ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗ: ಅರ್ಜಿ ಆಹ್ವಾನ

Spread the love

ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗ: ಅರ್ಜಿ ಆಹ್ವಾನ

ಮಂಗಳೂರು: ಜರ್ಮನಿ ಸರಕಾರದ ಮಾನ್ಯತೆ ಪಡೆದಿರುವ ಮೆ.ಟ್ಯಾಲೆಂಟ್ ಆರೆಂಜ್ ಸಂಸ್ಥೆಯಿಂದ ಭಾರತ ದೇಶದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿಎಸ್ಸಿ, ಜಿಎನ್‌ಎಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜರ್ಮನಿಯಲ್ಲಿ ಕೆಲಸ ನಿರ್ವಸಲು ಉತ್ಸುಕರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಕೇರಳದ ತಿರುವನಂತಪುರದಲ್ಲಿ 8 ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಲಿದೆ.

ಸಂಸ್ಥೆಯ ವತಿಯಿಂದ ಊಟದ ವ್ಯವಸ್ಥೆ ಹಾಗೂ ಉಚಿತ ವಸತಿ ಸೌಲಭ್ಯ ನೀಡುವುದಲ್ಲದೆ, ಉಚಿತ ಪ್ರಯಾಣದ ವ್ಯವಸ್ಥೆಯನ್ನು ಒದಗಿಸುವುದಾಗಿ ತಿಳಿಸಿದೆ.

38 ವರ್ಷ ಪ್ರಾಯದೊಳಗಿನ ಹೊಸಬರು ಮತ್ತು ಅನುಭವಿ ಮಹಿಳೆಯರು, ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಬಿಎಸ್ಸಿ (ನರ್ಸಿಂಗ್), ಬಿಎಸ್ಸಿ, ಜಿಎನ್‌ಎಂ ಭಾರತೀಯ ನರ್ಸಿಂಗ್ ಲೈಸನ್ಸ್ ಹೊಂದಿರುವುದು ಕಡ್ಡಾಯ ವಾಗಿದೆ. ಮಹಿಳಾ ಅಭ್ಯರ್ಥಿಗಳು ಚಿಕ್ಕ ಮಕ್ಕಳನ್ನು ಹೊಂದಿದ್ದಲ್ಲಿ, ತಮ್ಮೊಂದಿಗೆ ಕರೆದೊಯ್ಯಲು ಅವಕಾಶರುವುದಿಲ್ಲ ಎಂದು ಕಾರ್ಮಿಕ ಇಲಾಖೆ ಪ್ರಕಟನೆ ತಿಳಿಸಿದೆ.


Spread the love