ಜನವರಿ 7 ರಂದು ಮುಖ್ಯಮಂತ್ರಿಗಳ ದ.ಕ ಜಿಲ್ಲಾ ಪ್ರವಾಸ

Spread the love

ಜನವರಿ 7 ರಂದುಮುಖ್ಯಮಂತ್ರಿಗಳ ದ.ಕ ಜಿಲ್ಲಾ ಪ್ರವಾಸ
ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜ.7ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಜನವರಿ 7 ರಂದು ಬೆಳಿಗ್ಗೆ 10.40 ಕ್ಕೆ ಹೆಲಿಕಾಪ್ಟರ್ ಮೂಲಕ ಬೆಳ್ತಂಗಡಿ ಸರ್ಕಾರಿ ಜೂನಿಯರ್ ಕಾಲೇಜು ಆವರಣ, ಹೆಲಿಪ್ಯಾಡ್‍ಗೆ ಆಗಮಿಸಿ, ಬಳಿಕ ತಾಲೂಕು ಕ್ರೀಡಾಂಗಣದಲ್ಲಿ  ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 1.05 ಕ್ಕೆ ಪುತ್ತೂರು ತಾಲೂಕಿನ ಮೊಟ್ಟೆತಡ್ಕ ಹೆಲಿಪ್ಯಾಡ್ ತಲುಪುವರು.  ನಂತರ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಸಂಜೆ 4.05 ಕ್ಕೆ ಮೂಡಬಿದರೆ ಮಹಾವೀರ ಕಾಲೇಜು ಮೈದಾನ ಹೆಲಿಪ್ಯಾಡ್ ತಲುಪಲಿದ್ದಾರೆ. ನಂತರ ಸ್ವರಾಜ್ ಮೈದಾನ ಮೂಡಬಿದಿರೆ ಇಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ರಾತ್ರಿ ಸಕ್ರ್ಯೂಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡುವ ಮುಖ್ಯಮಂತ್ರಿಗಳು, ಜ.8ರಂದು ಬೆಳಿಗ್ಗೆ 10 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೈಂದೂರಿಗೆ ತೆರಳಲಿದ್ದಾರೆ.

Spread the love