ಜರ್ಮನಿಯ ಮ್ಯೂನಿಚ್ನಲ್ಲಿ ಬಸ್ರೂರು ಮೂಲದ ದಂಪತಿ ಮೇಲೆ ವಲಸಿಗನಿಂದ ದಾಳಿ
ಹೊಸದಿಲ್ಲಿ: ಜರ್ಮನಿಯ ಮ್ಯೂನಿಚ್ನಲ್ಲಿ ಕುಂದಾಪುರ ಮೂಲದ ದಂಪತಿಯ ಮೇಲೆ ದಾಳಿ ನಡೆದಿದ್ದು, ಪ್ರಶಾಂತ್ ಎಂಬವರು ಮೃತಪಟ್ಟಿದ್ದಾರೆ.
ಶನಿವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ನಲ್ಲಿ ಈ ವಿಚಾರ ತಿಳಿಸಿದ್ದಾರೆ. ವಲಸಿಗನೋರ್ವನಿಂದ ದಾಳಿಗೆ ಒಳಗಾದ ಪ್ರಶಾಂತ್ ಹಾಗೂ ಸ್ಮಿತಾ
ಬಸ್ರೂರು ದಂಪತಿ ತೀವ್ರವಾಗಿ ಗಾಯಗೊಂಡಿದ್ದರು. ದುರದೃಷ್ಟವಷಾತ್ ಪ್ರಶಾಂತ್ ಕೊನೆಯುಸಿರೆಳೆದಿದ್ದು, ಸ್ಮಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಶಾಂತ್ ಅವರ ಸಹೋದರ ಜರ್ಮನಿಗೆ ತೆರಳಲು ಅಗತ್ಯ ಸೌಕರ್ಯಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ದಂಪತಿಯ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವಂತೆ ಮ್ಯೂನಿಷ್ನಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ತಿಳಿಸಲಾಗಿದೆ.
ಆಫ್ರಿಕ ಪ್ರಜೆಯೋರ್ವ ಇದ್ದಕ್ಕಿಂದಂತೆಯೇ ಪ್ರಶಾಂತ್ ಹಾಗೂ ಸ್ಮಿತಾ ಅವರ ಮೇಲೆ ದಾಳಿ ನಡೆಸಿದ್ದಾನೆ. ಪೊಲೀಸರು ಈಗಾಗಲೇ ಆಫ್ರಿಕಾ ಪ್ರಜೆಯನ್ನು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ. ಸ್ಮಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೂ, ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದಾರೆ.
ಮಕ್ಕಳನ್ನು ಜರ್ಮನಿ ಸರಕಾರ ಚೈಲ್ಡ್ ಕೇರ್ನಲ್ಲಿ ಇರಿಸಿದೆ. ಜರ್ಮನಿಗೆ ತೆರಳು ತುರ್ತು ವೀಸಾ ಪಡೆಯುವ ಸಂಬಧ ಪ್ರಕ್ರಿಯೆಗಳು ನಡೆಯುತ್ತಿದೆ. ಸಮಯಕ್ಕೆ ಸರಿಯಾಗಿ ಕೇಂದ್ರ ಸರಕಾರದ ವಿದೇಶಾಂಗ ಕಾರ್ಯಾಲಯ ಸ್ಪಂದಿಸಿರುವುದಕ್ಕೆ ಕೃತಜ್ಞತೆ ಎಂದು ಸ್ಮಿತಾ ಸಂಬಂಧಿ ರೇಷ್ಮಾ ಕುಂದಾಪುರ ಟೈಮ್ಸ್ ಆಫ್ ಇಂಡಿಯಾಕ್ಕೆ ಮಾಹಿತಿ ನೀಡಿದ್ದಾರೆ.