ಜನಸಾಮಾನ್ಯರೊಡನೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸಿ-ಸಚಿವ ವೆಂಕಟರಾವ್ ನಾಡಗೌಡ

Spread the love

 ಜನಸಾಮಾನ್ಯರೊಡನೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸಿ-ಸಚಿವ ವೆಂಕಟರಾವ್ ನಾಡಗೌಡ

ಮಂಗಳೂರು: ರಾಜ್ಯದ ಪಶು ಸಂಗೋಪನ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಜಾತ್ಯತೀತ ಜನತಾದಳದ ಜಿಲ್ಲಾ ಕಚೇರಿಗೆ ಬೇಟಿ ನೀಡಿ ಪಕ್ಷದ ನಾಯಕರೊಡನೆ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಂಞಿ ಸಚಿವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಸನ್ಮಾನವನ್ನು ಸ್ವೀಕರಿಸಿದ ಸಚಿವರು ಮಾತನಾಡಿ ಪಕ್ಷದ ಕಾರ್ಯಕರ್ತರು ಜನಸಾಮನ್ಯರೊಡನೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಪಕ್ಷದ ಬೆಳವಣಿಗೆಗೆ ಪೂರಕವಾಗಲಿದೆ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಸೋಲನ್ನು ಸಂತೋಷದಿಂದ ಸ್ವೀಕರಿಸಿ ತನ್ನ ಕೆಲಸವನ್ನು ನಿರಂತರವಾಗಿ ಮುಂದುವರಿಸಿದಾಗ ಜನರು ನಮ್ಮನ್ನು ಗುರುತಿಸುತ್ತಾರೆ ಇದು ನನ್ನ ಅನುಭವ. ಮುಂದಿನ ಮಹಾನಗರ ಪಾಲಿಕೆ ಹಾಗೂ ಲೋಕಸಭೆ ಚುನಾವಣೆಗೆ ತಾವು ಸನ್ನದರಾಗಬೇಕೆಂದು ಕರೆಕೊಟ್ಟರು. ಹಾಗೂ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಮಸ್ಯೆಗಳಿದ್ದಾಗ ತಾನು ಸಹಾಯ ಮಾಡಲು ಸದಾ ಸಿದ್ದರಾಗಿದ್ದೇನೆಂದು ಹೇಳಿದರು.

ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಂಞಿಯವರು ಸಚಿವರು ಮೊದಲ ಬಾರಿಗೆ ಜಿಲ್ಲೆಗೆ ಬೇಟಿ ನೀಡಿದಾಗಲೆ ಪಕ್ಷದ ಕಚೇರಿಗೆ ಭೇಟಿ ನೀಡುವುದು ಅವರಿಗೆ ಪಕ್ಷದ ಮೇಲೆಯಿರುವ ಪ್ರೀತಿ ತಿಳಿಯುತ್ತದೆ. ಒಬ್ಬ ಪ್ರಮಾಣಿಕ ಹಾಗೂ ಪ್ರಜ್ಞ್ಯಾವಂತ ಸಚಿವರಾಗಿ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ನೀಡುವುದರಲ್ಲಿ ಸಂಶಯ ವಿಲ್ಲ ಎಂದು ಹೇಳಿದರು.

ಪ್ರವೀಣ್ ಚಂದ್ರ ಜೈನ್ ಸ್ವಾಗತಿಸಿ, ವಸಂತ್ ಪೂಜಾರಿಯವರು ಧನ್ಯವಾದ ಗೈದರು. ಪಕ್ಷದ ನಾಯಕರಾದ ರಾಮ್ ಗಣೇಶ್, ಹೈದರ ಪರ್ತಿಪಾಡಿ, ಸುಶೀಲ್ ನೊರೊನ್ಹ, ಭರತ್ ಶೆಟ್ಟಿ, ಗೊಪಾಲ್ ಕ್ರಷ್ಣ ಅತ್ತಾವರ್, ರಮೇಶ್ ಎಸ್. , ರತ್ನಾಕರ್ ಸುವರ್ಣ, ಅಜೀಜ್ ಕುದ್ರೋಳಿ, ರಮೀಜ ಬಾನು, ಸುಮತಿ ಹೆಗ್ಡೆ, ಅಕ್ಶಿತ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.


Spread the love