ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ; ಗೋ ಮಾಫಿಯಾ ದಂಧೆ ತಡೆಯಲು ವಿಶೇಷ ಕಾರ್ಯಪಡೆ ರಚನೆಗೆ ಆಗ್ರಹ
ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ಮಾಫಿಯಾ ದಂಧೆ ತಡೆಯಲು ವಿಶೇಷ ಕಾರ್ಯಪಡೆ ರಚನೆ ಮಾಡುವಂತೆ ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಗ್ರಹಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಗಳೂರು ಮಹಾನಗರ ಪಾಲಿಕೆಯ ಕುದ್ರೋಳಿ ಕಸಾಯಿಖಾನೆಯನ್ನು ಕೇಂದ್ರೀಕರಿಸಿ ಗೋವಧೆಗಾಗಿ ಅಕ್ರಮ ಗೋಕಳ್ಳಸಾಗಾಟ ನಿರಂತರವಾಗಿ ನಡೆಯುತ್ತಿದೆ. ಕುದ್ರೋಳಿ ಕಸಾಯಿಖಾನೆ ಹಾಗೂ ಜಿಲ್ಲೆಯಾದ್ಯಂತ ಇತರೆಡೆ ಇರುವ ಅಕ್ರಮ ಕಸಾಯಿಖಾನೆಗಳಲ್ಲಿ ಗೋವಧೆ ನಡೆಯುತ್ತಲೇ ಇದೆ. ಹಲವಾರು ವರ್ಷಗಳಿಂದ ಹಲವು ಪ್ರಕರಣಗಳು ನಡೆದರೂ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ, ಗೋಕಳ್ಳತನ ಅಕ್ರಮ ಗೊಸಾಗಾಟ ನಡೆಯುತ್ತಿದೆ.
ಈಗಾಗಲೇ ಕಳೆದ ಒಂದು ತಿಂಗಳಲ್ಲಿ ಮಂಗಳೂರು ನಗರದ ಕೊಣಾಜೆ, ಉಳ್ಳಾಲ, ಕಂಕನಾಡಿ, ಕಾವೂರು, ಮೂದಬಿದ್ರೆ, ಸುರತ್ಕಲ್, ಬeಪೆ, ಬರ್ಕೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಪುತ್ತೂರು ತಾಲೂಕಿನ ಸುಳ್ಯ, ಬೆಳ್ತಂಗಡಿ, ವಿಟ್ಲ, ಸುಬ್ರಹ್ಮಣ್ಯ, ಸಂಪ್ಯ ಪೋಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಅಕ್ರಮ ಗೋ ಸಾಗಾಟಕ್ಕೆ ಇನ್ನೋವ, ಸ್ಕಾರ್ಪಿಯೋ, ಮಾರುತಿ ಸ್ವಿಫ್ಟ್ನಂತಹ ಬೆಳೆಬಾಲುವ ವಾಹನಗಳನ್ನು ಉಪಯೋಗಿಸುತ್ತಿದ್ದಾರೆ. ಇದೊಂದು ಬೃಹತ್ ಗೋ ಮಾಫಿಯವಾಗಿದ್ದು ಇದರ ಹಿಂದೆ ದೊಡ್ದ ದಂಧೆಯು ರಾಜಾರೋಷವಾಗಿ ನಡೆಯುತ್ತಿದೆ. ಇದರ ಹಿಂದೆ ಇರುವ ಕಾಣದ ವ್ಯಕ್ತಿಗಳನ್ನು ಪತ್ತೆಹಚ್ಚಲು ಅಲ್ಲದೆ ಈ ಗೋ ಮಾಫಿಯಾದ ದಂಧೆಯನ್ನು ಮಟ್ಟಹಾಕಲು ಪೆÇಲೀಸ್ ಇಲಾಖೆ ವಿಶೇಷ ಕಾರ್ಯಪಡೆ ರಚನೆ ಮಾಡಬೇಕೆಂದು ವಿಶ್ವ ಹಿಂದು ಪರಿಷತ್ ಆಗ್ರಹಿಸುತ್ತದೆ ಎಂದರು.
