Home Mangalorean News Kannada News ಜಿಲ್ಲಾಡಳಿತದಿಂದ ಸೀಲ್ ಡೌನ್ ಜಾರಿಗೊಳಿಸಿರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ:- ಪಡೀಲ್ ಕೊಡಕಲ್ ನಲ್ಲಿ ಶಾಸಕ ಕಾಮತ್

ಜಿಲ್ಲಾಡಳಿತದಿಂದ ಸೀಲ್ ಡೌನ್ ಜಾರಿಗೊಳಿಸಿರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ:- ಪಡೀಲ್ ಕೊಡಕಲ್ ನಲ್ಲಿ ಶಾಸಕ ಕಾಮತ್

Spread the love

ಜಿಲ್ಲಾಡಳಿತದಿಂದ ಸೀಲ್ ಡೌನ್ ಜಾರಿಗೊಳಿಸಿರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ:- ಪಡೀಲ್ ಕೊಡಕಲ್ ನಲ್ಲಿ ಶಾಸಕ ಕಾಮತ್

ಮಂಗಳೂರು: ಸೀಲ್ ಡೌನ್ ಜಾರಿಗೊಳಿಸಿರುವ ಪಡೀಲ್ ಕಣ್ಣೂರು ವಾರ್ಡ್ ಕೊಡಕಲ್ ಭಾಗಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿದರು.

ಈ ಪ್ರದೇಶವನ್ನು ವೈರಾಣು ಹರಡದಂತೆ ಪೂರ್ಣ ಪ್ರಮಾಣದಲ್ಲಿ ಸದ್ಯಕ್ಕೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. ಪರಿಸರದ ಎಲ್ಲಾ ಕಡೆಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಸಾರ್ವಜನಿಕರು ನಿರ್ಭೀತರಾಗಿ ಧೈರ್ಯದಿಂದ ಇರುವಂತೆ ಜಾಗೃತಿ ಮೂಡಿಸಲಾಯಿತು.

ಈ ಭಾಗದ ಎಲ್ಲಾ ಮನೆಗಳಿಗೂ ಅಗತ್ಯ ವಸ್ತುಗಳಾದ ಹಾಲು, ತರಕಾರಿ ಹಾಗೂ ದಿನಸಿ ಸಾಮಾಗ್ರಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಆ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಅತೀ ಅಗತ್ಯವಾಗಿದೆ ಎಂದು ಪರಿಸರದ ನಾಗರಿಕರಲ್ಲಿ ವಿನಂತಿಸಿದರು.

ನಮ್ಮೆಲ್ಲರ ರಕ್ಷಣೆಗಾಗಿ ಸೀಲ್ ಡೌನ್ ಜಾರಿಗೊಳಿಸಲಾಗಿದೆ. ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಿದ್ದಾರೆ. ಸ್ವಯಂ ರಕ್ಷಣಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ, ಹಾಗೂ ಮನೆಯೊಳಗೆ ಇರುವಂತಹ ಕ್ರಮಗಳನ್ನು ಶಿಸ್ತಿನಿಂದ ಪಾಲಿಸಬೇಕು. ತಾವು ಮನೆಯೊಳಗಿದ್ದರೂ ಸ್ವಚ್ಛತೆ ಮತ್ತು ಮನೆಯವರೊಂದಿಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಈಗಾಗಲೇ ಒಂದು ಹಂತದಲ್ಲಿ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದಾಗ ಮತ್ತಷ್ಟು ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುವುದು ಅಲ್ಲದೇ ಮನೆ ಮನೆಗೆ ಆಶಾಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬಂಧಿಗಳು ಬಂದಲ್ಲಿ ಅವರೊಂದಿಗೆ ಸಹಕರಿಸಿ ಎಂದರು.

ಶಾಸಕರೊಂದಿಗೆ ,ಸ್ಥಳಿಯ ಮನಪಾ ಸದಸ್ಯೆ ಚಂದ್ರಾವತಿ ವಿಶ್ವನಾಥ್,ಬಿಜೆಪಿ ಮುಖಂಡರಾದ ವಿಶ್ವನಾಥ್, ಯುವರಾಜ್, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು,ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version