ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಆಚರಣೆ
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ 73ನೇ ಸ್ವಾತಂತ್ರೋತ್ಸವ ಆಚರಣೆಯನ್ನು ಆಚರಿಸಲಾಯಿತು. ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ ಧ್ವಜೋರೋಹನ ಗೈದು ಮಾತನಾಡಿ ಭಾರತ ದೇಶದ ಅಭಿವೈದ್ದಿಯಲ್ಲಿ ನಾವೆಲ್ಲರೂ ಜೊತೆಗೂಡಿ ಶ್ರಮಿಸಬೇಕೆಂದು ಹಾಗೂ ದೇಶದ ಸ್ವಾತಂತ್ರಕ್ಕಾಗಿ ದುಡಿದ ಮಹಾನೀಯರನ್ನು ಸ್ಮರಿಸಿದರು.
ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ವಸಂತ ಪೂಜಾರಿ ಮಾತನಾಡಿ ದೇಶದ ಸ್ವಾತಂತ್ರೋಗೋಸ್ಕರ ಮಹಾತ್ಮ ಗಾಂಧಿಜಿಯಿಂದ ಹಿಡಿದು ಸಾವಿರಾರು ಮಹನೀಯರು ಸೆರೆವಾಸ ಅನುಭವಿಸಿದರು. ಅವರ ತ್ಯಾಗದ ಫಲವಾಗಿ ನಾವು ಈ ದೇಶದಲ್ಲಿ ಒಳ್ಳೆಯ ವಾತಾವರಣದಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿದರು. ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಮಾತನಾಡಿ ಭಾರತ ದೇಸವು ಜಗತ್ತಿನಲ್ಲಿ ವಿಶೇಷವಾಗಿ ಗುರುತಿಸಿ ಕೊಂಡಿದ್ದು, ನಮ್ಮಲ್ಲಿ ವಿವಿಧ ಧರ್ಮಗಳ ಸಹ ಬಾಳ್ವೆ ವಿವಿಧ ಭಾಷೆಗಳ ಒಗ್ಗೊಡುವಿಕೆ, ವಿವಿಧ ಸಂಸ್ಕøತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ನಮ್ಮ ದೇಶದ ಜನರು ವಿವಿಧ ದೇಶಗಳ ಮೂಲೆ ಮೂಲೆಗಳಲ್ಲಿ ತಮ್ಮ ಪ್ರತಿಭೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಹಾಗೂ ಉನ್ನತ ಹುದ್ದೆಗಳಲ್ಲಿ ಅಲಂಕರಿಸಿದ್ದಾರೆ. ಇದು ನಮಗೆ ಹೆಮ್ಮೆ ಪಡುವ ಹಾಗೂ ಗೌರವದ ವಿಷಯವಾಗಿದೆ. ವಿಶೇಷವಾಗಿ ನಮ್ಮ ದೇಶದ ರಕ್ಷಣೆ ಗಾಗಿ ಹೊರಾಡುವ ಸೈನಿಕರಿಗೆ ನಾವು ಗೌರವವನ್ನು ಸಲ್ಲಿಸುವ ಈ ದಿನವಾಗಿದೆ ಎಂದು ಹೇಳಿದರು.
ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ಸುಮತಿ ಹೆಗ್ಡೆ ಶುಭಾಶಯವನ್ನು ಕೋರಿದರು. ಪಕ್ಷದ ನಾಯಕರಾದ ರಾಂ ಗಣೇಶ್, ರತ್ನಾಕರ್ ಸುವರ್ಣ, ಗೋಪಾಲಕೃಷ್ಣ ಅತ್ತಾವರ, ಮಧುಸೂದನ್ ಗೌಡ, ಕೊರ್ಪರೇಟರಗಳಾದ ಹಜೀಜ್ ಕುದ್ರೋಳಿ, ರಮಿಜಾಬಾನು ಹಾಗೂ ಮಹಮ್ಮದ್ ಬೆಂಗ್ರೆ, ಫ್ರಾನ್ಸಿಸ್ ಫೆರ್ನಾಂಡಿಸ್, ಲತೀಫ್ ಒಳಚ್ಚಿಲ್, ಇಝಾ ಬಜಾಲ್, ಮುಂತಾದವರು ಉಪಸ್ಥಿತರಿದ್ದರು.