Home Mangalorean News Kannada News ಜವಳಿ ಮಳಿಗೆಗಳನ್ನು ತೆರೆಯದಂತೆ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಜಿಲ್ಲಾಧಿಕಾರಿಗೆ ಮನವಿ

ಜವಳಿ ಮಳಿಗೆಗಳನ್ನು ತೆರೆಯದಂತೆ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಜಿಲ್ಲಾಧಿಕಾರಿಗೆ ಮನವಿ

Spread the love

ಜವಳಿ ಮಳಿಗೆಗಳನ್ನು ತೆರೆಯದಂತೆ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಕೊವಿಡ್ -19 ವೈರಸ್ ಹರಡಲು ಕಾರಣವಾಗಬಲ್ಲ ಜವಳಿ ಮಳಿಗೆಗಳನ್ನು ತೆರೆಯದಂತೆ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಾಂಕ್ರಾಮಿಕ ರೋಗವಾದ ಕೊರೋನ ವೈರಸ್ ಹರಡದಂತೆ ತಡೆಗಟ್ಟಲು ಸರಕಾರ ಆರೋಗ್ಯ ಇಲಾಖೆ ಮತ್ತು ವಕ್ಸ್ ಬೋರ್ಡಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಟ್ಟಿನಲ್ಲಿ ಮಾಜಿ ಶೈಖುನಾ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಸಹಿತ ಉನ್ನತ ಉಲೆಮಾಗಳು ನೀಡಿದ ಆದೇಶದಂತೆ ಪವಿತ್ರ ರಂಜಾನ್ ತಿಂಗಳಲ್ಲೂ ಸಾಮೂಹಿಕ ಆರಾಧನ, ಪವಿತ್ರ ಜುಮಾ ನಮಾಜ್ ಮುಂತಾದ ಧಾರ್ಮಿಕ ಆಚರಣೆಗಳನ್ನು ಮಸೀದಿಯಲ್ಲಿ ಮಾಡುವುದನ್ನು ಮುಸ್ಲಿಂ ಬಾಂಧವರು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

ಪವಿತ್ರ ರಂಝಾನ್ ತಿಂಗಳ ಆರಾಧನೆಯನ್ನು ಮಸೀದಿ ಕೇಂದ್ರೀಕೃತದ ಬದಲಾಗಿ ಮನ ಕೇಂದ್ರೀಕೃತವಾಗಿ ಪರಿವರ್ತಿಸಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವೈರಸ್ ಹರಡದಂತೆ ಎಚ್ಚರಿಕೆಯಿಂದ ಸಹಕರಿಸುತ್ತಿದ್ದಾರೆ, ಕೊವಿಡ್ – 19 ವೈರಸ್ ಹರಡದಂತೆ ಸಾರ್ವಜನಿಕವಾಗಿ ಬೆರೆಯುವುದಕ್ಕೆ ನಿಷೇದವಿರುವ ಈ ಹೊತ್ತಿನಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಜವಳಿ ಮಳಿಗೆಗಳನ್ನು ಕರೆಯಲು ಆದೇಶಿಸಿದ್ದು ನಿಜವಾಗಿಯೂ ವಿಷಾದನೀಯ ಇದರಿಂದ ಖಂಡಿತ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಮುಸ್ಲಿಂ ಸಮುದಾಯದ ಜನರು ಈದ್ ಖರೀದಿಗಾಗಿ ಮನೆಯಿಂದ ಹೊರಬಿದ್ದರೆ ಖಂಡಿತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ ಮತ್ತು ವ್ಯಾಪಾರಸ್ಥರು ಖಂಡಿತ ಈ ಬಗ್ಗೆ ಗಮನ ಹರಿಸುವುದಿಲ್ಲ ಅವರಿಗೆ ಅವರ ವ್ಯಾಪಾರವೇ ಮುಖ್ಯವಾಗಿರುತ್ತದೆ ವಿನಃ ಬೇರೆ ಸಂಗತಿಗಳಲ್ಲ.

