Home Mangalorean News Kannada News ಜನವರಿ-19 -20: ಅಖಿಲ ಭಾರತ ಸಾರಸ್ವತ ಸಮ್ಮೇಳನ ಮುಂಬಯಿ-2019

ಜನವರಿ-19 -20: ಅಖಿಲ ಭಾರತ ಸಾರಸ್ವತ ಸಮ್ಮೇಳನ ಮುಂಬಯಿ-2019

Spread the love

ಜನವರಿ-19 -20: ಅಖಿಲ ಭಾರತ ಸಾರಸ್ವತ ಸಮ್ಮೇಳನ ಮುಂಬಯಿ-2019

ಉಡುಪಿ: ಅಖಿಲ ಭಾರತ ಸಾರಸ್ವತ ಸಮ್ಮೇಳನ ಜನವರಿ-19 ಮತ್ತು 20 ರಂದು ಮುಂಬಯಿಯಲ್ಲಿ ಜರುಗಲಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಭುವನೇಂದ್ರ ಮಂಟಪದಲ್ಲಿ ಭಾನುವಾರ ದಿ.2-12-2018 ರಂದು ವಿಶ್ವ ಸಾರಸ್ವತ ಸರದಾರ ಶ್ರೀ ಬಸ್ತಿ ವಾಮನ ಶೆಣೈ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಾರಸ್ವತ ಸಮ್ಮೇಳನದ ವ್ಯವಸ್ಥಾಪಕಾ ಸಮಿತಿಯ ಸದಸ್ಯರಾದ ಮಂಗಳೂರಿನ ಸಿ. ಎ. ಶ್ರೀ ನಂದಗೋಪಾಲ ಶೆಣೈ ಮಾತನಾಡುತ್ತಾ ಕೇರಳದಿಂದ ಕಾಶ್ಮೀರದ ವರೆಗೆ ಹಾಗೂ ಜಗತ್ತಿನಾದ್ಯಂತ ವಾಸಿಸಿಕೊಂಡು ಬರುತ್ತಿರುವ ಸಾರಸ್ವತ ಸಮಾಜದ ಎಲ್ಲರನ್ನೂ ಒಂದೆಡೆ ಸೇರಿಸುವ ಉದ್ದೇಶದಿಂದ ಈ ಸಮ್ಮೇಳನವು ಮುಂಬಯಿಯಲ್ಲಿ ಎರಡು ದಿವಸಗಳ ಕಾಲ ನಡೆಯಲಿದೆ. ಸಮ್ಮೇಳನದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾರಸ್ವತ ಸಾಧಕರನ್ನು ಸನ್ಮಾನಿಸಲಾಗುವುದು. ವಿಚಾರಗೋಷ್ಠಿ, ಸಾಹಿತ್ಯಗೋಷ್ಠಿ, ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೆ ಸರ್ವರೂ ಸಹಕಾರ ನೀಡುವಂತೆ ವಿನಂತಿಸಿಕೊಂಡರು.

ಉಡುಪಿ ಹನುಮಾನ್ ಗ್ರೂಪ್ಸ್‍ನ ಸಿ. ಇ. ಒ ಶ್ರೀ ವಿಲಾಸ ನಾಯಕ್ ಸ್ವಾಗತಿಸಿದರು. ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಪಿ. ವಿ. ಶೆಣೈ, ಸಿ. ಎ. ಶ್ರೀ ಸುರೇಂದ್ರ ನಾಯಕ ಹಾಗೂ ಸಮಾಜದ ನೂರಾರು ಗಣ್ಯರು ಉಪಸ್ಥಿತರಿದ್ದರು.


Spread the love

Exit mobile version