ಅಮಾನುಷವಾಗಿ ಗೋವುಗಳನ್ನು ರಸ್ತೆಗೆ ಎಸೆದು ಹಿಂಸೆ: ಕಠಿಣ ಕಾನೂನು ಕ್ರಮ ಕೈಗೊಳ್ಳಿ:
ಅಕ್ಟೋಬರ್ 4 ರಂದು ಬೆಳಿಗ್ಗೆ ನಡೆದ ಘಟನೆಯು ಹಿಂಸಾತ್ಮಕ ಅಕ್ರಮ ಗೋಸಾಗಾಟಕ್ಕೆ ಸಾಕ್ಷಿಯಾಗಿದು ್ದ ಈ ಘಟನೆಯಲ್ಲಿ ಕಾಪಿಕಾಡ್, ಕುಂಟಿಕಾನ, ಕೆನರಾ ಹೈಸ್ಕೂಲ್, ಉರ್ವ ಹಾಗೂ ಮಣ್ಣಗುಡ್ಡೆ ಗುರ್ಜಿ ಸರ್ಕಲ್ ಬಲಿ ಗೋಸಾಗಾಟದ ವಾಹನದಿಂದ ಗೋವುಗಳನ್ನು ರಸ್ತೆಗೆ ಉದ್ದೇಶಪೂರ್ವಕವಾಗಿ ಬಿಸಾಡಿ ವಿಕೃತಿ ಮೆರೆದಿದ್ದಾರೆ. ಈ ರೀತಿ ಅಮಾನುಷವಾಗಿ ನಡೆದ ಕೃತ್ಯದಿಂದಾಗಿ ಹಿಂದುಗಳ ಭಾವನೆಗೆ ನೋವುಂಟಾಗಿದ್ದು ಈ ಕೃತ್ಯ ನಡೆಸಿದ ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಗೋಸಾಗಾಟದ ವಾಹನವನ್ನು ಮುಟ್ಟುಗೋಳು ಹಾಕಬೇಕೆಂದು ಪೋಲೀಸ್ ಇಲಾಖೆಗೆ ಆಗ್ರಹಿಸುತ್ತೇವೆ.
ಆಡು, ಕುರಿ ಮಾಂಸದೊಂದಿಗೆ ದನದ ಕರುವಿನ ಮಾಂಸವನ್ನು ಬೆರೆಸಿ ಮಾರಾಟ? ತನಿಕೆಗೆ ಬೇಡಿಕೆ
ಪ್ರತಿನಿತ್ಯ ಅಕ್ರಮ ಗೋಸಾಗಾಟ ವಾಹನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ದನದ ಕರುಗಳು ಪತ್ತೆಯಾಗುತ್ತಿದ್ದು ಈ ಕರುಗಳ ಮಾಂಸವನ್ನು ಆಡು, ಕುರಿಗಳ ಮಾಂಸದೊಂದಿಗೆ ಬೆರೆಸಿ ಕೆಲವು ಮಾಂಸದ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದ್ಲು ಇದರ ಬಗ್ಗೆ ನಮಗೆ ಸಂಶಯ ವ್ಯಕ್ತವಾಗಿದ್ದು ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಇದನ್ನು ಗಂಭೀರವಾಗಿ ಪರಿಗಣಿಸಿ ತನಿಕೆ ನಡೆಸಿ ಈ ರೀತಿ ನಡೆದಿದ್ದಲ್ಲಿ ಅದನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಂಡು, ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಅವರ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಮನಪಾ ಆಯುಕ್ತರನ್ನು ಆಗ್ರಹಿಸುತ್ತಿದ್ದೇವೆ
ಗೋರಕ್ಷಣೆಗಾಗಿ ರಸ್ತೆಗೆ ಇಳಿಯಲು ಸಿದ್ಧವಾಗಿದೆ ಬಜರಂಗದಳ:- ಜಿಲ್ಲಾಡಳಿತಕ್ಕೆ ಎಚ್ಚರಿಕೆ
ಹಿಂದುಗಳಿಗೆ ಪೂಜನೀಯವಾಗಿರುವ ಗೋಮಾತೆಗೆ ಈ ರೀತಿ ಹಿಂಸೆ ಕೊಡುವುದು ಹಿಂದುಗಳೆಲ್ಲರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದು ಹಿಂದು ಸಮಾಜದ ಆಕ್ರೋಶ ಸ್ಪೋಟಗೊಳ್ಳುವ ಮೊದಲು ಜಿಲ್ಲಾಡಳಿತ ಎಚ್ಚರಗೊಂಡು ಒಂದೇ ಒಂದು ಗೋವುಗಳ ವಧೆಯಾಗಲೀ, ಅಕ್ರಮ ಗೋಸಾಗಾಟವಾಗಲೀ ಜಿಲ್ಲೆಯಲ್ಲಿ ನಡೆಯದಂತೆ ಕಡಿವಾಣ ಹಾಕದಿದ್ದಲ್ಲಿ ಬಜರಂಗದಳವು ಗೋರಕ್ಷಣೆಗೆ ರಸ್ತೆಗೆ ಇಳಿಯಲಿದ್ದು, ಅಕ್ರಮವನ್ನು ತಡೆಯಲಿದೆ. ಮುಂದೆ ಈ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದರು.