಶೆಟ್ಟಿ ಮಾತನಾಡುತ್ತಾ, ನಾನು ಸಚಿವನ್ನಾಗಿದ್ದ ಸಮಯದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದಕ್ ಕಿಶೋರ್ ಆ ಸಮಯದಲ್ಲಿ ಹೋರಾಟಗಳಲ್ಲಿ ನನಗೆ ಸಾಥ್ ಕೊಡುತ್ತಿದ್ದರು, ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಮುಂಚೂಣಿಯಲ್ಲಿ ನಿಂತು ಮಾಡುತ್ತಿದ್ದರು ಆ ಋಣ ನನ್ನ ಮೇಲಿದೆ, ಕಿಶೋರ್ ಅತ್ಯಧಿಕ ಮತಗಳಿಂದ ಗೆಲ್ಲಬೇಕು ಎಂದರು.
ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ತಳ ಮಟ್ಟದ ಕಾರ್ಯಕರ್ತನಿಂದ ಹಿಡಿದು ರಾಜ್ಯ ಯುವ ಮೋರ್ಚಾದವರೆಗೆ ಪಕ್ಷ ನನಗೆ ಜವಾಬ್ದಾರಿ ನೀಡಿದೆ, ತಾಯಿ ಸಮಾನವಾದ ಬಿಜೆಪಿ ಪಕ್ಷ, ಕಾರ್ಯಕರ್ತರ, ಜನರ ಸೇವೆಯಷ್ಟೇ ನನ್ನ ಜೀವನದ ಗುರಿ, ನೀವೇ ಅಭ್ಯರ್ಥಿ ಎಂದು ತಿಳಿದು ಕೆಲಸ ಮಾಡಿ ಬಾಜಪಾ ಅಭ್ಯರ್ಥಿಯನ್ನು ಗೆಲ್ಲಿಸುವುದರ ಮೂಲಕ ಪಕ್ಷವನ್ನು ಮತ್ತಷ್ಟು ಬಲ ಪಡಿಸಿ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ,ಚುನಾವಣಾ ನಿರ್ವಹಣಾಜಿಲ್ಲಾ ಸಂಚಾಲಕ ಕ್ಯಾ.ಗಣೇಶ್ ಕಾರ್ಣಿಕ್, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಹಸಂಚಾಲಕ ರಾಕೇಶ್ ರೈ ಕೆಡೆಂಜಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಬಿ.ದೇವದಾಸ್ ಶೆಟ್ಟಿ,ಶಿವಪ್ರಸಾದ್ ಶೆಟ್ಟಿ, ಪ್ರಭಾಕರ ಪ್ರಭು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿದರು. ಚುನಾವಣಾ ನಿರ್ವಹಣಾ ಸಮಿತಿ ಸಹಸಂಚಾಲಕ ಸಂಜೀವ ಪೂಜಾರಿ ವಂದಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.