ಜಿಲ್ಲೆಗೆ ಮಾದರಿಯಾದ ಕಿಸ್ಟೋಪರ್ ಹಾಸ್ಟೆಲ್ ನಿವಾಸ – ಅನಿಲ್ ಲೋಬೊ
ಸಂತ ಕ್ರಿಸ್ಟೋಪರ್ ಹಾಸ್ಟೆಲಿನ ದಿನಾಚರಣೆಯ ಕಾರ್ಯಕ್ರಮವನ್ನು ಹಾಸ್ಟೆಲ್ ಸಭಾಂಗಣದಲ್ಲಿ ಎರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಎಂ.ಸಿ.ಸಿ ಬ್ಯಾಂಕಿನ ಅದ್ಯಕ್ಷರಾದ ಅನಿಲ್ ಲೋಬೊರವರು ಸಂಸ್ಥೆಯ ಪರವಾಗಿ ಸನ್ಮಾನವನ್ನು ಸ್ವೀಕರಿಸಿ, ಮಾತಾನಾಡುತ್ತಾ ಇಂದು ಸಮಾಜವು ಬಡವರು, ಶ್ರೀಮಂತರು, ಧರ್ಮ ಜಾತಿ ಎಂಬ ಭಾವನೆಯಲ್ಲಿ ಬೆಳೆಯುತ್ತಾ ಇದೆ. ಆದರೆ 50 ವರುಷ ಇತಿಹಾಸವುಳ್ಳ ಈ ಸಂಸ್ಥೆಯು 37 ವರುಷಗಳಿಂದ ಹಾಸ್ಟೆಲನ್ನು ನಡೆಸುತ್ತಾ ಬಂದಿದ್ದು, ಇಲ್ಲಿಯೂ ಬಡ ಜನರಿಗೆ ಮತ್ತು ಜಾತಿ ಧರ್ಮದ ಭೇದ ಭಾವವಿಲ್ಲದೆ ಜನ ಸಾಮಾನ್ಯರನ್ನು ಉತ್ತಮ ವಾತಾವರಣದಲ್ಲಿ ವಾಸಿಸಲು ಅವಕಾಶವನ್ನು ಕಲ್ಪಿಸುವುದು ಶ್ಲಾಘನೀಯ. ಮಂಗಳೂರಿನ ಹೃದಯ ಭಾಗದಲ್ಲಿ ಇದ್ದು ಇಂತಹ ಸೇವೆಯನ್ನು ನೀಡುವುದು ನಿಜವಾಗಿಯೂ ಸಮಾಜದ ಕೊಡುಗೆ ಎಂದು ಹೇಳಿದರು. ಅಧ್ಯಾತ್ಮಿಕ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾರವರು ಮಾತನಾಡಿ ಈ ಹಾಸ್ಟೆಲಿನಲ್ಲಿ ನೆಲೆಸಿರುವ ನಿವಾಸಿಗಳ ನಗು ಮುಖ ಹಾಗೂ ಅವರ ಸಹ ಭಾಳ್ವೆ ಇದು ನಮಗೆ ತೃಪ್ತಿಯನ್ನು ದೊರೆಕಿಸಿಕೊಟ್ಟಿದೆ ಎಂದು ಹೇಳಿದರು.
ಗೌರವ ಅದ್ಯಕ್ಷ ಸುಶೀಲ್ ನೊರೊನ್ಹ ರವರು ಸಂಸೆÀ್ಥಯು ನಡೆದು ಬಂದ ದಾರಿ ಹಾಗೂ ಸಂಸೆÀ್ಥಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಹಾಸ್ಟೆಲಿನ ನಿವಾಸಿಗಳಾದ ಸುಕುಮಾರ್ ಜೈನ್, ರಾಜೇಶ್ ಡಾಯಸ್, ರೊನಾಲ್ಡ್ ನಜರೇತ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಹಾಸ್ಟೆಲಿನ ವ್ಯವ್ಯಾಸ್ಥಾಪಕರಾದ ಪ್ರವೀಣ್ ಹಾಗೂ ಚಂಚಾಲಾಕ್ಷಿ ರವರನ್ನು ಗೌರವಿಸಲಾಯಿತು. ಶ್ರೀಮತಿ ಲೀನಾ ಡಿಸೋಜ, ಹಾಗೂ ಜೆರಾಲ್ಡ್ ಟಾವರ್ಸ್ ಕಾರ್ಯಕ್ರಮ ನಿರೂಪಿಸಿದರು. ಅದ್ಯಕ್ಷರಾದ ಪ್ರಾನ್ಸಿಸ್ ಡಿಸೋಜ ರವರು ಸ್ವಾಗತಿಸಿ, ಕಾರ್ಯದರ್ಶಿ ನೈಜಿಲ್ ಪಿರೇರಾ ವಂದಿಸಿದರು. ವೇದಿಕೆಯಲ್ಲಿ ಸೆಬೆಸ್ಟಿಯನ್ ನೊರೊನ್ಹಾ ಉಪಸ್ಥಿತರಿದ್ದರು.