Home Mangalorean News Kannada News ಜಾಗತಿಕ ತಾಪಮಾನ ಏರಿಕೆ ಮುಂಜಾಗ್ರತೆ ಅಗತ್ಯ: ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್

ಜಾಗತಿಕ ತಾಪಮಾನ ಏರಿಕೆ ಮುಂಜಾಗ್ರತೆ ಅಗತ್ಯ: ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್

Spread the love

ಜಾಗತಿಕ ತಾಪಮಾನ ಏರಿಕೆ ಮುಂಜಾಗ್ರತೆ ಅಗತ್ಯ: ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್

ಮಂಗಳೂರು : ಇಡೀ ಜಗತ್ತಿನಲ್ಲಿ ತಾಪಮಾನ ಏರಿಕೆ ಅಗುತ್ತಿದ್ದು, ಪ್ರತ್ಯೇಕವಾಗಿ ಕರಾವಳಿ ಪ್ರದೇಶಗಳಲ್ಲಿ ನಮಗೆ ಹೆಚ್ಚಿನ ಅನುಭವ ಅಗುತ್ತಿದೆ ಪರಿಸರ ಮಾಲಿನ್ಯ ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣ. ಈ ಬಗ್ಗೆ ಹಸಿರು ಪರಿಸರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳಾದ ಸಿಂದೂ ಬಿ. ರೂಪೇಶ್ ಕರೆ ಕೊಟ್ಟರು.

ಅವರು ಲಯನ್ಸ್ ಕ್ಲಬ್ ವೆಲೆನ್ಸಿಯಾ ಮಂಗಳೂರು ಮತ್ತು ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣ ವಾಚಕದ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಾಗ್ರತಿ ಶಿಬಿರದಲ್ಲಿ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಲಯನ್ಸ್ 317 ಡಿ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ರವರು ಜಾಗತಿಕ ಮಟ್ಟದಲ್ಲಿ ತಾಪಮಾದ ಏರುಪೇರು ಬಗ್ಗೆ ಮಾಹಿತಿ ನೀಡಿದರೂ ಹಾಗೂ ವಿಧ್ಯಾರ್ಥಿಗಳಿಗೆ ಈ ಬಗ್ಗೆ ಮುಂಜಾಗ್ರತೆ ವಹಿಸಲು ಅಗತ್ಯ ಕ್ರಮಗಳ ಬಗ್ಗೆ ಪ್ರಮಾಣ ವಚನ ಬೋದಿಸಿದರು.

ಲಯನ್ಸ್ ಕ್ಲಬ್ ವೆಲೆನ್ಸಿಯಾ ಅಧ್ಯಕ್ಷರಾದ ಲೆಸ್ಲಿ ಡಿಸೋಜರವರು ಇಂದು ಈ ಕಾರ್ಯಕ್ರಮವು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿದ್ದು ಸುಮಾರು 18,000 ವಿಧ್ಯಾರ್ಥಿಗಳು ಈ ಜಾಗ್ರತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಮಾಲನ್ಯ ನಿಯಂತ್ರಣಾಧಿಕಾರಿ ಜಯ ಪ್ರಕಾಶ ನಾಯ್ಕ್ ಹಾಗೂ ಲಯನ್ಸ್ ಕಾರ್ಯದರ್ಶಿ ಓಸ್ವಲ್ಡ್ ಡಿಕುನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶ್ಯಾಮ ಪ್ರಸಾದ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version