ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಮತ್ತು ವಿಜಯೋತ್ಸವ
ಜಾತ್ಯಾತೀತ ಜನತಾದಳದ ನೈರುತ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೆಗೌಡರು ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಮತ್ತು ವಿಜಯೋತ್ಸವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷರಾದ ವಸಂತ್ ಪೂಜಾರಿ ಮಾತನಾಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಇತರ ಮೂರು ಜಿಲ್ಲೆಗಳಲ್ಲಿ ಬಿಜೆಪಿಯ ಹೆಚ್ಚಿನ ಶಾಸಕರು ಇದ್ದರೂ ಜೆಡಿಎಸ್ ವಿಜಯವು ಚಾರಿತ್ರಿಕ ಗೆಲುವುವಾಗಿದೆ ಹಾಗೂ ಕುಮಾರಸ್ವಾಮಿಗೆ ಶಕ್ತಿಯನ್ನು ತುಂಬಿದೆ ಎಂದು ಹೇಳಿದರು.
ಪಕ್ಷದ ಹಿರಿಯ ನಾಯಕ ಸುಶಿಲ್ ನೊರೊನ್ಹ ಮಾತನಾಡಿ ಈ ಜಿಲ್ಲೆಗೆ ಎರಡು ವಿಧಾನ ಪರಿಷತ್ ಸದಸ್ಯರು ದೊರಕಿದ್ದು ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಲಭಿಸಿದೆ. ಶಿಕ್ಷಕರ ಹಾಗೂ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ ಪಕ್ಷವನ್ನು ಬೆಳೆಸಲು ಗಮನ ಕೊಡಲು ಕರೆ ಕೊಟ್ಟರು.
ಯುವ ಜನತಾದಳ ಅಧ್ಯಕ್ಷರಾದ ಅಕ್ಷಿತ್ ಸುವರ್ಣರವರು ಮಾತಾನಾಡಿ ಪಕ್ಷದ ಹಿರಿಯರು ಹಾಗೂ ಯುವಕರು ಜೊತೆಗೂಡಿ ಮುಂದಿನ ಮಹಾನಗರ ಪಾಲಿಕೆ ಹಾಗೂ ಲೋಕಸಭೆಗೆ ನಮ್ಮ ಅಭ್ಯರ್ಥಿಗಳು ಆಯ್ಕೆ ಆಗುವಂತೆ ಶ್ರಮಿಸಲು ಕರೆ ಕೊಟ್ಟರು.
ಜಿಲ್ಲ್ಲಾಕಾರ್ಯದ್ಯಕ್ಷರಾದ ಶ್ರೀ ರಾಮ್ ಗಣೇಶ್ ಸ್ವಾಗತಿಸಿದರು,ಶ್ರೀ ಗೊಪಾಲ್ ಕ್ರಷ್ಣ ಅತ್ತಾವರ್ ಧನ್ಯವಾದ ಗೈದರು.
ವೇದಿಕೆಯಲ್ಲಿ ಕೊರ್ಪೊರೇಟರ್ ಅಜೀಜ್ ಕುದ್ರೋಳಿ, ಶ್ರೀನಾತ್ ರೈ, ಮೂಡದ ಮಾಜಿ ಅಧ್ಯಕ್ಷ ರಮೇಶ್ ಎಸ್, ರತ್ನಾಕರ್ ಸುವರ್ಣ, ಎನ್ ಪಿ ಪುಶ್ಪರಾಜನ್, ರಾಮಕ್ರಷ್ಣ ಶೆಟ್ಟಿ ಉಪಸ್ಥಿತರಿದ್ದು ಹಮೀದ್ ಬೇಂಗ್ರೆ, ಕನಕದಾಸ್ ಕೂಳೂರ್,ಭಾರತಿ ಪುಷ್ಪರಾಜ್,ವೀಣಾ ಶೆಟ್ಟಿ, ಕವಿತಾ,ರಿತೇಶ್, ಲತೀಫ್ ಬೇಂಗ್ರೆ, ಮುನೀರ್ ಮುಕ್ಕೆಚ್ಚೇರಿ, ಇಜಾ ಬಜಾಲ್, ನಾಗೇಶ್ ಉಪಸ್ಥಿತರಿದ್ದು.
ಯುವ ಜನತಾದಳ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮವನ್ನು ಆಚರಿಸಲಾಯಿತು ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.