ಈ ರೀತಿಯಲ್ಲಿ ಸಾರ್ವಜನಿಕರು ಮುಕ್ತವಾಗಿ ಬೆರೆಯಬಹುದಾದರೆ ಮಸೀದಿಯಲಿ ಸಾಮೂಹಿಕ ಆರಾಧನಾ ಕ್ರಮವನ್ನು ಸರಕಾರ ಏಕೆ ನಿರ್ಭಂದಿಸಬೇಕು ? ಎಂಬ ಪ್ರಶ್ನೆ ಕಾಡಿ ಮುಸ್ಲಿಂ ಸಮುದಾಯ ಸ್ವಯಂ ಪ್ರೇರಿತರಾಗಿ ಮಸೀದಿ ಕೇಂದ್ರಿತ ಸಾಮೂಹಿಕ ಆರಾಧನೆಯಲ್ಲಿ ಪಾಲ್ಗೊಳ್ಳುವುದನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ಕರಾವಳಿ ಜಿಲ್ಲೆಯ ಮುಸ್ಲಿಂ ಬಾಂಧವರು ಈದ್ ಹಬ್ಬವನ್ನು ಸರಳವಾಗಿ ಆಚರಿಸಬೇಕು ಮತ್ತು ವಿಶೇಷವಾಗಿ ಈದ್ ಖರೀದಿಗೆ ಸ್ಪಂದಿಸಬಾರದು ಮತ್ತು ಆ ಹಣವನ್ನು ಇತರ ಸತ್ಕರ್ಮಗಳಿಗೆ ವಿನಿಯೋಗಿಸಬೇಕು ಎಂದು 5 ಮತ್ತು ಕೊವಿಡ್ ಹರಡದಂತೆ ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಮತ್ತು ಕೋವಿಡ್ -19 ಹರಡದಂತೆ ಮುಂಜಾಗ್ರತೆಯಾಗಿ ತೆರೆಯುವುದು ಮನವಿ ಮಾಡಿದೆವು. ಜವಳಿ ಮಳಿಗೆಗಳನ್ನು ರಂಝಾನ್ ನಂತರ ತೆರೆಯುವುದು ಒಳಿತು ಎಂದು ಮನವಿ ಮಾಡಿದ್ದೇವು.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜವಳಿ ಮಳಿಗೆಗಳು ಕಿಕ್ಕಿರಿದು ವ್ಯಾಪಾರವಾದರೆ ಯಾರಿಗಾದರೂ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜವಳಿ ಕಿಕ್ಕಿರಿದು , ಈ ಸಮುದಾಯದ ಮೇಲೆ ಹಾಕುವ ಅಪಾಯ ಇರುವುದರಿಂದ ಸೋಂಕು ತಗುಲಿದರೆ ಅದನ್ನು ಒಂದು ಸಮು ದಯಮಾಡಿ ಕ್ರಮ ಕೈಗೊಳ್ಳಬೇಕಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳಲಾಗಿದ್ದು ಈ ಜಿಲ್ಲೆಗಳ ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿದ್ದು ಇಲ್ಲಿಂದ ಹೋಗುವ ಮತ್ತು ದಕ ಜಿಲ್ಲೆಯಿಂದ ಬರುವ (ರೋಗ ಶಂಕಿತರ ಹೊರತಾಗಿ) ಕ್ಯಾರಂಟೈನ್ ಮಾಡುವುದು ಅಷ್ಟು ಸರಿಯಲ್ಲ ಎಂಬುದನ್ನು ತಾವು ಗಮನಿಸಬೇಕು. ಈ ಬಗ್ಗೆ ಜಿಲ್ಲಾಡಳಿತವು ಕ್ರಮವನ್ನು ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ನಿಯೋಗ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.

ನಿಯೋಗದಲ್ಲಿ ಸುನ್ನಿ ಸಂಯುಕ್ತ ಜಮಾತ್ನ ಅಧ್ಯಕ ಹಾಜಿ ಅಬೂಬಕ್ಕರ್ ನೇಜಾರ್, ಪ್ರಧಾನ ಕಾರ್ಯದರ್ಶಿ ಎಂ ಎ ಬಾವು, ಸಂಘಟನಾ ಕಾರ್ಯದರ್ಶಿ ಕೆ.ಎ. ಅಬುಲ್ ರೆಹಮಾನ್ ರಝ್ವಿ ಕಲ್ಕಟ್ಟ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಜನಾಬ್ ಶಬೀ ಖಾಜಿ, ಉಡುಪಿ ಅಂಜುಮಾನ್ ಮಸೀದಿಯ ಹಿರಿಯ ಮುಖಂಡ ಜನಾಬ್ ಮಹಮ್ಮದ್ ಶೀಷ್, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ, ನ್ಯಾಯಾವಾದಿ ಜನಾಬ್ ಹಬೀದ್ ಆಲಿ, ಕೆ.ಎಂ.ಡಿ.ಸಿ.ಯ ಮಾಜಿ ಅಧ್ಯಕ್ಷ ಎಂ.ಎ. ಗಫೂರ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.


Spread the love

Exit mobile version