ಜಾರಿ ನಿರ್ದೇಶನಾಲಯದ ಸಹಾಯಕ ಆಯುಕ್ತರಾಗಿ ಡಿಸಿಪಿ ಹನುಮಂತರಾಯ ನೇಮಕ

Spread the love

ಜಾರಿ ನಿರ್ದೇಶನಾಲಯದ ಸಹಾಯಕ ಆಯುಕ್ತರಾಗಿ ಡಿಸಿಪಿ ಹನುಮಂತರಾಯ ನೇಮಕ

ಮಂಗಳೂರು: ಮಂಗಳೂರಿನಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಹನುಮಂತರಾಯ ಅವರು ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯದ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಮಂಗಳೂರಿನಲ್ಲಿ ಅಪರಾಧ ಮತ್ತು ಸಂಚಾರ ವ್ಯವಸ್ಥೆಯ ಡಿಸಿಪಿಯಾಗಿದ್ದ ಹನುಮಂತರಾಯ ಅವರು 2017 ಜೂನ್ 8 ರಂದು ಅಧಿಕಾರ ಸ್ವೀಕರಿಸಿದ್ದರು.

ಹನುಮಂತರಾಯ ಅವರು ರಾಜ್ಯ ಸರಕಾರದ ಸೇವೆಯಿಂದ ಬಿಡುಗಡೆಗೊಂಡು ಕೂಡಲೇ ಕೇಂದ್ರ ಸರಕಾರದ ಸೇವೆಗೆ ವರದಿ ಮಾಡುವಂತೆ ಆದೇಶ ಮಾಡಲಾಗಿದೆ.


Spread the love